Posts

Showing posts from June, 2015

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು. ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು ಓದಿದ ಜನರ ಅನಿಸಿಕೆಗಳಿವೆ. ಟಾಂ ಸಾಯರ್ ಸಾಹಸಗಳ ಸಂಗತಿ ಪುಸ್ತಕ ವಿಭಾಗದಲ್ಲಿ ಸಿಕ್ಕಿತು. ಮಹಾತ್ಮಾ ಗಾಂಧಿಯವರ ಕೊನೆಯ ದಿನದ ಸಂಗತಿಗಳು ವಿವರವಾಗಿ ಇಲ್ಲಿ ಬಂದಿವೆ. ಮನುಷ್ಯನಿಗೆ ಸಾವು ಸಮೀಪಿಸಿದಾಗ ಹೇಗೋ ಆತನ ಬಾಯಿಂದ ಸಾವಿನ ಕುರಿತಾದ ಮಾತುಗಳು ಬರುತ್ತವಂತೆ. ಗಾಂಧೀಗಾಗಿ ರಾತ್ರಿ ಬೇಕಾಗುವ ಯಾರೋ ಲವಂಗದ ಪುಡಿಯನ್ನು ಬೆಳಿಗ್ಗೆ ತಯಾರು ಮಾಡುವ ಸಂಬಂಧ - ಗಾಂಧಿಯವರು 'ಈಗ ಏಕೆ ಮಾಡುತ್ತ ಕೂತಿದ್ದಾರೆ? ರಾತ್ರಿ ನಾನೇ ಇರುತ್ತೇನೋ ಇಲ್ಲವೋ ' ಎನ್ನುತ್ತಾರೆ. ಪತ್ರಿಕೆಯಲ್ಲೆಲ್ಲೋ ಗಾಂಧಿಯವರು ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗಲಿದ್ದಾರೆ ಎಂಬ ಸಂಗತಿ ಅಚ್ಚಾಗಿರುತ್ತದೆ, ಅದಕ್ಕೆ ಗಾಂಧಿಯವರು 'ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗುವ ಗಾಂಧಿ ಯಾರೋ? ' ಎಂದು ಪ್ರತಿಕ್ರಿಯಿಸುತ್ತಾರೆ ಎಂಬಂತಹ ಸಂಗತಿಗಳು ಮೈನವಿರೇಳಿಸುತ್ತವೆ. ಬ್ರಿಟಿಷರ ವಿರುದ್ದ ಬಂಡೆದ್ದ ನರಗುಂದ ಬಾಬಾಸಾಹೇಬನು ಗಲ್ಲಿಗೇರಲಿಲ್ಲವಂತೆ. ಈತನ ಹೆಂಡತಿ ಧಾರವಾಡದ ಕಲೆಕ್ಟರನ ಹೆಂಡತಿಯನ್ನು ಹಾವಿನ ಕಡಿತದಿಂದ ಸಾಯುವುದನ್ನು ತಪ್ಪಿಸಿದ್ದಳಂತೆ. ಈತನನ್ನ ಗಲ್ಲಿಗೇರಿಸಬೇಕಾದ ಅಧಿಕಾರಿಯು ಅದೇ ಕ

ಗಾಂಧೀಜಿಯೂ ಈಶೋಪನಿಷತ್ತೂ

ಇತ್ತೀಚೆಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಒಂದು ಮಹಾತ್ಮಾಗಾಂಧೀಯವರ ಪುಸ್ತಕ-"ಜೀವನ ಶಿಕ್ಷಣ"ವನ್ನು ಓದುತ್ತಿದ್ದೆ. ಪ್ರಾರಂಭದಲ್ಲಿ ಅವರ ಕೆಲವು ಅನಿಸಿಕೆ/ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು ಗಮನಿಸುವಂತಹವು , ಕೆಲವು ಮತ್ತೆ ಮತ್ತೆ ಮೆಲುಕು ಹಾಕುವಂತಹವು, ನನಗಾಗಿ ಸಂಗ್ರಹಿಸಿಕೊಂಡ ಅವನ್ನು ನಿಮಗಾಗಿ ಇಲ್ಲಿ ಕುಟ್ಟಿದ್ದೇನೆ ( ಅಷ್ಟೇ ಅಲ್ಲ , ಈಶೋಪನಿಷತ್ತಿನ ಬಗ್ಗೆ ಅವರ ಒಂದು ಹೇಳಿಕೆಯಿಂದಾಗಿ ಈಶೋಪನಿಷತ್ತನ್ನು ತಿರುವಿ ಹಾಕಿದ ಬಗ್ಗೆಯೂ ಮುಂದಕ್ಕೆ ಬರೆದಿದ್ದೇನೆ). --ನಾನೊಬ್ಬ ಸತ್ಯಶೋಧಕ, ಅದಕ್ಕೊಂದು ಮಾರ್ಗವನ್ನು ಕಂಡುಹಿಡಿದಿದ್ದೇನೆ ಎಂದು ನನ್ನ ವಿಶ್ವಾಸ. ಅದರ ಸಿದ್ಧಿಗಾಗಿ ನಾನ್ನು ನಿರಂತರ ಪ್ರಯತ್ನಶೀಲನಾಗಿದ್ದೇನೆ ಎಂಬುದು ನನ್ನ ನಂಬಿಕೆ. ...... ನನ್ನ ನ್ಯೂನತೆಗಳು ಎಷ್ಟೆಂಬುದನ್ನು ನಾನು ವ್ಯಸನದಿಂದ ಅರಿತಿದ್ದೇನೆ. ಆ ಅರಿವು ನನಗೆ ದುಃಖ ತರುವಷ್ಟಿದೆ. ಆ ಅರಿವೇ ನನ್ನ ಸರ್ವಶಕ್ತಿಯ ಮೂಲ; ಏಕೆಂದರೆ ತನ್ನ ದೌರ್ಬಲ್ಯಗಳ ಅರಿವಾಗುವುದೇ ಮಾನವನಿಗೆ ಒಂದು ಅಪೂರ್ವ ಬಲ. --ದಾರಿ ನನಗೆ ಗೊತ್ತು. ಅದು ನೇರ ಮತ್ತು ಇಕ್ಕಟ್ಟು -ಕತ್ತಿಯ ಅಲಗಿನಂತೆ. ಅದರ ಮೇಲೆ ನಡೆವುದೆಂದರೆ(*) ನನಗೆ ಉಲ್ಲಾಸ, ಜಾರಿದಾಗಲೆಲ್ಲ ಕಣ್ಣೀರಿಡುತ್ತೇನೆ. ....ನನ್ನ ದೌರ್ಬಲ್ಯದ ಪರಿಣಾಮವಾಗಿ ಸಾವಿರ ಬಾರಿ ಸೋತರೂ ನಾನು ಎಂದಿಗೂ ಶೃದ್ಧೆಗೆಡುವುದಿಲ್ಲ. --ಸತ್ಯವೇ ಭಗವಂತನು , ನನ್ನ ಪಾಲಿಗೆ ಭಗವ

ASCII ಫಾಂಟ್ ನಲ್ಲಿರುವ ಕನ್ನಡವನ್ನು ಓದಲು ಆಗುತ್ತಿಲ್ಲವೇ ?

ನಾನು ನನ್ನ ಪರ್ಸನಲ್ ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು ಬರಹವನ್ನೋ ನುಡಿಯನ್ನೋ ಅಥವಾ ಮತ್ತಾವುದನ್ನೋ ಬಳಸಿ ಬರೆದವಾದಲ್ಲಿ ಓದಲೇ ಆಗುತ್ತಿರಲಿಲ್ಲ . ಬಹುಶಃ ವಿಂಡೋಸ್ ನಲ್ಲಿ ಕೂಡ ಸಂಬಂಧಪಟ್ಟ ಫಾಂಟ್ ಇಲ್ಲದಿದ್ದರೆ ಅಲ್ಲೂ ಕಾಣಿಸಲಿಕ್ಕಿಲ್ಲ. ಅಂಥ ಸಮಯದಲ್ಲಿ ಇವತ್ತು ಗೂಗಲ್ ನಲ್ಲಿ ಹುಡುಕಿದಾಗ ಸಿಕ್ಕ ಕೊಂಡಿ ಇದು. http://aravindavk.in/ascii2unicode/ ಆ ಪುಟದಲ್ಲಿ ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು ಸಹಾಯ ಮಾಡುವ ತಂತ್ರಾಂಶ ಇದೆ. ಎಡಗಡೆ ಇರುವ ಜಾಗದಲ್ಲಿ ನುಡಿ/ಬರಹ ದಲ್ಲಿ ಬರೆದ ಪಠ್ಯವನ್ನು ಹಾಕಿ ನಂತರ ಕನ್ವರ್ಟ್ ಅಂತ ಇರುವ ಬಟನ್ ಒತ್ತಿ. ಪಕ್ಕದ ಜಾಗದಲ್ಲಿ ಯುನಿಕೋಡ್ ಗೆ ಬದಲಾವಣೆಗೊಂಡು ಕಾಣಿಸುತ್ತದೆ. ಅರವಿಂದರಿಗೆ ತುಂಬಾಆಆಆಆಆಆಆ ಧನ್ಯವಾದಗಳು.

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"

೧೯೩೨ ರಲ್ಲಿ ಅಚ್ಚಾದ ಒಂದು ಪತ್ತೇದಾರಿ ನೀಳ್ಗತೆಯೊಂದನ್ನು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ ಇಳಿಸಿಕೊಂಡು ಓದಿದೆ. ಅದರ ಹೆಸರು - ಎರಡೆರಡು ಹೆಸರು ಕೊಡುವ ಹಳೆಯ ವಾಡಿಕೆಯಂತೆ - "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !" ಧಾರವಾಡದ ಬಳಿಯ ಆನಂದವನ, ಅಗಡಿಯ ಶ್ರೀ ಶೇಷಾಚಲ ಪ್ರೆಸ್ಸ್ ಮತ್ತು ಗ್ರಂಥಮಾಲೆಯ ಪ್ರಕಟಣೆ ಇದು. ಕನ್ನಡ, ದೇವನಾಗರೀ, ರೋಮನ್ ಲಿಪಿಗಳಲ್ಲಿ ಪ್ರಕಾಶನ ಸಂಶೆಯ ಹೆಸರನ್ನು ಬರೆದಿದ್ದಾರೆ . ಅಡಿಯಲ್ಲಿ - ಮರಾಠಿಯಲ್ಲಿ ' ಹೇ ಪುಸ್ತಕ ಬಿ.ಪ.ಕಾಳೆ , ಯಾನೀ ಅನಂದವನ-ಅಗಡಿ ಯೇಥೀಲ ಆಪಲ್ಯಾ ಶ್ರೀ ಶೇಷಾಚಲ ಛಾಪಖಾನ್ಯಾತ ಛಾಪಿಲೆ' ಅಂತ ಮರಾಠಿ-ದೇವನಾಗರಿಯಲ್ಲಿ ಮುದ್ರಿಸಿದ್ದಾರೆ! ಇದು ಸದ್ಬೋಧಚಂದ್ರಿಕೆಯ 'ಆಷಾಢ ಶಕೆ ೧೮೫೪, july 1932'ರ ನಾಲ್ಕನೇ ಸಂಚಿಕೆ . ಈ ಅಗಡಿಯ ಶೇಷಾಚಲ ಸಂಸ್ಥೆ, ಅಲ್ಲಿಯ ಶೇಷಾಚಲ ಸಾಧುಗಳು ಮಾಡಿದ ಕನ್ನಡ ಸೇವೆ ಅಪಾರವಾಗಿದ್ದಿರಬೇಕು. ಇರಲಿ. ಈ ಪುಸ್ತಕವನ್ನು ತಿರುವಿ ಹಾಕಿದಾಗ ...... ಈ ಕತೆಯು ೨೫ ಪುಟಗಳದ್ದು. ಪ್ರತಿ ಅಧ್ಯಾಯಕ್ಕೆ ಒಂದು ತಲೆಬರಹ - ಮತ್ತು ಒಂದು ಅಡಿಬರಹ . ಆ ತಲೆಬರಹಗಳು , ಅಡಿಬರಹಗಳು , ಒಳಗಿನ ಹೂರಣ ಏನೆಂದು ನೋಡೋಣ ಬನ್ನಿ . ೧) ಇದ್ದ ಮೂವರಲ್ಲಿ ಕದ್ದವರಾರು ? - (ರವಿಕಾಣದುದಂ ಕವಿ ಕಾಂಬಂ) ಒಂದು ಬ್ಯಾಂಕು , ಅಲ್ಲಿ ತಿಜೋರಿ , ಅದನ್ನು ತೆಗೆಯಬಲ್ಲವರು ಇಬ್ಬರು , ಮ್ಯಾನೇಜರೂ

ಪುಸ್ತಕನಿಧಿ-ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು'

ಈಗ ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು' ಎಂಬ ಪುಸ್ತಕವನ್ನು ಓದುತ್ತಿದ್ದೇನೆ . ನವರತ್ನ ರಾಮರಾವ್ ಅವರು ಬ್ರಿಟಿಷ್ ಸರಕಾರದ ಆಡಳಿತದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು . ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕದ ಬಗೆ ಅಲ್ಲಲ್ಲಿ ಓದಿದ್ದೆ. ಪುಸ್ತಕದ ಅಂಗಡಿಯಲ್ಲಿ ನೋಡಿದಾಗ, ಓದೋಣವೆಂದು ಬಹುದಿನಗಳ ಹಿಂದೆ ಕೊಂಡಿದ್ದೆ. ಈಗ ಓದುತ್ತಿದ್ದೇನೆ . ಪುಸ್ತಕವು ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ, ಅಂದಿನ ದಿನಮಾನಗಳ ಪರಿಚಯ ನಮಗಾಗುತ್ತದೆ. ಅದರಲ್ಲಿನ ಒಂದು ಪ್ರಸಂಗವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ಈ ಪುಸ್ತಕವು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದ (http://www.dli.gov.in/cgi-bin/metainfo.cgi?&title1=Kelavu%20Nesapugal%27u&author1=Raama%20Navaratna&subject1=GEOGRAPHY.%20BIOGRAPHY.%20HISTORY&year=1954%20&language1=kannada&pages=481&barcode=2030020027649&author2=&identifier1=&publisher1=Jiivana%20Kaaryaalaya&contributor1=&vendor1=NONE&scanningcentre1=rmsc,%20iiith%20&slocation1=NONE&sourcelib1=Osmania%20University&scannerno1=2&digitalrepublisher1=Digital%20Library%20Of%20India&a

DLI ಪುಸ್ತಕ‌ನಿಧಿ ‍‍.... ಬಾಳಿನ‌ ಗುಟ್ಟು

ಹಿಂದೆ ಎಂದೋ ಇಳಿಸಿಕೊಂಡ ಈ ಪುಸ್ತಕವನ್ನು ತೀರಾ ಇತ್ತೀಚಿಗಷ್ಟೇ ಓದಿದೆ. ಇದು ಇಂಗ್ಲಿಷ್ ನಿಂದ ಗೌರೀಶ ಕಾಯ್ಕಿಣಿ ಅವರು ಅನುವಾದ ಮಾಡಿದ ಪುಸ್ತಕ. ಪ್ರತಿಯೊಬ್ಬರ ಬದುಕು ರೂಪುಗೊಳ್ಳುವುದು ಹೇಗೆ? ನಮ್ಮ ನಿಮ್ಮ ಜೀವನ, ಸ್ವಭಾವ ಹೀಗಿರಲು ಕಾರಣಗಳೇನು? ಮಕ್ಕಳನ್ನು ಬೆಳೆಸುವಾಗ ತಾಯಿ- ತಂದೆಯರು, ಶಾಲೆಯಲ್ಲಿ ಶಿಕ್ಷಕರು ಗಮನಿಸಬೇಕಾದುದೇನು? ಇವೇ ಮು೦ತಾದ ಸಂಗತಿಗಳು ಇಲ್ಲಿ ಇವೆ. ಎಳೆಯತನದ ಯಾವೆಲ್ಲ ಸಂಗತಿಗಳು ಮನುಷ್ಯನ ಇಡೀ ಜೀವನವನ್ನು ಪ್ರಭಾವಿಸಿ ಯಶಸ್ವೀ ಜೀವನಕ್ಟೋ ವಿಫಲತೆಗೋ ಹೇಗೆ ಕಾರಣವಾಗುತ್ತವೆ ಎಂಬುದನ್ನು ಮನಗಾಣಬೇಕಾದರೆಈ ಪುಸ್ತಕವನ್ನು ನೀವು ಓದಲೇಬೇಕು. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲೂ ಈ ಪುಸ್ತಕ ಇರುವುದಾದರೂ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ತಾಣದಲ್ಲಿ ಈ ಪುಸ್ತಕವು ಪೀಡಿಎಫ್ ರೂಪದಲ್ಲಿಯೇ ಇದೆ! ಅದರ ಕೊಂಡಿ ಇಲ್ಲಿದೆ. http://oudl.osmania.ac.in/handle/OUDL/3317