Posts

Showing posts from March, 2007
ಕನ್ಫ್ಯೂಷಿಯಸ್ - ೧ -- ಇತರರು ನನ್ನನ್ನು ತಿಳಿಯಲಿಲ್ಲ ಎಂದು ನಾನು ದುಃಖಿಸುವದಿಲ್ಲ . ನಾನು ಇತರರನ್ನು ತಿಳಿದುಕೊಳ್ಳಲಿಲ್ಲ ಎಂಬುದು ನನ್ನ ದುಃಖ. -- ಸಾಹಿತ್ಯದ ಅಭ್ಯಾಸದಲ್ಲಿ ನಾನು ಯಾರ ಸಮಕ್ಕಾದರೂ ಬಂದೇನು. ಆದರೆ ಉತ್ತಮಪುರುಷನು ಬದುಕುತ್ತಿರುವಂತೆ ಬದುಕುತ್ತಿರುವೆನೇ ಎಂದರೆ ನನಗೆ ಅದು ಸಾಧ್ಯವಾಗಿಲ್ಲವೆಂದೇ ತೋರುತ್ತದೆ. -- ನನ್ನ ನಡತೆಯನ್ನು ಎಲ್ಲಿ ಉತ್ತಮಗೊಳಿಸುವದಕ್ಕೆ ಮರೆತೇನೋ , ನನ್ನ ವ್ಯಾಸಂಗದಲ್ಲಿ ಎಲ್ಲಿ ನಾನು ಪ್ರಮತ್ತನಾದೇನೋ, ಸರಿಯಾದ ದಾರಿ ಕಂಡಾಗ ಎಲ್ಲಿ ನಾನು ಮುಂದುವರೆಯದೆ ನಿಂತೇನೋ, ಮಾಡಿದ ತಪ್ಪು ಗೋಚರವಾದಾಗ ಎಲ್ಲಿ ತಿದ್ದಿಕೊಳ್ಳದೆ ಹೋದೇನೋ ಎಂಬುದೇ ನನ್ನ ಮನಸ್ಸನ್ನು ಸದಾ ಕೊರೆಯುವ ಚಿಂತೆ. --ಮೂರು ಜನ ಒಟ್ಟಿಗೆ ಹೋಗುತ್ತಿದ್ದರೆ , ನಾನು ಎಲ್ಲಿ ಇಬ್ಬರು ಗುರುಗಳನ್ನು ಪಡೆಯಬಲ್ಲೆ.ಒಳ್ಳೆಯವನನ್ನು ಆರಿಸಿಕೊಂಡು ಅವನ ಉದಾಹರಣೆಯನ್ನು ಅನುಸರಿಸಲೆತ್ನಿಸುತ್ತೇನೆ. ಕೆಟ್ಟವನನ್ನು ಆರಿಸಿಕೊಂಡು ಆ ತಪ್ಪು ನನ್ನಲ್ಲಿ ಇಲ್ಲದಂತೆ ಮಾಡಲು ಯತ್ನಿಸುತ್ತೇನೆ. -- ಸತ್ಯವಂತನಿಗೆ ಚಿಂತೆಯಿಲ್ಲ . ಧೈರ್ಯಶಾಲಿಗೆ ಭಯವಿಲ್ಲ . ಜ್ಞಾನಿಗೆ ಸಂಶಯವಿಲ್ಲ. -- ನಾನು ತುಂಬ ಕಲಿತು ಎಲ್ಲವನ್ನು ನೆನಪಿನಲ್ಲಿದಲು ಪ್ರಯತ್ನಿಸಿದೆ ಎಂದು ತಿಳಿದಿದ್ದೀಯಾ ? ಇಲ್ಲ . ಆ ಎಲ್ಲವನ್ನು ಪೋಣಿಸಿ ಒಂದು ದಾರದಂತೆ ಹಿಡಿದಿಡುವ ಒಂದು ಕ್ರಮವಿದೆ , ದಾರಿಯಿದೆ. -- ಕಷ್ಟ ಉತ್ತಮನಿಗೆ ಬರಬಹುದು. ಆದರೆ ಹೀನನಾದವನು ಆ ಕಾರಣವಾಗಿ ನಡತೆಕೆಡುತ್ತ
ತತ್ವಜ್ಞಾನಿ ಮತ್ತು ಒಣರೊಟ್ಟಿ ತತ್ವಜ್ಞಾನಿಯೊಬ್ಬ ಒಣರೊಟ್ಟಿ ತಿನ್ನುತ್ತಾ ಕೂತಿದ್ದ . ಆಗ ಅವನ ಬಳಿ ಒಬ್ಬ ರಾಜಕುಲದವನು ಹಾದುಹೋದ. ತತ್ವಜ್ಞಾನಿ ಅವನಿಗೆ ಹೆಚ್ಚು ಗಮನಕೊಡದೆ , ಗೌರವ ಸೂಚಿಸದೆ ತನ್ನಷ್ಟಕ್ಕೆ ತಾನಿದ್ದ . ಅವನ ಸ್ನೇಹಿತ ಹಾಗೆ ಮಾಡದೆ ಆ ಪ್ರಮುಖವ್ಯಕ್ತಿಯನ್ನು ವಂದಿಸಿದ. ತತ್ವಜ್ಞಾನಿಗೆ ಸ್ನೇಹಿತ ಹೇಳಿದ . ' ನೀನು ಅವರಿಗೆ ಸ್ವಲ್ಪ ಗೌರವ ಸೂಚಿಸಿದ್ದರೆ , ನಿನಗೆ ಒಣರೊಟ್ಟಿ ತಿಂದು ನೀರು ಕುಡಿದು ಇರುವ ದುರ್ಗತಿ ಬರುತ್ತಿದ್ದಿಲ್ಲ' . ಆಗ ತತ್ವಜ್ಞಾನಿ ಹೇಳಿದ. -' ಒಣರೊಟ್ಟಿ ತಿಂದು ನೀರು ಕುಡಿದು ಇರುವದು ಹೇಗೆಂದು ನಿನಗೆ ಗೊತ್ತಿದ್ದರೆ ನಿನಗೆ ಈ ದುರ್ಗತಿ ಬರುತ್ತಿದ್ದಿಲ್ಲ' .