ವಿಶ್ವೇಶ್ವರಯ್ಯ , ಭೀಮಸೇನ್ ಜೋಶಿ , ಮಹಾರಾಷ್ಟ್ರ ಟೈಮ್ಸ್ ಹದಿನೈದು ದಿನದ ಹಿಂದೆ ಮಹಾರಾಷ್ಟ್ರ ಟೈಮ್ಸ್ ಹೆಸರಿನ ಮರಾಠಿ ಪತ್ರಿಕೆ( ಇದು ಟೈಮ್ಸ್ ಬಳಗದ್ದು)ಯಲ್ಲಿ ವಿಶ್ವೇಶ್ವರಯ್ಯ ಕುರಿತು ಪುಟಗಟ್ಟಲೆ ಬಂದಿತ್ತು . ಪತ್ರಿಕೆ ಕೈಗೆ ಸಿಗಲಿಲ್ಲ . ಸಿಕ್ಕಿದ್ದರೆ ಕಮಕಮ ಅಂತ ಓದಿ ಏನು ಬರೆದಿದ್ದಾರೆ ಅಂತ ತಿಳ್ಕೋಬಹುದಿತ್ತು . ಮೊನ್ನೆ ಭೀಮಸೇನ್ ಜೋಶಿಯವರಿಗೆ ಭಾರತರತ್ನ ಸಿಕ್ಕಿದ್ದು ಇವತ್ತು ಇಂಗ್ಲೀಷ್ ಟೈಮ್ಸ್ ಗಮನಕ್ಕೆ ಬಂದಿದೆ ! .. ನಿನ್ನೆಯಂತೂ ಯಾವ ಇಂಗ್ಲೀಷ್ / ಹಿಂದಿ ಚಾನೆಲ್ ಗೂ ಇದು ಸುದ್ದಿಯಾಗಲೇ ಇಲ್ಲ ; ಒಂದು ಚಾನೆಲ್ ಸುದ್ದಿ ತೋರಿಸಿತಾದರೂ ಅವರ ಹತ್ರ ಯಾವ್ದೇ ಕ್ಲಿಪ್ಪಿಂಗ್ ಇರಲಿಲ್ಲ ; ಹಾಗಾಗಿ ಅವರು ಇಡೀ ಭಾರತ್ ದೇಶಂ ಹಾಡೋ ಅಥವಾ ಇನ್ನಾವ್ದೋ ತೋರಿಸಿದ್ರು ! ಇವತ್ತಿನ ಮಹಾರಾಷ್ಟ್ರ ಟೈಮ್ಸ್ ಕೈಯಲ್ಲಿದೆ . ಒಂದು ಇಡೀ ಪುಟದಷ್ಟು ಬೀಮಸೇನ್ ಜೋಶಿ ಬಗ್ಗೆ ಇದೆ . ಪು.ಲ. ದೇಶಪಾಂಡೆ ಅವರ ಸಂದರ್ಶನವೂ ಇದೆ . ನಿನ್ನೆಯ ಪತ್ರಿಕೆಯಲ್ಲೂ ಅವರ ಬಗ್ಗೆ ಬಹಳ ಬಂದಿತ್ತಂತೆ . ಮುಖಪುಟದ ತಲೆಬರಹ ಅಂತೆ . ಓದಲಿಕ್ಕೆ ಪ್ರಯತ್ನ ಮಾಡ್ತಾ ಇದ್ದೀನಿ . ಸಂಪಾದಕೀಯದಲ್ಲಿ ಹೀಗೆ ಬರೆದಿದ್ದಾರೆ . ... ಇವರು ಮಹಾರಾಷ್ಟ್ರದವರಲ್ಲ ಎಂದು ಕೆಲವರು ಆಕ್ಷೇಪ ಮಾಡುವರಾದರೂ , ಪಂಡರಾಪುರದ ವಿಟ್ಠಲ ಎಷ್ಟು ಮಹಾರಾಷ್ಟ್ರೀಯನೋ ಅಷ್ಟೇ ಭೀಮಸೇನ್ ಜೋಷಿ ಕೂಡ ಮಹಾರಾಷ್ಟ್ರದವರು. ..( ಪಂಡರಾಪುರದ ವಿಟ್ಠಲನ ಕುರಿತಾದ ಪ್ರಸ್ತಾಪ ಗಮನಿಸಿದಿರಿ ತಾನೇ...
Posts
- Get link
- X
- Other Apps
ಕನಕದಾಸರು ಮತ್ತು ಗೌರವ, ಪ್ರಶಸ್ತಿಯ ಆಸೆ. ಮಾಸ್ತಿಯವರು ಕನಕದಾಸರ ಕುರಿತು ಬರೆಯುವಾಗ ಹೀಗೆ ಬರೆದಿದ್ದಾರೆ . "ಕುರುಬ ವಂಶದಲ್ಲಿ ಜನಿಸಿ ತಮ್ಮ ಪಾಳೆಯಪಟ್ಟನ್ನು ಕೆಲವುಕಾಲ ಆಳಿ ಆಮೇಲೆ ಹರಿದಾಸನ ಪದವಿಗೇರಿದ ಕನಕದಾಸರು ತಮ್ಮ ಬಾಳಿನ ರೀತಿಯಿಂದ ತಮ್ಮ ಗುರು ವ್ಯಾಸರಾಯರಿಗೆ ಮೆಚ್ಚುಗೆಯ ಶಿಷ್ಯರಾದರು . ದ್ವಿಜರಾದ ಗುರು , ದ್ವಿಜವಂಶದವನಲ್ಲದ ಈ ಶಿಷ್ಯ ತಮಗಿಂತ ಹೆಚ್ಚಿನ ಸಿದ್ಧಿಯನ್ನು ಪಡೆದಿರುವ ದೈವಭಕ್ತ ಎಂದು ಇವರನ್ನು ಹೊಗಳುತ್ತಿದ್ದರಂತೆ . ವ್ಯಾಸರಾಯರು ಕನಕದಾಸರು ತಮಗಿಂತ ಹಿರಿಯರೆಂದು ಹೊಗಳಿದರೂ ಕನಕದಾಸರು ತಾವು ಗುರುವಿನ ಪೀಠದಲ್ಲಿ ಕುಳಿತೇನು ಎಂದು ಮುಂದರಿಯಲಿಲ್ಲ. ಈ ನಡತೆಯ ರಹಸ್ಯ ಏನು ಎಂದು ಆಧುನಿಕರಾದ ನಾವು ವಿಚಾರ ಮಾಡಬೇಕು. " ಇಲ್ಲಿನ "ರಹಸ್ಯ" ಏನೆಂದು ನನಗೆ ತಿಳಿಯಲಿಲ್ಲ ; ( ನಿಮಗೆ ಗೊತ್ತಿದ್ದರೆ ಅಥವಾ ತೋಚಿದರೆ ತಿಳಿಸಿ ) . ಆದರೆ ಇಂಥ ಜನ ನಮ್ಮ ನಡುವೆ ಇದ್ದಾರೆ , ಅರ್ಹತೆಯಿದ್ದೂ ಪ್ರಶಸ್ತಿ,ಗೌರವ ಬಯಸದೆ "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ? " ಎಂದು ಹಾಡಿಕೊಂಡು ಇರುವವರು . ಇಂಥವರೇ ಈ ರಹಸ್ಯವನ್ನು ತಿಳಿಹೇಳಿದರೆ ಬಲು ಚೆನ್ನು.
- Get link
- X
- Other Apps
ಜೀವನಕಲೆ ಕರ್ಣಾಟಕದ ಕಲೆ ಎಂಬ ಲೇಖನದಲ್ಲಿ ಮಾಸ್ತಿಯವರು ಹೀಗೆ ಬರೆದಿದ್ದಾರೆ ಬಹುಕಾಲ ಬದುಕಬೇಕು. ತುಂಬ ಸುಖಪಡಬೇಕು. ಜೊತೆಯ ಜೀವನಗಳನ್ನು ಆದಷ್ಟು ಸುಖ ಪಡಿಸಬೇಕು ಎನ್ನುವುದು ಜೀವನದ ಆಳದಲ್ಲಿರುವ ಆಸೆ , ಹಂಬಲಿಕೆ ; ಮನುಷ್ಯನ ಇತಿಹಾಸವೆಲ್ಲ ಇದರಿಂದ ಬೆಳೆದಿದೆ. ಕನ್ನಡದ ಜನ ಈ ಉನ್ನತಿಯನ್ನ ಸಾಧಿಸಿದ್ದಾರೆ. ಸ್ವಚ್ಛತೆ , ಅಲಂಕಾರ , ರಂಗೋಲಿ , ಹಾಡು , ಸಂಗೀತ , ನೃತ್ಯ , ಶಿಲ್ಪಕಲೆ , ಬಯಲಾಟ, ಯಕ್ಷಗಾನ, ಹಬ್ಬಹುಣ್ಣಿವೆ , ಜಾತ್ರೆ , ಪೂಜೆ ಪುನಸ್ಕಾರ / ಇತ್ಯಾದಿ .
- Get link
- X
- Other Apps
ಕನ್ನಡ ಶಬ್ದ ಸಂಪತ್ತು ಕುರಿತು ಮಾಸ್ತಿ. ಕನ್ನಡಕ್ಕೆ ಆಗಿಬಂದ ಸಂಸ್ಕೃತ ಪದ ಕನ್ನಡದ ಸ್ವತ್ತೇ . ಅದನ್ನು ಬಳಸಲು ಹಿಂದೆಗೆಯುವುದು ಭಾಷೆಯನ್ನರಿಯದವನ ಲಕ್ಷಣ. ಕನ್ನಡದಲ್ಲಿ ಶಬ್ದಗಳಿಲ್ಲದಿರುವದರಿಂದ ಈ ವಿಷಯ ಆ ವಿಷಯವನ್ನು ಹೇಳಲಾಗುವದಿಲ್ಲ ಎನ್ನುವುದು ನಮ್ಮಲ್ಲಿ ಕೆಲವರ ಅಭಿಪ್ರಾಯ. ಇದು ಕನ್ನಡವನ್ನು ಕಲಿಯದೆ ಅದರ ವಿಚಾರವನ್ನು ಮಾತನಾಡುವುದರ ಫಲ. ರತ್ನಾಕರನು ಕನ್ನಡದಲ್ಲಿ ಜೀವನ , ಮೋಕ್ಷ, ರಾಷ್ಟ್ರ , ಸಂಸಾರವನ್ನು ಕುರಿತ ಎಷ್ಟು ಗಹನವಾದ ವಿಷಯಗಳನ್ನು ಎಷ್ಟು ಸುಲಭವಾದ ಪದಗಳಿಂದ ನಿರೂಪಿಸಿದ್ದಾನೆನ್ನುವುದನ್ನು ನೋಡಿದವರು ಕನ್ನಡವನ್ನು ಕುರಿತು ಈ ಹೀನಾಯವನ್ನು ನುಡಿಯಲಾರರು. ಮಹಾಕವಿ ಕಾವ್ಯವನ್ನು ರಚಿಸಿದ್ದು ಸಾರ್ಥಕವಾಗಬೇಕಿದ್ದರೆ ಅವನ ಶಬ್ದ ಸಂಪತ್ತು , ಅದರ ಹಿಂದಿನ ಭಾವ ಸಂಪತ್ತು ಎಲ್ಲ ಕಿರಿಯರಿಗೆ ಸಿದ್ಧಿಸಬೇಕು. ಅದಾಗದಿದ್ದರೆ ತಾಯಿ ಅಡುಗೆ ಮಾದಿತ್ತು ಮಕ್ಕಳು ಉಣ್ಣದಂತೆ ; ಅಡುಗೆ ಮಾಡಿದ ಶ್ರಮ ವ್ಯರ್ಥ. ಮಾಡಿದ ಜೀವಕ್ಕೆ ತೃಪ್ತಿಯಿಲ್ಲ; ಮಕ್ಕಳ ಹಸಿವಂತೂ ಹಾಗೆಯೇ ಉಳಿಯುವುದು.
- Get link
- X
- Other Apps
ಕಾಳಿದಾಸನು ಸರಸ್ವತಿಗೆ ಬೈದನೇ ? ಅದೂ ಏನೆಂದು? ನಾನು ಮಾಸ್ತಿಯವರ ಒಂದು ಪುಸ್ತಕ ಓದುವಾಗ ಈ ವಿಷಯ ಕಣ್ಣಿಗೆ ಬಿತ್ತು. ಒಮ್ಮೆ ಕಾಳಿದಾಸ ದಂಡಿ ಇವರಲ್ಲಿ ಯಾರ ಕವಿತೆ ಶ್ರೇಷ್ಠ ಎಂದು ಪ್ರಶ್ನೆ ಬಂದಿತು. ಇದನ್ನು ನಿರ್ಣಯಿಸುವದಕ್ಕೆ ಯಾರಿಗೂ ಧೈರ್ಯವಿಲ್ಲ. ಸರಸ್ವತಿಯನ್ನು ಕೇಳೋಣ ಎಂದು ಒಪ್ಪಿದರು . ದೇವಿ ಪ್ರತ್ಯಕ್ಷವಾದಾಗ ದಂಡಿ ಒಂದು ಶ್ಲೋಕವನ್ನು ಹೇಳಿದನು. ಕಾಳಿದಾಸ ಒಂದು ಶ್ಲೋಕವನ್ನು ಹೇಳಿದನು. ಶ್ಲೋಕ ಯಾವುವು ಈಗ ನಮಗೆ ಗೊತ್ತಿಲ್ಲ. ಶ್ಲೋಕಗಲನ್ನು ಹೇಳಿದ ಮೇಲೆ ಕವಿಗಳು ತೀರ್ಪನ್ನು ಬೇಡಿ ಕೈ ಮುಗಿದು ನಿಂತರು. ದೇವಿ , "ಕವಿರ್ದಂಡೀ, ಕವಿರ್ದಂಡೀ , ನಸಂಶಯಃ " ಎಂದಳು . ದಂಡಿಗೆ ಸಂತೋಷ ಆಯಿತು. ಅವನು ಹೆಮ್ಮೆಯಿಂದ ಕಾಳಿದಾಸನ ಕಡೆ ನೋಡಿದನು. ಕಾಳಿದಾಸನಿಗೆ ಅಸಾಧ್ಯ ಕೋಪ ಬಂದಿತು. ಅವನು "ಹೇ ರಂಡೇ ಅಹಂ ಕೋವಾ " ( ಹಾಗಾದರೆ ನಾನು ಯಾರು?) ಎಂದು ಕೇಳಿದನು . ದೇವಿ "ತ್ವಮೇವಾಹಂ,ತ್ವಮೇವಾಹಂ, ತ್ವಮೇವಾಹಂ, ನಸಂಶಯಃ " ಎಂದಳು ; ಮರೆಯಾದಳು. ಕಾಳಿದಾಸ ಎಲ್ಲ ಕವಿಗಳಿಗಿಂತ ಹೆಚ್ಚು ಎಂದು ಕವಿ ಸಮುದಾಯ ಒಪ್ಪಿತು.
- Get link
- X
- Other Apps
ಮುಂಬೈ, ಎಂತಹ ಐಡಿಯಾ ! ನೀವು ಇತ್ತೀಚೆಗೆ ಮುಂಬೈ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸ್ತಾ ಇರಬಹುದು . ಅದೇ ಮರಾಠೀ ಭಾಷಿಕರ ಮತ್ತು ಹೊರಗಿನಿಂದ ಬಂದವರ ತಿಕ್ಕಾಟದ ವಿಷಯ . ಇದೇ ಸಮಯಕ್ಕೆ ಐಡಿಯಾ ಎಂಬ ಟೆಲಿಕಾಂ ಸಂಸ್ಥೆ ಮುಂಬೈ ಪ್ರವೇಶಿಸಿದೆ . ಎಲ್ಲೆಡೆ ಅದರ ದೊಡ್ಡ ಹೋರ್ಡೀಂಗ್ ಗಳು ತಲೆಯೆತ್ತಿವೆ - ಅವುಗಳ ವಿಷಯ ಹೀಗೆ ... ಬೇರೆ ಬೇರೆ ಜನರ ಚಿತ್ರಗಳಿವೆ . ಜತೆಗೆ ಇವನು ಪುಣೆಯವನು , ಮುಂಬೈಯವನಲ್ಲ !? ಇವನು ಗುಜರಾತಿನವನು , ಮುಂಬೈಯವನಲ್ಲ !? ಇವನು ಪಂಜಾಬಿನವನು , ಮುಂಬೈಯವನಲ್ಲ !? ...ಇತ್ಯಾದಿ . ಎಂಬ ವಾಕ್ಯಗಳಿವೆ . ಈ ಸರಣಿಯಲ್ಲಿ ಕೊನೆಯದು . ಈ ಪ್ರಶ್ನೆಗೆ ಉತ್ತರ ಎಂಬಂತೆ , ಒಬ್ಬ ಮೊಬೈಲು ಕೈಯ್ಯಲ್ಲಿ ಹಿಡಕೊಂಡು ಹೇಳ್ತಿದ್ದಾನೆ . ನನ್ನ ನಂಬರ್ ಮುಂಬಯಿಯದು , ಆದಕಾರಣ ನಾನು ಮುಂಂಬಯಿಯವನು . ! ಅದಕ್ಕೆ ಒಂದು ಟ್ಯಾಗ್ ಲೈನ್ - ಮುಂಬೈ , ವ್ಹಾಟ್ ಎನ್ ಐಡಿಯಾ ! ಈ ಐಡಿಯಾ ಸಂಸ್ಥೆಯ ಜಾಹೀರಾತುಗಳನ್ನು ನೀವು ಟೀವೀ ಮತ್ತು ಇತರೆಡೆ ನೋಡಿರಬಹುದು . ಎಲ್ಲರೂ ಜಾತಿ ಭಾಷೆ ಇತ್ಯಾದಿಗಳು ಸೂಚಿಸುವ ಹೆಸರುಗಳ ಬದಲಾಗಿ ನಂಬರುಗಳಾಗಿ ಬಿಟ್ಟಿರೋದು , ಅಭಿಷೇಕ್ ಬಚ್ಚನ್ ಇರುವ ಜಾಹೀರಾತುಗಳನ್ನು ನೋಡಿದ್ದೀರಿ ತಾನೇ ?
- Get link
- X
- Other Apps
ನಿನ್ನ ಕಂಗಳ ಹೊರತಾಗಿ ನಿನ್ನ ಕಂಗಳ ಹೊರತಾಗಿ ಜಗತ್ತಿನಲ್ಲಿ ಇರುವದಾದರೂ ಏನು ? ತೆರೆದಾಗ ಇವು ಬೆಳಗು , ಮುಚ್ಚಿದಾಗ ಸಂಜೆ , ನನ್ನ ಬದುಕೂ ಸಾವೂ ಈ ರೆಪ್ಪೆಗಳ ಕೆಳಗೆ ಈ ಕಣ್ಣರೆಪ್ಪೆಗಳ ಸಂದಿನಲ್ಲಿ ವಸಂತ ನಲಿಯುತಿದೆ ನನ್ನ ಕನಸುಗಳು ಇಲ್ಲಿ ಅಲೆಯುತಿವೆ ಈ ಕಂಗಳಲ್ಲಿ ನನ್ನ ಬರಲಿರುವ ದಿನಗಳ ಚಿತ್ರ ಇದೆ ಬಯಕೆಯ ಕಾಡಿಗೆಯಲಿ ಬರೆದ ನನ್ನ ಭಾಗ್ಯವಿದೆ . ( ತೇರೀ ಆಂಖೋಂ ಕೆ ಸಿವಾ ದುನಿಯಾ ಮೆ ರಖಾ ಕ್ಯಾ ಹೈ? ಎಂಬ ಹಿಂದಿ ಸಿನಿಮಾ ಹಾಡಿನ ಅನುವಾದ ಇದು)
- Get link
- X
- Other Apps
ಅಂತರ್ಜಾಲದಲ್ಲಿರೋ ನವೆಂಬರ್ ೧೯೫೮ ರ ಚಂದಮಾಮದಲ್ಲಿ * ಅತಿಶಯ ತಿರುಡನ್ ತಿಮಿಳು ಚಿತ್ರದ ಜಾಹೀರಾತು , * ಪಂಡಿತ ಡಿ. ಗೋಪಾಲಾಚಾರ್ಲುರವರ "ಅರುಣ" ಗರ್ಭಾಶಯ ಟಾನಿಕ್ ಜಾಹೀರಾತು ... ಹೆಚ್ಚು ವಿವರಗಳಿಲ್ಲ ಆದರೆ ಅದು ಚಂದಮಾಮ ದಲ್ಲಿ . ... ಯಾಕೋ ?? * ಪೂರ್ವ ಪಂಜಾಬಿನ ಸುಂದರವಾದ ಕಾಂಗ್ರಾ ಜಿಲ್ಲೆಯಲ್ಲಿ ಉನ್ನತ ಹಿಮಾಲಯದ ತಪ್ಪಲಲ್ಲಿ ಒಂದು ಪ್ರಶಾಂತ ಸ್ಥಳವಿದೆ - ಇದು ಕೂಲು ಕಣಿವೆ . :) ( ಅವರು ಕುಲು ಕಣಿವೆ ಬಗ್ಗೆ ಹೇಳ್ತಿದಾರೆ ! )
- Get link
- X
- Other Apps
ಎರಡು ಪುಟ್ಟಾತಿಪುಟ್ಟ ಕತೆಗಳು .. ೧) ಜಯಂತ ಕಾಯ್ಕಿಣಿಯವರ ಕತೆಗಳು ನಿಜಕ್ಕೂ ಅದ್ಭುತ ಕತೆಗಳು. ನನ್ನ ಗೆಳೆಯನೊಬ್ಬನಿಗೆ ಅವುಗಳನ್ನು ಕೊಟ್ಟು ಓದಿಸೋಣ ಅಂತ ಆ ಮೂರೂ ಕಥೆ ಪುಸ್ತಕಗಳನ್ನು( ತೂಫಾನ್ ಮೇಲ್ , ಜ.ಕಾ.ಕಥೆಗಳು , ಬಣ್ಣದ ಕಾಲು) ಕೊಂಡು ಅವನ ಮನೆಗೆ ಹೋದೆ . ಅವನಿಗೆ ಕೊಟ್ಟೆ. ಅವನು ಟೇಬಲ್ ಮೇಲೆ ಇಡೋ ಹೊತ್ತಿಗೇ ಅವನ ಮಾವ ಬಂದ್ರು . ನಾನು ಓದ್ತೀನಿ ಅಂತ ತಕೊಂಡೋದ್ರು. ಇದು ಕತೆ ಆಗುತ್ತೋ ಇಲ್ಲವೋ ನೀವೇ ಹೇಳಬೇಕು .. ಗೆಳೆಯರೊಬ್ಬರು ಇದರಲ್ಲಿ ತತ್ವಜ್ಞಾನ ಕಂಡರು ... ನಾನು ರಹಸ್ಯಾತ್ಮಕ ನಿಗೂಢ ಕತೆ ... ಅಂದೆ. ಮುಂದೇನಾಯ್ತು ಅಂತ ಇಲ್ಲ. ಮಾವ ಓದಿದನೋ ? ಮರಳಿ ಕೊಟ್ಟನೋ ? ಇವನು ಓದಿದನೋ? ನಾನು ಕೇಳಿದೆನೆ ? ಇಲ್ಲವೆ? ಎರಡು ಪುಟ್ಟಾತಿಪುಟ್ಟ ಕತೆ ಹೇಳ್ತೀನಂತ ಹೊರಟು ಒಂದೇ ಕತೆ ಹೇಳ್ದೆ ! ವಯಸ್ಸಾದಾಗ ಮನುಷ್ಯನಿಗೆ ಎರಡು ಸಮಸ್ಯೆ ಕಾಡುತ್ವೆ ... ಒಂದೂ ...... ನೆನಪು ಕೈಕೊಡುತ್ತೆ. ಮರೆವಿನ ತೊಂದರೆ ಶುರುಆಗತ್ತೆ ... ಇನ್ನೊಂದೂ .... .... ... ನಾನು ಏನ್ ಹೇಳ್ತಾ ಇದ್ದೆ ?
- Get link
- X
- Other Apps
ಕೊಲೆಗಾರರು ಯಾರು ? ಒಂದು ಹಾಸ್ಯ ಲೇಖನ ಸಂಪದದಲ್ಲಿ ’ ಕೊಲೆಗಾರರು ಯಾರು ? ’ ಬರಹ ಓದುತ್ತಿದ್ದಂತೆ ನಾನು ಹಿಂದೊಮ್ಮೆ ಸುಧಾದಲ್ಲಿ ಓದಿದ ಹಾಸ್ಯ ಬರಹ ನೆನಪಾಯಿತು . ಅದು ಯಾರು ಬರೆದಿದ್ದದ್ದು ನೆನಪಿಲ್ಲ ; ವಿಷಯ ಮುಖ್ಯ ತಾನೆ ? ಓದಿ ಸಂತಸ ಪಡಿ . ಒಬ್ಬ ಪತ್ತೇದಾರಿ ಸಾಹಿತ್ಯದ ಓದಿನ ಗೀಳಿನ ಮನುಷ್ಯ ಇರ್ತಾನೆ . ಅವನಿಗೆ ಒಂದ್ಸಲ ಓದಕ್ಕೆ ಏನೂ ಇಲ್ದೆ ತನ್ನ ಗೆಳೆಯನ ಹತ್ರ ಹೋಗಿ ಓದಕ್ಕೆ ಏನಾದ್ರೂ ಕೊಡೋ ಅಂತ ಕೇಳಿದಾಗ ಅವನು ಕೈಗೆ ಸಿಕ್ಕ ಪುಸ್ತಕಾನ ಕೊಟ್ಟು ಕಳಿಸ್ತಾನೆ . ಅದು ಷೇಕ್ಸಪಿಯರನ ಮ್ಯಾಕ್‍ಬೆತ್ ನಾಟಕದ ಅನುವಾದ . ಡಿ. ವಿ. ಜಿ ಅವರದ್ದು , ಹಳೆಗನ್ನಡ ಶೈಲಿಯಲ್ಲಿದೆ . ಮರುದಿನ ಅವನು ಬಂದು ಪುಸ್ತಕ ವಾಪಸ್ ಕೊಡ್ತಾ ಹೇಳ್ತಾನೆ ... ನಂಗೆ ಮ್ಯಾಕ್‍ಬೆತ್ ಮಾಡಿದ್ದು ಅನ್ನಿಸ್ಲಿಲ್ಲ . ’ಏನೋ?’ ’ಅದೇ ಮರ್ಡರು ’ ’ಯಾಕೋ’ ಈಗ ಅವರ ನಡುವೆ ಚರ್ಚೆ . ನಾನಾ ಥಿಯರಿಗಳು . ಆ ನಾಟಕದಲ್ಲಿ ಆಗಿರೋ ಕೊಲೇನ ಯಾರು ಮಾಡಿದ್ದು ? ಅಂತ ! --ಕ್ಲಿಯರ್ ಆಗೇ ಇದೆಯಲ್ಲೋ ? ಮ್ಯಾಕ್‍ಬೆತ್ ಮಾಡಿದ್ದು ಅಂತ ? -- ಅದ್ಯಾವ ಸೀಮೆ ಪತ್ತೇದಾರಿನೋ ? ಮೊದಲ ನೋಟಕ್ಕೆ ಕೊಲೆಗಾರ ಅನ್ನಿಸಿದೋನು ಕೊಲೆ ಮಾಡಿರೋದಿಲ್ಲ , ಇಷ್ಟೂ ಗೊತ್ತಿಲ್ವೇ ನಿಂಗೆ ? --ನಾಯಕಿ ಇರ್ತಾಳಲ್ಲ ? ಅವಳೇ ಇರಬೇಕು . ಮೇಣದ ಬತ್ತಿ ಹಿಡಿದು ಸಂಶಯಾಸ್ಪದ ಆಗಿ ರಾತ್ರಿ ಹೊತ್ತು ಓಡಾಡ್ತ ಇರ್ತಾಳಲ್ಲ ? ಒಂದು ವೇಳೆ ಅವಳಲ್ಲದಿದ್ರೆ ...
- Get link
- X
- Other Apps
ಬರವಣಿಗೆಯ ಕನ್ನಡದ ದಿಕ್ಕು ಕನ್ನಡದಲ್ಲಿ ಸಂಸ್ಕೃತದ ಅತಿಬಳಕೆಯಿಂದ , ಸಂಸ್ಕೃತದ ಕಾಗುಣಿತ(ಸ್ಪೆಲ್ಲಿಂಗ್ಸ್ ) ನಿಂದಾಗಿ ಹಳ್ಳಿಗರಿಗೆ ಮತ್ತು ಸಂಸ್ಕೃತದ ಪರಿಚಯ ಇಲ್ಲದವರಿಗೆ ( ಅಂದರೆ ’ಕೆಳ’ ಎಂದು ತಿಳಿದಿರುವ ಜಾತಿಯ ಜನಕ್ಕೆ) ತೊಂದರೆ ಆಗಿದೆಯಂತೆ . ಅದಕ್ಕಾಗಿ ಮಹಾಪ್ರಾಣ , ಷ ಇತ್ಯಾದಿ ಅಕ್ಷರಗಳನ್ನು ತೆಗೆದು ಹಾಕಿ ಎಂಬ ವಾದ ಒಂದೆಡೆ ಎದ್ದಿದೆ . ( ಅಂದ ಹಾಗೆ ಚಾಯನೀಸ್ ಭಾಶೆಯಲ್ಲಿ ಸಾವಿರಾರು ಅಕ್ಶರಗಳಂತೆ ; ಅವರಿಗೆ ಏನು ತೊಂದರೆ / ಎಷ್ಟು ತೊಂದರೆ ಆಗಿದೆಯೋ ಏನೋ ; ಅವರು ಬಳಸ್ತಾ ಇಲ್ವೀ ; ನೂರಾರು ವರುಷ ಅದು ಬಾಳಿ ಬದುಕಿಲ್ವೇ? -- ನನಗೆ ಸರಿಯಾಗಿ ಗೊತ್ತಿಲ್ಲ) ಸರಿ ಈ ವಾದಾನೂ ಒಪ್ಕೊಳ್ಳೋಣ ; ಶಂಕರ ಭಟ್ಟರ ವಾದಾನೂ ಒಂತರ ಸರೀನೇ ; ಭಾಶೆಯ ಕಠಿಣತನವನ್ನು ಕಡಿಮೆ ಮಾಡಿ , ಪರಸ್ಪರ ಓದಿ , ಬರೆಯಲು , ಹೆಚ್ಚಿನ ತಿಳಿವು ಪಡೆದು , ಬದುಕನ್ನು ಶ್ರೀಮಂತಗೊಳಿಸಲು ಸರಳಗೊಳಿಸೋಣ ; ಅದಕ್ಕೆ ನನ್ನ ಒಪ್ಪಿಗೆಯೂ ಇದೆ ; ಆದರೆ ಈಗಾಗಲೇ ಬಳಕೆಯಲ್ಲಿರೋ ಎಲ್ಲಾ ಸಂಸ್ಕೃತ ಶಬ್ದಗಳನ್ನ ಬದಲಿಸಲೇಬೇಕೆಂಬ ಹಟ ಏಕೆ ? ಎಲ್ರಿಗೂ ತಿಳಿಯೋ ಕನ್ನಡ ಶಬ್ದ ಇದ್ರೆ ಸರಿ , ಅದನ್ನು ಸಂಸ್ಕ್ರುತ ಶಬ್ದಕ್ಕೆ ಬದಲಾಗಿ ಬಳಸೋಣ ; ಸಂಸ್ಕೃತದ ಮೇಲಿನ ದ್ವೇಶದಿಂದ ಎಲ್ಲರಿಗೂ ತಿಳಿಯೋ ಶಬ್ದಗಳನ್ನು , ಅವು ಸಂಸ್ಕ್ರುತ ಎಂಬ ಒಂದೇ ಕಾರಣಕ್ಕೆ , ಅದಕ್ಕೆ ಬದಲಿಯಾಗಿ ಯಾರಿಗೂ ಗೊತ್ತಿಲ್ಲದ ಶಬ್ದಗಳನ್ನು ಹೆಕ್ಕಿ ತೆಗೆಯೋದು ಏಕೆ ? ದಿನ , ವರ್ಷ ಎಲ್ರಿಗೂ...
- Get link
- X
- Other Apps
ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ ನಿಸರ್ಗ - ಇದು ಕನ್ನಡದ ಮೊದಲ ಪ್ರಾದೇಶಿಕ ಕಾದಂಬರಿ ಎಂಬ ಹೆಗ್ಗಳಿಕೆ ಹೊಂದಿದೆ . ಇದನ್ನು ೧೯೪೫ ರಲ್ಲಿ ಬರೆದವರು ಮಿರ್ಜಿ ಅಣ್ಣಾರಾಯರು . ಅನೇಕ ಮುದ್ರಣಗಳನ್ನು ಕಂಡಿದೆ . ಬೆಳಗಾಂವಿಯ ಈ ಭಾಗದ ಕನ್ನಡ ಪರಿಚಯ ನಿಮಗೆ ಇರಲೆಂದು ಆ ಕಾದಂಬರಿಯ ಮುನ್ನುಡಿಯ ಭಾಗವೊಂದನ್ನು ಇಲ್ಲಿ ಕೊ(ಕು)ಟ್ಟಿದ್ದೇನೆ . ಕೆಲವು ಶಬ್ದರೂಪಗಳು , ವ್ಯಾಕರಣರೂಪಗಳು ವಿಶಿಷ್ಟವಾಗಿವೆ . ಮುಖ್ಯವಾದವನ್ನು ಇಲ್ಲಿ ತಿಳಿಸುವೆ . * ಏನು = ಯಾನು , ಏನಾದರೂ = ಯಾನರ , ಏಕೆ ಯಾಕೆ ಆದ ಹಾಗೆ ಏನಂತೆ ಇದು ಯಾನತ್ತ ಆಗುವದು * ಚತುರ್ಥೀಪ್ರತ್ಯಯವದ ’ಗೆ’ ಇದು ’ಗಿ’ ಆಗುವದು . ಅವರಿಗೆ =ಅವರಿಗಿ , ಮನೆಗೆ=ಮನಿಗಿ , ಆಕೆಗೆ=ಆಕಿಗಿ , ದನಕ್ಕೆ = ದನೀಗಿ .. ಎಕಾರಾಂತವೆಲ್ಲ ಇಕಾರಾಂತ ಆಗುವ ಪ್ರವೃತ್ತಿ ಇದೆ . ಈಕಡೆ= ಇಕಡಿ , ನಿನ್ನೆ=ನಿನ್ನಿ , ಆನೆಗೆ=ಆಣಿಗಿ , ಕಪಾಳಕ್ಕೆ = ಕಪ್ಪಾಳಿಗಿ * ಉಕಾರಾಂತವು ಅಕಾರಾಂತವಾಗುವದು . ಹೆಣ್ಣುಮಗಳು= ಹೆಣ್ಣುಮಗಳ , ಸೊಸೆಂದಿರು=ಸೊಸದೇರ * ಶಬ್ದದ ಒಳಗೂ ಏ ಇದು ಯಾ ಆಗುವದು . ಹೆಂಡತಿ= ಹ್ಯಾಂತಿ , ತೆವರು = ತ್ಯಾವರಾ , ಕಡೆಯವರು = ಕಡ್ಯಾವರಾ * ಷಷ್ಠಿಯ ಕೆಲವು ವಿಕೃತ ರೂಪಗಳಿವೆ . ದನದ = ದನೀನ , ಕರುವಿನ / ಕರದ= ಕರೀನ * ಹಾಗೆಯೇ ದ್ವಿತೀಯಾದಲ್ಲಿ ಅವರನ್ನು = ಅವರ್ನಾ * ಇದೆ=ಐತಿ , ಬರುತ್ತದೆ = ಬರತೇತಿ * ಕ್ರಿಯಾರೂಪದಲಿಯೂ ಏ ಯಾ ಅಗಿರುವದು ಬಹಳ . ಕೊಡುತ್ತೇನೆ= ಕೊ...
- Get link
- X
- Other Apps
ಸಖೇದಾಶ್ಚರ್ಯ ಅಂತ ನೀವು ಶಬ್ದ ನೋಡಿರಬಹುದು ... ಏನು ಈ ಶಬ್ದದ ಅರ್ಥ ? ಆಶ್ಚರ್ಯದಿಂದ ಅನ್ನೋ ಅರ್ಥದಲ್ಲಿ ಬಳಸ್ತಾರೆ , ನಿಜ . ಈ ಶಬ್ದವನ್ನು ಅರ್ಥ ಮಾದಿಕೊಳ್ಳಲು ಪ್ರಯತ್ನಿಸಿದರೆ ಖೇದ ( ದು:ಖ) ಮತ್ತು ಆಶ್ಚರ್ಯಗಳಿಂದೊಡಗೂಡಿ ಎಂದಾಗುತ್ತದೆಯೆ ? ಖೇದ ಶಬ್ದ ಯಾಕೆ ಇಲ್ಲಿ ? ಅಥವಾ ಬೇರೇನಾದರೂ ಅರ್ಥ ಇದೆಯೇ ಈ ಶಬ್ದಕ್ಕೆ? ಅಂದ ಹಾಗೆ ನೀವು ಸನಿಹ/ಸನಿಯ ಆಡುಮಾತಲ್ಲಿ ನೋಡಿದ್ದೀರಾ ? ನನಗೆ ಒಮ್ಮೆಲೇ ಹೊಳೆಯಿತು ... ನಮ್ಮಲ್ಲಿ ಬಳಸುವ .. ಸನೇ / ಸನೇಕ ಅದೇ ಶಬ್ದ ! ಅವನ ಸನೇ(ಕ) ಹೋಗಬ್ಯಾಡ.... ಅಂದರೆ ಅವನ ಹತ್ರ ಹೋಗಬ್ಯಾಡ....
- Get link
- X
- Other Apps
ಮತ್ತೆ ಇತ್ತೀಚಿಗೆ ಆ ’ಬೆರಗು’ ಪುಸ್ತಕ ಮುಗಿಸಿದೆ . ನಿಜಕ್ಕೂ ಚೆನ್ನಾಗಿದೆ . ಒಮ್ಮೆ ಓದಲೆಬೇಕು . ’ಸೈನೈಡ್’ ಸಿನೆಮಾ ಉಳಿದ ಭಾಗ ನೋಡಿದೆ . ಸಂಯಮ ಭರಿತ ಸಿನೆಮಾ . ನಿಜವಾದ ಘಟನೆ ಆಧಾರಿತ ಎನ್ನೋದು ಬಿಟ್ರೆ ವಿಶೇಷ ಏನಿಲ್ಲ ; ಹೆಚ್ಚಿನ ಥ್ರಿಲ್ ಆಗಲಿ ಒಳನೋಟಗಳಾಗಲೀ ಇಲ್ಲ. ಆಮೇಲೆ ಈ ರವಿವಾರ ಗಾಳಿಗೋಪುರ ಮತ್ತು ನಾಂದಿ, ಕರುಣೆಯೇ ಕುಟುಂಬದ ಕಣ್ಣು ಎಂಬ ಮೂರು ಚಿತ್ರಗಳ ಒಂದು ಡೀವೀಡೀ ಬರೀ ೬೦ ರೂ. ಗೆ ತಂದಿದ್ದು ಗಾಳಿಗೋಪುರ ನೋಡಿದೆ . ಸಾಕಷ್ಟು ಉದ್ದದ ಸಿನೇಮಾ . ಇತ್ತೀಚೆಗೆ ಅನೇಕ ’ಸುಧಾ’ಗಳನ್ನು ಇನ್ನೊಮ್ಮೆ ನೋಡಿ , ಬೇಕಾದ ಹಾಳೆ ಹರಿದು ಇಟ್ಟುಕೊಂಡು ( ಬೇಡದ ಹಾಳೆಗಳನ್ನೂ ಹರಿಯಬೇಕಾಗುತ್ತದೆ ; ಆ ವಿಷಯ ಇನ್ನೊಮ್ಮೆ ಬರೆವೆ) ವಿಲೇವಾರಿ ಮಾಡಿದೆ. ಅದರಲ್ಲಿ ರಾವಣನ ಪುನರ್ಜನ್ಮದ ಕಣಸು ಎಂಬ ಧಾರಾವಾಹಿ ಬಂದಿತ್ತು .. ಎಷ್ಟೋ ರಾಮಾಯಣ, ಮಹಾಭಾರತ ಓದಿದ್ದೇನೆ ... ತಿಣುಕಿದನು ಫಣಿರಾಯ ರಾಮಾಯಣಗಳ ಭಾರದಲಿ ಅಂತ ಇದೆಯಲ್ಲ ... ಅವರ ದೃಷ್ಟಿಯಲ್ಲಿ , ಇವರ ಕಣ್ಣಿನಲ್ಲಿ ಇತ್ಯಾದಿ .. ಅದಕ್ಕೆ ಓದಿರಲಿಲ್ಲ . ಅದರಲ್ಲಿ ಇರುವದಾದರು ಏನು .. ನೋಡೋಣ, ರಾವಣನ ಪುನರ್ಜನ್ಮವೇ ? ಏನದು ? ಅವನ ಕಣಸು ಏನು ? ಅಂತ . ರಾವಣ ಸೋತು ಸಾಯುವ ಮೊದಲು ಆಸೆಪಡುತ್ತಾನೆ, ಸೀತೆ ಅವನನ್ನ ಅಪ್ಪಿಕೋಬೇಕು , ಅವನು ರಾಮನನ್ನು ಸೋಲಿಸಿ ಸೀತೆಯನ್ನು ಅವನಿಗೆ ಒಪ್ಪಿಸಬೆಕು . ಅಂತ .. ಈ ಬಯಕೆ ಈಡೇರೋದು ... ಮುಂದಿನ ಜನ್ಮದಲ್ಲಿ ... ರಾವಣ, ಕು...
- Get link
- X
- Other Apps
ನಿನ್ನೆ ಸಮಯ ಕಳೆದ ಪರಿ - ಪುಸ್ತಕ ಮತ್ತು ಸಿನೇಮಾ ನಿನ್ನೆ ದಿನ ರಜೆ ಇತ್ತು ; ಮೃತ್ಯುದಂಡ ಎಂಬ ಹಿಂದಿ ಸಿನೆಮಾವನ್ನು ಹದಿನೈದಾಣೆಯೂ , ಕನ್ನಡ ಸೈನೈಡ್ ಅನ್ನು ಅರ್ಧದಷ್ಟೂ , ಸರ್ವಕಾಲಸುಂದರಿ ಶರ್ಮಿಳಾ ಟಾಗೋರ್ ಳ ಸಿನೆಮಾ -ಆನ್ ಈವನಿಂಗ್ ಇನ್ ಪ್ಯಾರಿಸ್ - ಅರ್ಧದಷ್ಟೂ ನೋಡಿದೆ. ಡಾ.ಪ್ರಭುಶಂಕರ ಬರೆದ ಬಸವಣ್ಣನ ಕುರಿತಾದ ’ಬೆರಗು’ ಎಂಬ ಪುಸ್ತಕವನ್ನೂ ಅರ್ಧ ಓದಿದೆ . ಒಳ್ಳೇ ಪುಸ್ತಕ . ಬಸವಣ್ಣನ ಕುರಿತು ಅವನ ಸುತ್ತಲ ಜನರು ಏನು ಯೋಚಿಸಿರಬಹುದು ಎಂಬ ಕಲ್ಪನೆಗಳ ಪುಸ್ತಕ . ಬಸವಣ್ಣನನ್ನು ತಿಳಿಯಲು ಇದು ಸಹಾಯ ಮಾಡುವದು . ( ೧೯೮೨ ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕ , ೨೦೦೧ ರಲ್ಲಿ ಮರು ಮುದ್ರಣಗೊಂಡು ನನ್ನ ಕೈಗೆ ೨೦೦೮ ರಲ್ಲಿ ಬಂದಿದೆ! . ) ಇತ್ತೀಚೆಗೆ ಕುಂ.ವೀರಭದ್ರಪ್ಪ ಬರೆದ ’ಅರಮನೆ’ ಎಂಬ ಬೃಹತ್ ಕಾದಂಬರಿಯನ್ನು ಕೊಂಡೆ . ಆಮೇಲೆ ತಿಳಿಯಿತು ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ ಅಂತ . ಮೊದಲೇ ಏನನ್ನಾದರೂ ಓದುವದು ( ಸಮಯ ಸಿಗದಿರುವದೂ , ಟೀವೀ , ಪೇಪರ್ , ಇಂಟರ್ನೆಟ್ಟ್ ಇತ್ಯಾದಿಗಳು ಸಮಯ ಬೇಡುತಿರುವುದೂ ಕಾರಣ ) ಕಷ್ಟವಾಗಿರುವಾಗ ೬೦೦ ಪುಟಗಳ ಪುಸ್ತಕ ಆಡುಭಾಷೆಯಲ್ಲಿರುವ ಈ ಪುಸ್ತಕ ಓದುವದೂ ಒಂದು ಸಾಹಸವೇ . ದಿನಕ್ಕೆ ೧೦-೨೦ ಪುಟ ಮಾತ್ರ ಸಾಧ್ಯವಾಗುತ್ತಿದೆ. ಮುಗಿಸಲು ಒಂದೆರಡು ತಿಂಗಳೇ ಬೇಕೆಂದು ಕಾಣುತ್ತದೆ. ಇಲ್ಲಿ ಎ, ಏ , ಒ , ಓ , ಔ , ಐ ಅಕ್ಷರಗಳೇ ಇಲ್ಲಿ ಕಾಣುವದಿ...