Posts

Showing posts from March, 2008
ಪರಸ್ಪರ ಪ್ರೇಮಿಸುತ್ತಿರುವ ಹುಡುಗಿ ಮತ್ತು ಹುಡುಗ ಈಗಲೇ ಮದುವೆ ಆಗುವ ಹಾಗಿಲ್ಲ ; ಯಾಕಂದರೆ ಹುಡುಗ ನಿರುದ್ಯೋಗಿ . ಕೆಲಸಕ್ಕಾಗಿ ಅಲೆಯುತ್ತಿದ್ದಾನೆ . ಅವನಿಗೆ ಕೆಲಸ ಸಿಗೋದು ಯಾವಾಗ ? ತಾವು ಮದುವೆ ಆಗೋದು ಯಾವಾಗ ? ಎಂಬರ್ಥದ ಹಾಡು ’ಮೂರು ಮಹಾನ್ ಸಮಸ್ಯೆಗಳ ಚಿತ್ರಣ’ ಎಂಬ ಜಾಹೀರಾತಿನೊಂದಿಗೆ ಬಂದಿದ್ದ ’ರೋಟಿ ಕಪಡಾ ಔರ್ ಮಕಾನ್’ ಚಿತ್ರದಲ್ಲಿದೆ. ಈ ಹಾಡನ್ನು ಝೀ ಮ್ಯೂಸಿಕ್ ಚಾನೆಲ್ಲಿನಲ್ಲಿ ನೋಡಬಹುದು . ಇಬ್ಬರೂ ಶ್ರಾವಣದ ಮಳೆಯಲ್ಲಿ ನೆನೀತಾ ಇರೋವಾಗ ಅವಳು ಹಾಡುವ ಹಾಡು ಇದು .( ಹಾಯ್ ಹಾಯ್ ಏ ಮಜಬೂರಿ ) ಸಾಕಪ್ಪಾ ಸಾಕು ಈ ಋತುಮಾನ, ಮತ್ತೆ ಈ ದೂರ ನನ್ನನ್ನು ಪ್ರತಿಕ್ಷಣ ಗೋಳಾಡಿಸುತ್ತಿವೆ ನಿನ್ನ ನಾಕು ಕಾಸಿನ ನೌಕರಿ ದಾರಿ ಕಾಯ್ದು ನನ್ನ ಲಕ್ಷಾಂತರದ ಶ್ರಾವಣ ವ್ಯರ್ಥವಾಗುತಿದೆ ಎಷ್ಟು ಶ್ರಾವಣ ಕಳೆದವು , ಆಸೆಯಿಟ್ಟುಕೊಂಡು ಕಾದಿರುವೆ , ನಲ್ಲನು ಒದಗುವ ಶ್ರಾವಣ ಬಂದೀತಾದರೂ ಎಂದು ? ಪ್ರೇಮಬಂಧನ ಎಂಥಾದ್ದು ಅಂದರೆ ಸಿಲುಕಿದರೊಮ್ಮೆ ಬಿಡುಗಡೆಯೇ ಇಲ್ಲ ಎಂದಿಗೂ ; ನಿನ್ನ ನೌಕರಿಯ ಖಾತರಿ ಆದರೂ ಏನು ಇವತ್ತು ಸಿಗಬಹುದು ನಾಳೆ ಕೈತಪ್ಪಬಹುದು !
ಸಾರ್ತ್ರ್‍ ನ ’ಪದಚರಿತ’ - ಓದಿನ ಗೀಳು , ಬರಹದ ಗೋಳು . --------------------------------------------------- ( ಇಲ್ಲಿ ಬರೆದದ್ದೆಲ್ಲವೂ ನಾನು ಬರೆದಿದ್ದಲ್ಲ ; ನಾನು ಆಯ್ದ ವಾಕ್ಯಗಳು ಬಹಳ - ಶ್ರೀಕಾಂತ ಮಿಶ್ರೀಕೋಟಿ) ಪ್ರಸಿದ್ಧ ತತ್ವಶಾಸ್ತ್ರಜ್ಞ , ಚಿಂತಕ, ಕಾದಂಬರಿಕಾರನ ಪ್ರಸಿದ್ಧ ಕೃತಿ ’ಲೆಮೊ’ ದ ಅನುವಾದವೇ ’ಪದಚರಿತ’ . ಇದು ಅವನ ಬಾಲ್ಯದ ’ಆತ್ಮಚರಿತ್ರೆ’ ; ಅವನನ್ನು ಕಾಡಿದ ಬರೆದಿಟ್ಟ ಶಬ್ದಗಳ ಜತೆ ನಡೆಸಿದ ಒಂದು ಸುದೀರ್ಘ ಪ್ರಣಯ ಪ್ರಸಂಗ. ಈ ಪುಸ್ತಕ ಜೀವನಾನುಭವದ ಸಂದರ್ಭದಲ್ಲಿ ಪುಸ್ತಕಗಳ ಮತ್ತು ಭಾಷೆಯ ಉಪಯುಕ್ತತೆ ಮತ್ತು ಉಪಯೋಗದ ಬಗ್ಗೆ ನಡೆಸಿರುವ ವಿಶಿಷ್ಟ ಸಂಶೋಧನೆ ಮತ್ತು ಮೌಲ್ಯಮಾಪನ. ಇದನ್ನು ಅನುವಾದ ಮಾಡಿದವರು ರಾಜಕಾರಣಿ ಕೆ. ಎಚ್. ಶ್ರೀನಿವಾಸರು . ಸುಮಾರು ಮೂರ್ನಾಲ್ಕು ವರ್ಷ ತಮ್ಮ ರಾಜಕಾರಣದ ನಡುವೆ ಶ್ರಮಿಸಿದ್ದಾರೆ . ಪುಸ್ತಕವನ್ನು ಮೂಲದಲ್ಲಿ ಅರ್ಥ ಮಾಡಿಕೊಳ್ಳುವದೇ ಕಷ್ಟ ; ಪುಸ್ತಕ ಅಂತಹದು ; ಅಂಥದ್ದನ್ನು ಕನ್ನಡಕ್ಕೆ ಬಹಳ ಶ್ರಮಪಟ್ಟು ತಂದಿದ್ದಾರೆ . ಸಾರ್ತ್ರ್‍ ತನ್ನ ಐವತೊಂಭತ್ತನೇ ವಯಸ್ಸಿನಲ್ಲಿ ಪುನರ್ ಗ್ರಹಿಸಿದ ಬಾಲ್ಯದ ಕತೆ ಇದು . ಅವನು ಚಿಕ್ಕಂದಿನಲ್ಲಿದ್ದಾಗ ಅವನಿಗೆ ಜಾಣತನ , ಲೇಖಕತನ , ಒಳ್ಳೆಯತನವನ್ನು ಹೊರಿಸಲಾಯಿತು . ಅದರ ವಿವರಗಳು , ಓದು , ಬರಹದ ಗೀಳು , ಗೋಳು ಇಲ್ಲಿದೆ . ಇಲ್ಲಿನ ವಾಕ್ಯಗಳನ್ನು ಅವಸರದಲ್ಲಿ ಓದಿ ತಿಳಿಯಲಾಗುವದಿಲ್ಲ . ಇಲ್ಲಿನ ವಾಕ್ಯಗಳ ರೀತಿಯೇ ಅದ