ಕೊಟ್ಟ ಕುದುರೆಯನೇರಲರಿಯದೆ-ಅಲ್ಲಮನ ವಚನ ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಅದರಂತೆ ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? ।ತಿರುಕಹಾರುವನಾಗಿ ಮೀಸೆ ತಿರುಚುವೆಯ? (ಡಿವಿಜಿ)
Posts
Showing posts from September, 2006
- Get link
- X
- Other Apps
ಇದಕ್ಕಾ ದೇವರ ಹಂಗೇಕೆ ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು ಜೀವ ಹೋದಡೆ ಸಾಯಿ ಇದಕ್ಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮಾ (ಲದ್ದೆಯ ಸೋಮ ಎಂಬಾತ ಬೀದರ್ ಜಿಲ್ಲೆಯವನು. ೧೨ನೆಯ ಶತಮಾನದವನು. ಲದ್ದೆ ಎಂದರೆ ಹುಲ್ಲಿನ ಹೊರೆ. ಹುಲ್ಲಿನ ಹೊರೆಯನ್ನು ಕಟ್ಟಿ, ಮಾರಿ, ಬಂದದ್ದರಲ್ಲಿ ಬದುಕಿದ್ದ ವ್ಯಕ್ತಿ ಈತ.)