Posts

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು. ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು ಓದಿದ ಜನರ ಅನಿಸಿಕೆಗಳಿವೆ. ಟಾಂ ಸಾಯರ್ ಸಾಹಸಗಳ ಸಂಗತಿ ಪುಸ್ತಕ ವಿಭಾಗದಲ್ಲಿ ಸಿಕ್ಕಿತು. ಮಹಾತ್ಮಾ ಗಾಂಧಿಯವರ ಕೊನೆಯ ದಿನದ ಸಂಗತಿಗಳು ವಿವರವಾಗಿ ಇಲ್ಲಿ ಬಂದಿವೆ. ಮನುಷ್ಯನಿಗೆ ಸಾವು ಸಮೀಪಿಸಿದಾಗ ಹೇಗೋ ಆತನ ಬಾಯಿಂದ ಸಾವಿನ ಕುರಿತಾದ ಮಾತುಗಳು ಬರುತ್ತವಂತೆ. ಗಾಂಧೀಗಾಗಿ ರಾತ್ರಿ ಬೇಕಾಗುವ ಯಾರೋ ಲವಂಗದ ಪುಡಿಯನ್ನು ಬೆಳಿಗ್ಗೆ ತಯಾರು ಮಾಡುವ ಸಂಬಂಧ - ಗಾಂಧಿಯವರು 'ಈಗ ಏಕೆ ಮಾಡುತ್ತ ಕೂತಿದ್ದಾರೆ? ರಾತ್ರಿ ನಾನೇ ಇರುತ್ತೇನೋ ಇಲ್ಲವೋ ' ಎನ್ನುತ್ತಾರೆ. ಪತ್ರಿಕೆಯಲ್ಲೆಲ್ಲೋ ಗಾಂಧಿಯವರು ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗಲಿದ್ದಾರೆ ಎಂಬ ಸಂಗತಿ ಅಚ್ಚಾಗಿರುತ್ತದೆ, ಅದಕ್ಕೆ ಗಾಂಧಿಯವರು 'ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗುವ ಗಾಂಧಿ ಯಾರೋ? ' ಎಂದು ಪ್ರತಿಕ್ರಿಯಿಸುತ್ತಾರೆ ಎಂಬಂತಹ ಸಂಗತಿಗಳು ಮೈನವಿರೇಳಿಸುತ್ತವೆ. ಬ್ರಿಟಿಷರ ವಿರುದ್ದ ಬಂಡೆದ್ದ ನರಗುಂದ ಬಾಬಾಸಾಹೇಬನು ಗಲ್ಲಿಗೇರಲಿಲ್ಲವಂತೆ. ಈತನ ಹೆಂಡತಿ ಧಾರವಾಡದ ಕಲೆಕ್ಟರನ ಹೆಂಡತಿಯನ್ನು ಹಾವಿನ ಕಡಿತದಿಂದ ಸಾಯುವುದನ್ನು ತಪ್ಪಿಸಿದ್ದಳಂತೆ. ಈತನನ್ನ ಗಲ್ಲಿಗೇರಿಸಬೇಕಾದ ಅಧಿಕಾರಿಯು ಅದೇ ಕ...

ಗಾಂಧೀಜಿಯೂ ಈಶೋಪನಿಷತ್ತೂ

ಇತ್ತೀಚೆಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಒಂದು ಮಹಾತ್ಮಾಗಾಂಧೀಯವರ ಪುಸ್ತಕ-"ಜೀವನ ಶಿಕ್ಷಣ"ವನ್ನು ಓದುತ್ತಿದ್ದೆ. ಪ್ರಾರಂಭದಲ್ಲಿ ಅವರ ಕೆಲವು ಅನಿಸಿಕೆ/ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು ಗಮನಿಸುವಂತಹವು , ಕೆಲವು ಮತ್ತೆ ಮತ್ತೆ ಮೆಲುಕು ಹಾಕುವಂತಹವು, ನನಗಾಗಿ ಸಂಗ್ರಹಿಸಿಕೊಂಡ ಅವನ್ನು ನಿಮಗಾಗಿ ಇಲ್ಲಿ ಕುಟ್ಟಿದ್ದೇನೆ ( ಅಷ್ಟೇ ಅಲ್ಲ , ಈಶೋಪನಿಷತ್ತಿನ ಬಗ್ಗೆ ಅವರ ಒಂದು ಹೇಳಿಕೆಯಿಂದಾಗಿ ಈಶೋಪನಿಷತ್ತನ್ನು ತಿರುವಿ ಹಾಕಿದ ಬಗ್ಗೆಯೂ ಮುಂದಕ್ಕೆ ಬರೆದಿದ್ದೇನೆ). --ನಾನೊಬ್ಬ ಸತ್ಯಶೋಧಕ, ಅದಕ್ಕೊಂದು ಮಾರ್ಗವನ್ನು ಕಂಡುಹಿಡಿದಿದ್ದೇನೆ ಎಂದು ನನ್ನ ವಿಶ್ವಾಸ. ಅದರ ಸಿದ್ಧಿಗಾಗಿ ನಾನ್ನು ನಿರಂತರ ಪ್ರಯತ್ನಶೀಲನಾಗಿದ್ದೇನೆ ಎಂಬುದು ನನ್ನ ನಂಬಿಕೆ. ...... ನನ್ನ ನ್ಯೂನತೆಗಳು ಎಷ್ಟೆಂಬುದನ್ನು ನಾನು ವ್ಯಸನದಿಂದ ಅರಿತಿದ್ದೇನೆ. ಆ ಅರಿವು ನನಗೆ ದುಃಖ ತರುವಷ್ಟಿದೆ. ಆ ಅರಿವೇ ನನ್ನ ಸರ್ವಶಕ್ತಿಯ ಮೂಲ; ಏಕೆಂದರೆ ತನ್ನ ದೌರ್ಬಲ್ಯಗಳ ಅರಿವಾಗುವುದೇ ಮಾನವನಿಗೆ ಒಂದು ಅಪೂರ್ವ ಬಲ. --ದಾರಿ ನನಗೆ ಗೊತ್ತು. ಅದು ನೇರ ಮತ್ತು ಇಕ್ಕಟ್ಟು -ಕತ್ತಿಯ ಅಲಗಿನಂತೆ. ಅದರ ಮೇಲೆ ನಡೆವುದೆಂದರೆ(*) ನನಗೆ ಉಲ್ಲಾಸ, ಜಾರಿದಾಗಲೆಲ್ಲ ಕಣ್ಣೀರಿಡುತ್ತೇನೆ. ....ನನ್ನ ದೌರ್ಬಲ್ಯದ ಪರಿಣಾಮವಾಗಿ ಸಾವಿರ ಬಾರಿ ಸೋತರೂ ನಾನು ಎಂದಿಗೂ ಶೃದ್ಧೆಗೆಡುವುದಿಲ್ಲ. --ಸತ್ಯವೇ ಭಗವಂತನು , ನನ್ನ ಪಾಲಿಗೆ ಭಗವ...

ASCII ಫಾಂಟ್ ನಲ್ಲಿರುವ ಕನ್ನಡವನ್ನು ಓದಲು ಆಗುತ್ತಿಲ್ಲವೇ ?

ನಾನು ನನ್ನ ಪರ್ಸನಲ್ ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು ಬರಹವನ್ನೋ ನುಡಿಯನ್ನೋ ಅಥವಾ ಮತ್ತಾವುದನ್ನೋ ಬಳಸಿ ಬರೆದವಾದಲ್ಲಿ ಓದಲೇ ಆಗುತ್ತಿರಲಿಲ್ಲ . ಬಹುಶಃ ವಿಂಡೋಸ್ ನಲ್ಲಿ ಕೂಡ ಸಂಬಂಧಪಟ್ಟ ಫಾಂಟ್ ಇಲ್ಲದಿದ್ದರೆ ಅಲ್ಲೂ ಕಾಣಿಸಲಿಕ್ಕಿಲ್ಲ. ಅಂಥ ಸಮಯದಲ್ಲಿ ಇವತ್ತು ಗೂಗಲ್ ನಲ್ಲಿ ಹುಡುಕಿದಾಗ ಸಿಕ್ಕ ಕೊಂಡಿ ಇದು. http://aravindavk.in/ascii2unicode/ ಆ ಪುಟದಲ್ಲಿ ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು ಸಹಾಯ ಮಾಡುವ ತಂತ್ರಾಂಶ ಇದೆ. ಎಡಗಡೆ ಇರುವ ಜಾಗದಲ್ಲಿ ನುಡಿ/ಬರಹ ದಲ್ಲಿ ಬರೆದ ಪಠ್ಯವನ್ನು ಹಾಕಿ ನಂತರ ಕನ್ವರ್ಟ್ ಅಂತ ಇರುವ ಬಟನ್ ಒತ್ತಿ. ಪಕ್ಕದ ಜಾಗದಲ್ಲಿ ಯುನಿಕೋಡ್ ಗೆ ಬದಲಾವಣೆಗೊಂಡು ಕಾಣಿಸುತ್ತದೆ. ಅರವಿಂದರಿಗೆ ತುಂಬಾಆಆಆಆಆಆಆ ಧನ್ಯವಾದಗಳು.

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"

೧೯೩೨ ರಲ್ಲಿ ಅಚ್ಚಾದ ಒಂದು ಪತ್ತೇದಾರಿ ನೀಳ್ಗತೆಯೊಂದನ್ನು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ ಇಳಿಸಿಕೊಂಡು ಓದಿದೆ. ಅದರ ಹೆಸರು - ಎರಡೆರಡು ಹೆಸರು ಕೊಡುವ ಹಳೆಯ ವಾಡಿಕೆಯಂತೆ - "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !" ಧಾರವಾಡದ ಬಳಿಯ ಆನಂದವನ, ಅಗಡಿಯ ಶ್ರೀ ಶೇಷಾಚಲ ಪ್ರೆಸ್ಸ್ ಮತ್ತು ಗ್ರಂಥಮಾಲೆಯ ಪ್ರಕಟಣೆ ಇದು. ಕನ್ನಡ, ದೇವನಾಗರೀ, ರೋಮನ್ ಲಿಪಿಗಳಲ್ಲಿ ಪ್ರಕಾಶನ ಸಂಶೆಯ ಹೆಸರನ್ನು ಬರೆದಿದ್ದಾರೆ . ಅಡಿಯಲ್ಲಿ - ಮರಾಠಿಯಲ್ಲಿ ' ಹೇ ಪುಸ್ತಕ ಬಿ.ಪ.ಕಾಳೆ , ಯಾನೀ ಅನಂದವನ-ಅಗಡಿ ಯೇಥೀಲ ಆಪಲ್ಯಾ ಶ್ರೀ ಶೇಷಾಚಲ ಛಾಪಖಾನ್ಯಾತ ಛಾಪಿಲೆ' ಅಂತ ಮರಾಠಿ-ದೇವನಾಗರಿಯಲ್ಲಿ ಮುದ್ರಿಸಿದ್ದಾರೆ! ಇದು ಸದ್ಬೋಧಚಂದ್ರಿಕೆಯ 'ಆಷಾಢ ಶಕೆ ೧೮೫೪, july 1932'ರ ನಾಲ್ಕನೇ ಸಂಚಿಕೆ . ಈ ಅಗಡಿಯ ಶೇಷಾಚಲ ಸಂಸ್ಥೆ, ಅಲ್ಲಿಯ ಶೇಷಾಚಲ ಸಾಧುಗಳು ಮಾಡಿದ ಕನ್ನಡ ಸೇವೆ ಅಪಾರವಾಗಿದ್ದಿರಬೇಕು. ಇರಲಿ. ಈ ಪುಸ್ತಕವನ್ನು ತಿರುವಿ ಹಾಕಿದಾಗ ...... ಈ ಕತೆಯು ೨೫ ಪುಟಗಳದ್ದು. ಪ್ರತಿ ಅಧ್ಯಾಯಕ್ಕೆ ಒಂದು ತಲೆಬರಹ - ಮತ್ತು ಒಂದು ಅಡಿಬರಹ . ಆ ತಲೆಬರಹಗಳು , ಅಡಿಬರಹಗಳು , ಒಳಗಿನ ಹೂರಣ ಏನೆಂದು ನೋಡೋಣ ಬನ್ನಿ . ೧) ಇದ್ದ ಮೂವರಲ್ಲಿ ಕದ್ದವರಾರು ? - (ರವಿಕಾಣದುದಂ ಕವಿ ಕಾಂಬಂ) ಒಂದು ಬ್ಯಾಂಕು , ಅಲ್ಲಿ ತಿಜೋರಿ , ಅದನ್ನು ತೆಗೆಯಬಲ್ಲವರು ಇಬ್ಬರು , ಮ್ಯಾನೇಜರೂ ...

ಪುಸ್ತಕನಿಧಿ-ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು'

ಈಗ ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು' ಎಂಬ ಪುಸ್ತಕವನ್ನು ಓದುತ್ತಿದ್ದೇನೆ . ನವರತ್ನ ರಾಮರಾವ್ ಅವರು ಬ್ರಿಟಿಷ್ ಸರಕಾರದ ಆಡಳಿತದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು . ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕದ ಬಗೆ ಅಲ್ಲಲ್ಲಿ ಓದಿದ್ದೆ. ಪುಸ್ತಕದ ಅಂಗಡಿಯಲ್ಲಿ ನೋಡಿದಾಗ, ಓದೋಣವೆಂದು ಬಹುದಿನಗಳ ಹಿಂದೆ ಕೊಂಡಿದ್ದೆ. ಈಗ ಓದುತ್ತಿದ್ದೇನೆ . ಪುಸ್ತಕವು ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ, ಅಂದಿನ ದಿನಮಾನಗಳ ಪರಿಚಯ ನಮಗಾಗುತ್ತದೆ. ಅದರಲ್ಲಿನ ಒಂದು ಪ್ರಸಂಗವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ಈ ಪುಸ್ತಕವು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದ (http://www.dli.gov.in/cgi-bin/metainfo.cgi?&title1=Kelavu%20Nesapugal%27u&author1=Raama%20Navaratna&subject1=GEOGRAPHY.%20BIOGRAPHY.%20HISTORY&year=1954%20&language1=kannada&pages=481&barcode=2030020027649&author2=&identifier1=&publisher1=Jiivana%20Kaaryaalaya&contributor1=&vendor1=NONE&scanningcentre1=rmsc,%20iiith%20&slocation1=NONE&sourcelib1=Osmania%20University&scannerno1=2&digitalrepublisher1=Digital%20Library%20Of%20India...

DLI ಪುಸ್ತಕ‌ನಿಧಿ ‍‍.... ಬಾಳಿನ‌ ಗುಟ್ಟು

ಹಿಂದೆ ಎಂದೋ ಇಳಿಸಿಕೊಂಡ ಈ ಪುಸ್ತಕವನ್ನು ತೀರಾ ಇತ್ತೀಚಿಗಷ್ಟೇ ಓದಿದೆ. ಇದು ಇಂಗ್ಲಿಷ್ ನಿಂದ ಗೌರೀಶ ಕಾಯ್ಕಿಣಿ ಅವರು ಅನುವಾದ ಮಾಡಿದ ಪುಸ್ತಕ. ಪ್ರತಿಯೊಬ್ಬರ ಬದುಕು ರೂಪುಗೊಳ್ಳುವುದು ಹೇಗೆ? ನಮ್ಮ ನಿಮ್ಮ ಜೀವನ, ಸ್ವಭಾವ ಹೀಗಿರಲು ಕಾರಣಗಳೇನು? ಮಕ್ಕಳನ್ನು ಬೆಳೆಸುವಾಗ ತಾಯಿ- ತಂದೆಯರು, ಶಾಲೆಯಲ್ಲಿ ಶಿಕ್ಷಕರು ಗಮನಿಸಬೇಕಾದುದೇನು? ಇವೇ ಮು೦ತಾದ ಸಂಗತಿಗಳು ಇಲ್ಲಿ ಇವೆ. ಎಳೆಯತನದ ಯಾವೆಲ್ಲ ಸಂಗತಿಗಳು ಮನುಷ್ಯನ ಇಡೀ ಜೀವನವನ್ನು ಪ್ರಭಾವಿಸಿ ಯಶಸ್ವೀ ಜೀವನಕ್ಟೋ ವಿಫಲತೆಗೋ ಹೇಗೆ ಕಾರಣವಾಗುತ್ತವೆ ಎಂಬುದನ್ನು ಮನಗಾಣಬೇಕಾದರೆಈ ಪುಸ್ತಕವನ್ನು ನೀವು ಓದಲೇಬೇಕು. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲೂ ಈ ಪುಸ್ತಕ ಇರುವುದಾದರೂ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ತಾಣದಲ್ಲಿ ಈ ಪುಸ್ತಕವು ಪೀಡಿಎಫ್ ರೂಪದಲ್ಲಿಯೇ ಇದೆ! ಅದರ ಕೊಂಡಿ ಇಲ್ಲಿದೆ. http://oudl.osmania.ac.in/handle/OUDL/3317
http://nannakanda.blogspot.com/ ಬ್ಲಾಗಿಷ್ಟರಿಂದ ಆಮಂತ್ರಿತರಿಗೆ ಮಾತ್ರ ; ಎಲ್ಲರಿಗೂ ಅಲ್ಲ http://suvarnaangala.blogspot.com/ ಸಂಪದಿಗರಾದ ಚಾಮರಾಜ ಸವಡಿ ಅವರು ಬರೆದ ಕಚೇರಿ ವಾತಾವರಣದ ಬಗೆಗಿನ ಕೆಲವು ಬರಹಗಳು , ಶ್ರೀದೇವಿ ಕಳಸದ ಅವರ ಕೆಲವು ಕವನಗಳು ಇಲ್ಲಿವೆ . ಒಂದು ವರ್ಷದಿಂದ ಏನೂ ಸೇರ್ಪಡೆ ಇಲ್ಲ . http://anchemane.blogspot.com/ ಆದರ್ಶ ಅಂಚೆ ಅನ್ನುವವರ ಮನೆ ಇದು . ತೂತ್ ಕಂಡೀಶನ್ ಬಸ್ಸು ಒಂದೇ ಬರಹ ಇದೆ . ಎರಡು ವರ್ಷ ಹಿಂದಿನದ್ದು. ( ನಾನು ಹೀಗೆಲ್ಲ ಬರೀತ ಹೋದರೆ ಮಲಗಿರುವ ಒಂದಿಷ್ಟು ಬ್ಲಾಗುಗಳು ಮತ್ತೆ ಎದ್ದಾವು ! ಅದೂ ಒಂಥರ ಅಳಿಲುಸೇವೆ ನನ್ನಿಂದ !!) http://antaranga.blogspot.com/ ಇಲ್ಲಿ ಮುನ್ನೂರಕ್ಕೂ ಹೆಚ್ಚು ಬರಹಗಳು ಇವೆ ... ತಡೀರಿ ಎಲ್ಲ ನೋಡಿ ಬರೀತೀನಿ!!
ಕನ್ನಡಬಲ (http://www.kannadabala.blogspot.com/) ಇದು ಕನ್ನಡಾಭಿಮಾನಿ ರೋಹಿತ್ ರಾಮಚಂದ್ರಯ್ಯ ಅವರ ಬ್ಲಾಗು . ಇಲ್ಲಿ ೭೦೦ ಕನ್ನಡ ಬ್ಲಾಗುಗಳು , ಕನ್ನಡ ತಾಣಗಳು, ಸುದ್ದಿ ತಾಣಗಳು , ಪೋರ್ಟಲ್ ಗಳು, ದ್ವಿಭಾಷಾ ತಾಣಗಳು , ಆಂಗ್ಲ ತಾಣಗಳು ಗಳ ಕೊಂಡಿಗಳು ಸಿಗುತ್ತವೆ !!
ಕನ್ನಡ ಬ್ಲಾಗುಲೋಕದಲ್ಲಿ ವಿಹಾರ kannadabala.blogspot.com ಎಂಬ ಬ್ಲಾಗಿನಲ್ಲಿ ಕನ್ನಡ ಬ್ಲಾಗ್ ಗಳ ಪಟ್ಟಿಯೇ ಸಿಕ್ಕಿತು . ಸರಿ ಎಲ್ಲ ಜಾಲಾಡೋಣ ಅಂತ ಹೊರಟೀನಿ . ಅಲ್ಲಿ ಏನೇನಿದೆ ನೋಡೋಣ .. ವಿಶೇಷ ಕಂಡದ್ದನ್ನು ತಿಳಿಸ್ತೀನಿ .... ಇದೋ ಶುರು ಕನ್ನಡಬಲದಿಂದಲೇ !!!!
ಗೋಳಾಟ ಅಯ್ಯೋ, ನಾನು ಧಡ್ಡನಾದೆನು ಅಯ್ಯೋ, ನನ್ನ ತಲೆಯು ಓಡಲೊಲ್ಲದು ಅಯ್ಯೋ, ನನಗೆ ಕೆಲಸ ಇಲ್ಲವು ಅಯ್ಯೋ, ನನಗೆ ಕೆಲಸ ಮಾಡುವ ಮನಸೂ ಇಲ್ಲವು ! ಅಯ್ಯೋ, ನನಗೆ ಹೇಳುವರಾರೂ ಇಲ್ಲವು ಅಯ್ಯೋ, ನನಗೆ ಕೇಳುವರಾರೂ ಇಲ್ಲವು ಅಯ್ಯೋ, ನಾನು ಏನೂ ಸಾಧಿಸಲಿಲ್ಲವು ಅಯ್ಯೋ, ನಾನು ಏನೂ ಸಾಧಿಸುತಿಲ್ಲವು ಅಯ್ಯೋ, ನನಗೆ ಏನೂ ಸಾಧಿಸಲಿಕ್ಕಿಲ್ಲವು ಅಯ್ಯೋ, ನನಗೆ ಸಮಾಧಾನ ಇಲ್ಲವು ಅಯ್ಯೋ, ನಾನು ಏನೂ ಕಲಿಯುತಿಲ್ಲವು ಅಯ್ಯೋ, ನನಗೆ ಏನೂ ತೋಚುತಿಲ್ಲವು ಅಯ್ಯೋ, ಇನ್ನೆರಡು ಸಾಲು ಹೊಳೆಯುತಿಲ್ಲವು ಅರೆ , ಅಂತೂ ಈ ಹಾಡನ್ನು ಪೂರ್ತಿಗೊಳಿಸಿದೆನು !
http://www.youtube.com/watch?v=mL6Sc9SU5jE ಇಲ್ಲಿ ’ಛೋಟೀ ಛೋಟೀ ಸೀ ಬಾತ್’ ಎಂಬ ಹಿಂದಿ ಚಿತ್ರದ ಹಾಡೊಂದಿದೆ . ಹಿಂದೆ ಕೇಳಿರದಿದ್ದರೆ ಈಗ ಕೇಳಿ . ಈ ಹಾಡನ್ನು ಅನುವಾದಿಸಲು ಹವಣಿಸಿದ್ದೇನೆ . ಸಾಧ್ಯವಾದಷ್ಟು , ಮೂಲದ ಲಯ , ಧಾಟಿಯನ್ನು ಇಟ್ಟುಕೊಂಡಿದ್ದೇನೆ. ಹೀಗೇತಕೋ ಆಗೋದು ಬದುಕಲಿ ನಾನರಿಯೆನೂ ! ಹೋದ ಮೇಲೆ ಯಾರೋ ಕಾಡೋದು ನೆನಪು ಅವರದೂ , ಸಣ್ಣ ಸಣ್ಣವೇ ವಿಷಯಾ ! ಅರಿವಿಲ್ಲದೆ ಕಳೆದ ಕ್ಷಣಗಳೂ , ಬಣ್ಣ ಬದಲಿಸಿ ಕ್ಷಣಾ ಕ್ಷಣಾ , ಮನಸಿಗೇ ತಲ್ಲಣಾ , ಹೆದರಿಕೆ ತುಂಬುತಾ , ಸಜ್ಜುಗೊಳ್ಳದೇ ಒಡೆದು ಹೋಯಿತೇ , ಅಯ್ಯೋ , ನನ್ನ ಕನಸಿನರಮನೆ ? ಅದೇ ಹಾದಿಯೂ , ಅಲ್ಲೇ ನಡಿಗೆಯೂ , ಆದರೆ ಇಲ್ಲ ನನ್ ಜತೇ , ನನ್ ಜತೆ ನಡೆವಾತನೂ , ಹುಡುಕಿವೆ ಅವನನೂ ಅತ್ತ ಇತ್ತ ಕಂಗಳೂ ... ಕಳೆದುಕೊಂಡೆನೇ ಆ ಸಂಜೆ ಸುಮಧುರ ? ಆ ನನ್ನ ದಿನಗಳ , ಆ ನನ್ನ ಅವನನು ?
ವೀರ್ ಝಾರಾ ಚಿತ್ರದ ... ತೇರೇಲಿಯೇ ಹಂ ಹೈ ಜಿಯೇ ಹರ ಆಂಸೂ ಪಿಯೇ ... ಹಾಡಿನ ಅನುವಾದ ಪ್ರಯತ್ನ ... ನಿನಗಾಗಿಯೇ ನಾ ಬದುಕಿಹೆ ಕಣ್ಣೀರನೇ ಕುಡಿಯುತ, ಆದರೂನು ಆರದು ಬಯಕೆಯ ಬೆಂಕಿಯು, ನಿನಗಾಗಿಯೇ ನಾ ಬದುಕಿಹೆ ಹೊಲ್ ಕೊಂಡು ತುಟಿಗಳ ( :) ) ಬದುಕಿದು ತಂದು ಇತ್ತಿತು ಕಳೆದ ದಿನಗಳ ಪುಸ್ತಕ, ಈಗ ನಮ್ಮನು ಮುತ್ತಿವೆ ಆ ದಿನಗಳ ನೆನಪುಗಳು, ಕೇಳದೆಯೇ ದೊರಕಿವೆ ಎನಿತೊಂದು ಉತ್ತರ, ಬಯಸಿದೆವು ಏನನು , ಪಡೆದೆವು ಏನನ ನಾವು , ನೋಡಿರಿ ಜಗವಿದು ನಮ್ಮೊಂದಿಗೆ ಸಾಧಿಸಿತು ವೈರವ ..?....?......?... ............. ............. ............ ( ಇಲ್ಲಿನ ಸಾಲುಗಳು ಸರಿಯಾಗಿ ಸಿಕ್ಕಿಲ್ಲ ) ಲೋಕವು ನಿಷ್ಕಾರಣ ದ್ವೇಷವ ಮಾಡಿತು ...
ವಿಶ್ವೇಶ್ವರಯ್ಯ , ಭೀಮಸೇನ್ ಜೋಶಿ , ಮಹಾರಾಷ್ಟ್ರ ಟೈಮ್ಸ್ ಹದಿನೈದು ದಿನದ ಹಿಂದೆ ಮಹಾರಾಷ್ಟ್ರ ಟೈಮ್ಸ್ ಹೆಸರಿನ ಮರಾಠಿ ಪತ್ರಿಕೆ( ಇದು ಟೈಮ್ಸ್ ಬಳಗದ್ದು)ಯಲ್ಲಿ ವಿಶ್ವೇಶ್ವರಯ್ಯ ಕುರಿತು ಪುಟಗಟ್ಟಲೆ ಬಂದಿತ್ತು . ಪತ್ರಿಕೆ ಕೈಗೆ ಸಿಗಲಿಲ್ಲ . ಸಿಕ್ಕಿದ್ದರೆ ಕಮಕಮ ಅಂತ ಓದಿ ಏನು ಬರೆದಿದ್ದಾರೆ ಅಂತ ತಿಳ್ಕೋಬಹುದಿತ್ತು . ಮೊನ್ನೆ ಭೀಮಸೇನ್ ಜೋಶಿಯವರಿಗೆ ಭಾರತರತ್ನ ಸಿಕ್ಕಿದ್ದು ಇವತ್ತು ಇಂಗ್ಲೀಷ್ ಟೈಮ್ಸ್ ಗಮನಕ್ಕೆ ಬಂದಿದೆ ! .. ನಿನ್ನೆಯಂತೂ ಯಾವ ಇಂಗ್ಲೀಷ್ / ಹಿಂದಿ ಚಾನೆಲ್ ಗೂ ಇದು ಸುದ್ದಿಯಾಗಲೇ ಇಲ್ಲ ; ಒಂದು ಚಾನೆಲ್ ಸುದ್ದಿ ತೋರಿಸಿತಾದರೂ ಅವರ ಹತ್ರ ಯಾವ್ದೇ ಕ್ಲಿಪ್ಪಿಂಗ್ ಇರಲಿಲ್ಲ ; ಹಾಗಾಗಿ ಅವರು ಇಡೀ ಭಾರತ್ ದೇಶಂ ಹಾಡೋ ಅಥವಾ ಇನ್ನಾವ್ದೋ ತೋರಿಸಿದ್ರು ! ಇವತ್ತಿನ ಮಹಾರಾಷ್ಟ್ರ ಟೈಮ್ಸ್ ಕೈಯಲ್ಲಿದೆ . ಒಂದು ಇಡೀ ಪುಟದಷ್ಟು ಬೀಮಸೇನ್ ಜೋಶಿ ಬಗ್ಗೆ ಇದೆ . ಪು.ಲ. ದೇಶಪಾಂಡೆ ಅವರ ಸಂದರ್ಶನವೂ ಇದೆ . ನಿನ್ನೆಯ ಪತ್ರಿಕೆಯಲ್ಲೂ ಅವರ ಬಗ್ಗೆ ಬಹಳ ಬಂದಿತ್ತಂತೆ . ಮುಖಪುಟದ ತಲೆಬರಹ ಅಂತೆ . ಓದಲಿಕ್ಕೆ ಪ್ರಯತ್ನ ಮಾಡ್ತಾ ಇದ್ದೀನಿ . ಸಂಪಾದಕೀಯದಲ್ಲಿ ಹೀಗೆ ಬರೆದಿದ್ದಾರೆ . ... ಇವರು ಮಹಾರಾಷ್ಟ್ರದವರಲ್ಲ ಎಂದು ಕೆಲವರು ಆಕ್ಷೇಪ ಮಾಡುವರಾದರೂ , ಪಂಡರಾಪುರದ ವಿಟ್ಠಲ ಎಷ್ಟು ಮಹಾರಾಷ್ಟ್ರೀಯನೋ ಅಷ್ಟೇ ಭೀಮಸೇನ್ ಜೋಷಿ ಕೂಡ ಮಹಾರಾಷ್ಟ್ರದವರು. ..( ಪಂಡರಾಪುರದ ವಿಟ್ಠಲನ ಕುರಿತಾದ ಪ್ರಸ್ತಾಪ ಗಮನಿಸಿದಿರಿ ತಾನೇ...
ಕನಕದಾಸರು ಮತ್ತು ಗೌರವ, ಪ್ರಶಸ್ತಿಯ ಆಸೆ. ಮಾಸ್ತಿಯವರು ಕನಕದಾಸರ ಕುರಿತು ಬರೆಯುವಾಗ ಹೀಗೆ ಬರೆದಿದ್ದಾರೆ . "ಕುರುಬ ವಂಶದಲ್ಲಿ ಜನಿಸಿ ತಮ್ಮ ಪಾಳೆಯಪಟ್ಟನ್ನು ಕೆಲವುಕಾಲ ಆಳಿ ಆಮೇಲೆ ಹರಿದಾಸನ ಪದವಿಗೇರಿದ ಕನಕದಾಸರು ತಮ್ಮ ಬಾಳಿನ ರೀತಿಯಿಂದ ತಮ್ಮ ಗುರು ವ್ಯಾಸರಾಯರಿಗೆ ಮೆಚ್ಚುಗೆಯ ಶಿಷ್ಯರಾದರು . ದ್ವಿಜರಾದ ಗುರು , ದ್ವಿಜವಂಶದವನಲ್ಲದ ಈ ಶಿಷ್ಯ ತಮಗಿಂತ ಹೆಚ್ಚಿನ ಸಿದ್ಧಿಯನ್ನು ಪಡೆದಿರುವ ದೈವಭಕ್ತ ಎಂದು ಇವರನ್ನು ಹೊಗಳುತ್ತಿದ್ದರಂತೆ . ವ್ಯಾಸರಾಯರು ಕನಕದಾಸರು ತಮಗಿಂತ ಹಿರಿಯರೆಂದು ಹೊಗಳಿದರೂ ಕನಕದಾಸರು ತಾವು ಗುರುವಿನ ಪೀಠದಲ್ಲಿ ಕುಳಿತೇನು ಎಂದು ಮುಂದರಿಯಲಿಲ್ಲ. ಈ ನಡತೆಯ ರಹಸ್ಯ ಏನು ಎಂದು ಆಧುನಿಕರಾದ ನಾವು ವಿಚಾರ ಮಾಡಬೇಕು. " ಇಲ್ಲಿನ "ರಹಸ್ಯ" ಏನೆಂದು ನನಗೆ ತಿಳಿಯಲಿಲ್ಲ ; ( ನಿಮಗೆ ಗೊತ್ತಿದ್ದರೆ ಅಥವಾ ತೋಚಿದರೆ ತಿಳಿಸಿ ) . ಆದರೆ ಇಂಥ ಜನ ನಮ್ಮ ನಡುವೆ ಇದ್ದಾರೆ , ಅರ್ಹತೆಯಿದ್ದೂ ಪ್ರಶಸ್ತಿ,ಗೌರವ ಬಯಸದೆ "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ? " ಎಂದು ಹಾಡಿಕೊಂಡು ಇರುವವರು . ಇಂಥವರೇ ಈ ರಹಸ್ಯವನ್ನು ತಿಳಿಹೇಳಿದರೆ ಬಲು ಚೆನ್ನು.
ಜೀವನಕಲೆ ಕರ್ಣಾಟಕದ ಕಲೆ ಎಂಬ ಲೇಖನದಲ್ಲಿ ಮಾಸ್ತಿಯವರು ಹೀಗೆ ಬರೆದಿದ್ದಾರೆ ಬಹುಕಾಲ ಬದುಕಬೇಕು. ತುಂಬ ಸುಖಪಡಬೇಕು. ಜೊತೆಯ ಜೀವನಗಳನ್ನು ಆದಷ್ಟು ಸುಖ ಪಡಿಸಬೇಕು ಎನ್ನುವುದು ಜೀವನದ ಆಳದಲ್ಲಿರುವ ಆಸೆ , ಹಂಬಲಿಕೆ ; ಮನುಷ್ಯನ ಇತಿಹಾಸವೆಲ್ಲ ಇದರಿಂದ ಬೆಳೆದಿದೆ. ಕನ್ನಡದ ಜನ ಈ ಉನ್ನತಿಯನ್ನ ಸಾಧಿಸಿದ್ದಾರೆ. ಸ್ವಚ್ಛತೆ , ಅಲಂಕಾರ , ರಂಗೋಲಿ , ಹಾಡು , ಸಂಗೀತ , ನೃತ್ಯ , ಶಿಲ್ಪಕಲೆ , ಬಯಲಾಟ, ಯಕ್ಷಗಾನ, ಹಬ್ಬಹುಣ್ಣಿವೆ , ಜಾತ್ರೆ , ಪೂಜೆ ಪುನಸ್ಕಾರ / ಇತ್ಯಾದಿ .
ಕನ್ನಡ ಶಬ್ದ ಸಂಪತ್ತು ಕುರಿತು ಮಾಸ್ತಿ. ಕನ್ನಡಕ್ಕೆ ಆಗಿಬಂದ ಸಂಸ್ಕೃತ ಪದ ಕನ್ನಡದ ಸ್ವತ್ತೇ . ಅದನ್ನು ಬಳಸಲು ಹಿಂದೆಗೆಯುವುದು ಭಾಷೆಯನ್ನರಿಯದವನ ಲಕ್ಷಣ. ಕನ್ನಡದಲ್ಲಿ ಶಬ್ದಗಳಿಲ್ಲದಿರುವದರಿಂದ ಈ ವಿಷಯ ಆ ವಿಷಯವನ್ನು ಹೇಳಲಾಗುವದಿಲ್ಲ ಎನ್ನುವುದು ನಮ್ಮಲ್ಲಿ ಕೆಲವರ ಅಭಿಪ್ರಾಯ. ಇದು ಕನ್ನಡವನ್ನು ಕಲಿಯದೆ ಅದರ ವಿಚಾರವನ್ನು ಮಾತನಾಡುವುದರ ಫಲ. ರತ್ನಾಕರನು ಕನ್ನಡದಲ್ಲಿ ಜೀವನ , ಮೋಕ್ಷ, ರಾಷ್ಟ್ರ , ಸಂಸಾರವನ್ನು ಕುರಿತ ಎಷ್ಟು ಗಹನವಾದ ವಿಷಯಗಳನ್ನು ಎಷ್ಟು ಸುಲಭವಾದ ಪದಗಳಿಂದ ನಿರೂಪಿಸಿದ್ದಾನೆನ್ನುವುದನ್ನು ನೋಡಿದವರು ಕನ್ನಡವನ್ನು ಕುರಿತು ಈ ಹೀನಾಯವನ್ನು ನುಡಿಯಲಾರರು. ಮಹಾಕವಿ ಕಾವ್ಯವನ್ನು ರಚಿಸಿದ್ದು ಸಾರ್ಥಕವಾಗಬೇಕಿದ್ದರೆ ಅವನ ಶಬ್ದ ಸಂಪತ್ತು , ಅದರ ಹಿಂದಿನ ಭಾವ ಸಂಪತ್ತು ಎಲ್ಲ ಕಿರಿಯರಿಗೆ ಸಿದ್ಧಿಸಬೇಕು. ಅದಾಗದಿದ್ದರೆ ತಾಯಿ ಅಡುಗೆ ಮಾದಿತ್ತು ಮಕ್ಕಳು ಉಣ್ಣದಂತೆ ; ಅಡುಗೆ ಮಾಡಿದ ಶ್ರಮ ವ್ಯರ್ಥ. ಮಾಡಿದ ಜೀವಕ್ಕೆ ತೃಪ್ತಿಯಿಲ್ಲ; ಮಕ್ಕಳ ಹಸಿವಂತೂ ಹಾಗೆಯೇ ಉಳಿಯುವುದು.
ಕಾಳಿದಾಸನು ಸರಸ್ವತಿಗೆ ಬೈದನೇ ? ಅದೂ ಏನೆಂದು? ನಾನು ಮಾಸ್ತಿಯವರ ಒಂದು ಪುಸ್ತಕ ಓದುವಾಗ ಈ ವಿಷಯ ಕಣ್ಣಿಗೆ ಬಿತ್ತು. ಒಮ್ಮೆ ಕಾಳಿದಾಸ ದಂಡಿ ಇವರಲ್ಲಿ ಯಾರ ಕವಿತೆ ಶ್ರೇಷ್ಠ ಎಂದು ಪ್ರಶ್ನೆ ಬಂದಿತು. ಇದನ್ನು ನಿರ್ಣಯಿಸುವದಕ್ಕೆ ಯಾರಿಗೂ ಧೈರ್ಯವಿಲ್ಲ. ಸರಸ್ವತಿಯನ್ನು ಕೇಳೋಣ ಎಂದು ಒಪ್ಪಿದರು . ದೇವಿ ಪ್ರತ್ಯಕ್ಷವಾದಾಗ ದಂಡಿ ಒಂದು ಶ್ಲೋಕವನ್ನು ಹೇಳಿದನು. ಕಾಳಿದಾಸ ಒಂದು ಶ್ಲೋಕವನ್ನು ಹೇಳಿದನು. ಶ್ಲೋಕ ಯಾವುವು ಈಗ ನಮಗೆ ಗೊತ್ತಿಲ್ಲ. ಶ್ಲೋಕಗಲನ್ನು ಹೇಳಿದ ಮೇಲೆ ಕವಿಗಳು ತೀರ್ಪನ್ನು ಬೇಡಿ ಕೈ ಮುಗಿದು ನಿಂತರು. ದೇವಿ , "ಕವಿರ್ದಂಡೀ, ಕವಿರ್ದಂಡೀ , ನಸಂಶಯಃ " ಎಂದಳು . ದಂಡಿಗೆ ಸಂತೋಷ ಆಯಿತು. ಅವನು ಹೆಮ್ಮೆಯಿಂದ ಕಾಳಿದಾಸನ ಕಡೆ ನೋಡಿದನು. ಕಾಳಿದಾಸನಿಗೆ ಅಸಾಧ್ಯ ಕೋಪ ಬಂದಿತು. ಅವನು "ಹೇ ರಂಡೇ ಅಹಂ ಕೋವಾ " ( ಹಾಗಾದರೆ ನಾನು ಯಾರು?) ಎಂದು ಕೇಳಿದನು . ದೇವಿ "ತ್ವಮೇವಾಹಂ,ತ್ವಮೇವಾಹಂ, ತ್ವಮೇವಾಹಂ, ನಸಂಶಯಃ " ಎಂದಳು ; ಮರೆಯಾದಳು. ಕಾಳಿದಾಸ ಎಲ್ಲ ಕವಿಗಳಿಗಿಂತ ಹೆಚ್ಚು ಎಂದು ಕವಿ ಸಮುದಾಯ ಒಪ್ಪಿತು.
ಮುಂಬೈ, ಎಂತಹ ಐಡಿಯಾ ! ನೀವು ಇತ್ತೀಚೆಗೆ ಮುಂಬೈ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸ್ತಾ ಇರಬಹುದು . ಅದೇ ಮರಾಠೀ ಭಾಷಿಕರ ಮತ್ತು ಹೊರಗಿನಿಂದ ಬಂದವರ ತಿಕ್ಕಾಟದ ವಿಷಯ . ಇದೇ ಸಮಯಕ್ಕೆ ಐಡಿಯಾ ಎಂಬ ಟೆಲಿಕಾಂ ಸಂಸ್ಥೆ ಮುಂಬೈ ಪ್ರವೇಶಿಸಿದೆ . ಎಲ್ಲೆಡೆ ಅದರ ದೊಡ್ಡ ಹೋರ್ಡೀಂಗ್ ಗಳು ತಲೆಯೆತ್ತಿವೆ - ಅವುಗಳ ವಿಷಯ ಹೀಗೆ ... ಬೇರೆ ಬೇರೆ ಜನರ ಚಿತ್ರಗಳಿವೆ . ಜತೆಗೆ ಇವನು ಪುಣೆಯವನು , ಮುಂಬೈಯವನಲ್ಲ !? ಇವನು ಗುಜರಾತಿನವನು , ಮುಂಬೈಯವನಲ್ಲ !? ಇವನು ಪಂಜಾಬಿನವನು , ಮುಂಬೈಯವನಲ್ಲ !? ...ಇತ್ಯಾದಿ . ಎಂಬ ವಾಕ್ಯಗಳಿವೆ . ಈ ಸರಣಿಯಲ್ಲಿ ಕೊನೆಯದು . ಈ ಪ್ರಶ್ನೆಗೆ ಉತ್ತರ ಎಂಬಂತೆ , ಒಬ್ಬ ಮೊಬೈಲು ಕೈಯ್ಯಲ್ಲಿ ಹಿಡಕೊಂಡು ಹೇಳ್ತಿದ್ದಾನೆ . ನನ್ನ ನಂಬರ್ ಮುಂಬಯಿಯದು , ಆದಕಾರಣ ನಾನು ಮುಂಂಬಯಿಯವನು . ! ಅದಕ್ಕೆ ಒಂದು ಟ್ಯಾಗ್ ಲೈನ್ - ಮುಂಬೈ , ವ್ಹಾಟ್ ಎನ್ ಐಡಿಯಾ ! ಈ ಐಡಿಯಾ ಸಂಸ್ಥೆಯ ಜಾಹೀರಾತುಗಳನ್ನು ನೀವು ಟೀವೀ ಮತ್ತು ಇತರೆಡೆ ನೋಡಿರಬಹುದು . ಎಲ್ಲರೂ ಜಾತಿ ಭಾಷೆ ಇತ್ಯಾದಿಗಳು ಸೂಚಿಸುವ ಹೆಸರುಗಳ ಬದಲಾಗಿ ನಂಬರುಗಳಾಗಿ ಬಿಟ್ಟಿರೋದು , ಅಭಿಷೇಕ್ ಬಚ್ಚನ್ ಇರುವ ಜಾಹೀರಾತುಗಳನ್ನು ನೋಡಿದ್ದೀರಿ ತಾನೇ ?
ನಿನ್ನ ಕಂಗಳ ಹೊರತಾಗಿ ನಿನ್ನ ಕಂಗಳ ಹೊರತಾಗಿ ಜಗತ್ತಿನಲ್ಲಿ ಇರುವದಾದರೂ ಏನು ? ತೆರೆದಾಗ ಇವು ಬೆಳಗು , ಮುಚ್ಚಿದಾಗ ಸಂಜೆ , ನನ್ನ ಬದುಕೂ ಸಾವೂ ಈ ರೆಪ್ಪೆಗಳ ಕೆಳಗೆ ಈ ಕಣ್ಣರೆಪ್ಪೆಗಳ ಸಂದಿನಲ್ಲಿ ವಸಂತ ನಲಿಯುತಿದೆ ನನ್ನ ಕನಸುಗಳು ಇಲ್ಲಿ ಅಲೆಯುತಿವೆ ಈ ಕಂಗಳಲ್ಲಿ ನನ್ನ ಬರಲಿರುವ ದಿನಗಳ ಚಿತ್ರ ಇದೆ ಬಯಕೆಯ ಕಾಡಿಗೆಯಲಿ ಬರೆದ ನನ್ನ ಭಾಗ್ಯವಿದೆ . ( ತೇರೀ ಆಂಖೋಂ ಕೆ ಸಿವಾ ದುನಿಯಾ ಮೆ ರಖಾ ಕ್ಯಾ ಹೈ? ಎಂಬ ಹಿಂದಿ ಸಿನಿಮಾ ಹಾಡಿನ ಅನುವಾದ ಇದು)
ನನ್ನ ಬೆಲೆ ! ಒಂದುದಿನ ಹೆಮ್ಮೆಯಲಿ ನನ್ನವಳಿಗೆ ಹೇಳಿದೆನು- ’ನನ್ನ ಬೆಲೆ ಎಷ್ಟು ಗೊತ್ತೆ ? ... ಲಕ್ಷ’ :) ’ನನ್ನರಸ ಸುಮ್ಮನಿರಿ, ಯಾರಾದರೂ ಕೇಳಿಯಾರು, ನಮ್ಮ ಕೆಲಸದವಳ ಬಳಿ ಅಷ್ಟು ಬೆಲೆಯ ಫ್ಲ್ಯಾಟಿದೆ ’ :( :(