Posts

Showing posts from June, 2008
ಕೊಲೆಗಾರರು ಯಾರು ? ಒಂದು ಹಾಸ್ಯ ಲೇಖನ ಸಂಪದದಲ್ಲಿ ’ ಕೊಲೆಗಾರರು ಯಾರು ? ’ ಬರಹ ಓದುತ್ತಿದ್ದಂತೆ ನಾನು ಹಿಂದೊಮ್ಮೆ ಸುಧಾದಲ್ಲಿ ಓದಿದ ಹಾಸ್ಯ ಬರಹ ನೆನಪಾಯಿತು . ಅದು ಯಾರು ಬರೆದಿದ್ದದ್ದು ನೆನಪಿಲ್ಲ ; ವಿಷಯ ಮುಖ್ಯ ತಾನೆ ? ಓದಿ ಸಂತಸ ಪಡಿ . ಒಬ್ಬ ಪತ್ತೇದಾರಿ ಸಾಹಿತ್ಯದ ಓದಿನ ಗೀಳಿನ ಮನುಷ್ಯ ಇರ್ತಾನೆ . ಅವನಿಗೆ ಒಂದ್ಸಲ ಓದಕ್ಕೆ ಏನೂ ಇಲ್ದೆ ತನ್ನ ಗೆಳೆಯನ ಹತ್ರ ಹೋಗಿ ಓದಕ್ಕೆ ಏನಾದ್ರೂ ಕೊಡೋ ಅಂತ ಕೇಳಿದಾಗ ಅವನು ಕೈಗೆ ಸಿಕ್ಕ ಪುಸ್ತಕಾನ ಕೊಟ್ಟು ಕಳಿಸ್ತಾನೆ . ಅದು ಷೇಕ್ಸಪಿಯರನ ಮ್ಯಾಕ್‍ಬೆತ್ ನಾಟಕದ ಅನುವಾದ . ಡಿ. ವಿ. ಜಿ ಅವರದ್ದು , ಹಳೆಗನ್ನಡ ಶೈಲಿಯಲ್ಲಿದೆ . ಮರುದಿನ ಅವನು ಬಂದು ಪುಸ್ತಕ ವಾಪಸ್ ಕೊಡ್ತಾ ಹೇಳ್ತಾನೆ ... ನಂಗೆ ಮ್ಯಾಕ್‍ಬೆತ್ ಮಾಡಿದ್ದು ಅನ್ನಿಸ್ಲಿಲ್ಲ . ’ಏನೋ?’ ’ಅದೇ ಮರ್ಡರು ’ ’ಯಾಕೋ’ ಈಗ ಅವರ ನಡುವೆ ಚರ್ಚೆ . ನಾನಾ ಥಿಯರಿಗಳು . ಆ ನಾಟಕದಲ್ಲಿ ಆಗಿರೋ ಕೊಲೇನ ಯಾರು ಮಾಡಿದ್ದು ? ಅಂತ ! --ಕ್ಲಿಯರ್ ಆಗೇ ಇದೆಯಲ್ಲೋ ? ಮ್ಯಾಕ್‍ಬೆತ್ ಮಾಡಿದ್ದು ಅಂತ ? -- ಅದ್ಯಾವ ಸೀಮೆ ಪತ್ತೇದಾರಿನೋ ? ಮೊದಲ ನೋಟಕ್ಕೆ ಕೊಲೆಗಾರ ಅನ್ನಿಸಿದೋನು ಕೊಲೆ ಮಾಡಿರೋದಿಲ್ಲ , ಇಷ್ಟೂ ಗೊತ್ತಿಲ್ವೇ ನಿಂಗೆ ? --ನಾಯಕಿ ಇರ್ತಾಳಲ್ಲ ? ಅವಳೇ ಇರಬೇಕು . ಮೇಣದ ಬತ್ತಿ ಹಿಡಿದು ಸಂಶಯಾಸ್ಪದ ಆಗಿ ರಾತ್ರಿ ಹೊತ್ತು ಓಡಾಡ್ತ ಇರ್ತಾಳಲ್ಲ ? ಒಂದು ವೇಳೆ ಅವಳಲ್ಲದಿದ್ರೆ
ಬರವಣಿಗೆಯ ಕನ್ನಡದ ದಿಕ್ಕು ಕನ್ನಡದಲ್ಲಿ ಸಂಸ್ಕೃತದ ಅತಿಬಳಕೆಯಿಂದ , ಸಂಸ್ಕೃತದ ಕಾಗುಣಿತ(ಸ್ಪೆಲ್ಲಿಂಗ್ಸ್ ) ನಿಂದಾಗಿ ಹಳ್ಳಿಗರಿಗೆ ಮತ್ತು ಸಂಸ್ಕೃತದ ಪರಿಚಯ ಇಲ್ಲದವರಿಗೆ ( ಅಂದರೆ ’ಕೆಳ’ ಎಂದು ತಿಳಿದಿರುವ ಜಾತಿಯ ಜನಕ್ಕೆ) ತೊಂದರೆ ಆಗಿದೆಯಂತೆ . ಅದಕ್ಕಾಗಿ ಮಹಾಪ್ರಾಣ , ಷ ಇತ್ಯಾದಿ ಅಕ್ಷರಗಳನ್ನು ತೆಗೆದು ಹಾಕಿ ಎಂಬ ವಾದ ಒಂದೆಡೆ ಎದ್ದಿದೆ . ( ಅಂದ ಹಾಗೆ ಚಾಯನೀಸ್ ಭಾಶೆಯಲ್ಲಿ ಸಾವಿರಾರು ಅಕ್ಶರಗಳಂತೆ ; ಅವರಿಗೆ ಏನು ತೊಂದರೆ / ಎಷ್ಟು ತೊಂದರೆ ಆಗಿದೆಯೋ ಏನೋ ; ಅವರು ಬಳಸ್ತಾ ಇಲ್ವೀ ; ನೂರಾರು ವರುಷ ಅದು ಬಾಳಿ ಬದುಕಿಲ್ವೇ? -- ನನಗೆ ಸರಿಯಾಗಿ ಗೊತ್ತಿಲ್ಲ) ಸರಿ ಈ ವಾದಾನೂ ಒಪ್ಕೊಳ್ಳೋಣ ; ಶಂಕರ ಭಟ್ಟರ ವಾದಾನೂ ಒಂತರ ಸರೀನೇ ; ಭಾಶೆಯ ಕಠಿಣತನವನ್ನು ಕಡಿಮೆ ಮಾಡಿ , ಪರಸ್ಪರ ಓದಿ , ಬರೆಯಲು , ಹೆಚ್ಚಿನ ತಿಳಿವು ಪಡೆದು , ಬದುಕನ್ನು ಶ್ರೀಮಂತಗೊಳಿಸಲು ಸರಳಗೊಳಿಸೋಣ ; ಅದಕ್ಕೆ ನನ್ನ ಒಪ್ಪಿಗೆಯೂ ಇದೆ ; ಆದರೆ ಈಗಾಗಲೇ ಬಳಕೆಯಲ್ಲಿರೋ ಎಲ್ಲಾ ಸಂಸ್ಕೃತ ಶಬ್ದಗಳನ್ನ ಬದಲಿಸಲೇಬೇಕೆಂಬ ಹಟ ಏಕೆ ? ಎಲ್ರಿಗೂ ತಿಳಿಯೋ ಕನ್ನಡ ಶಬ್ದ ಇದ್ರೆ ಸರಿ , ಅದನ್ನು ಸಂಸ್ಕ್ರುತ ಶಬ್ದಕ್ಕೆ ಬದಲಾಗಿ ಬಳಸೋಣ ; ಸಂಸ್ಕೃತದ ಮೇಲಿನ ದ್ವೇಶದಿಂದ ಎಲ್ಲರಿಗೂ ತಿಳಿಯೋ ಶಬ್ದಗಳನ್ನು , ಅವು ಸಂಸ್ಕ್ರುತ ಎಂಬ ಒಂದೇ ಕಾರಣಕ್ಕೆ , ಅದಕ್ಕೆ ಬದಲಿಯಾಗಿ ಯಾರಿಗೂ ಗೊತ್ತಿಲ್ಲದ ಶಬ್ದಗಳನ್ನು ಹೆಕ್ಕಿ ತೆಗೆಯೋದು ಏಕೆ ? ದಿನ , ವರ್ಷ ಎಲ್ರಿಗೂ