ತತ್ವಜ್ಞಾನಿ ಮತ್ತು ಒಣರೊಟ್ಟಿ

ತತ್ವಜ್ಞಾನಿಯೊಬ್ಬ ಒಣರೊಟ್ಟಿ ತಿನ್ನುತ್ತಾ ಕೂತಿದ್ದ . ಆಗ ಅವನ ಬಳಿ ಒಬ್ಬ ರಾಜಕುಲದವನು ಹಾದುಹೋದ. ತತ್ವಜ್ಞಾನಿ ಅವನಿಗೆ ಹೆಚ್ಚು ಗಮನಕೊಡದೆ , ಗೌರವ ಸೂಚಿಸದೆ ತನ್ನಷ್ಟಕ್ಕೆ ತಾನಿದ್ದ . ಅವನ ಸ್ನೇಹಿತ ಹಾಗೆ ಮಾಡದೆ ಆ ಪ್ರಮುಖವ್ಯಕ್ತಿಯನ್ನು ವಂದಿಸಿದ.

ತತ್ವಜ್ಞಾನಿಗೆ ಸ್ನೇಹಿತ ಹೇಳಿದ . ' ನೀನು ಅವರಿಗೆ ಸ್ವಲ್ಪ ಗೌರವ ಸೂಚಿಸಿದ್ದರೆ , ನಿನಗೆ ಒಣರೊಟ್ಟಿ ತಿಂದು ನೀರು ಕುಡಿದು ಇರುವ ದುರ್ಗತಿ ಬರುತ್ತಿದ್ದಿಲ್ಲ' .
ಆಗ ತತ್ವಜ್ಞಾನಿ ಹೇಳಿದ. -' ಒಣರೊಟ್ಟಿ ತಿಂದು ನೀರು ಕುಡಿದು ಇರುವದು ಹೇಗೆಂದು ನಿನಗೆ ಗೊತ್ತಿದ್ದರೆ ನಿನಗೆ ಈ ದುರ್ಗತಿ ಬರುತ್ತಿದ್ದಿಲ್ಲ' .

Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"