Posts

Showing posts from May, 2008
ವಿಕಿಪೀಡಿಯದಲ್ಲಿ ಈ ವಾರ ನಾನು ಅನುವಾದಿಸಿದ ಪುಟಗಳು ವಿಲಿಯಂ ಷೇಕ್ಸ್‌ಪಿಯರ್ ಚಂದ್ರಗುಪ್ತ ಮೌರ್ಯ ಭಾಸ ಜಗದೀಶ್‌ಚಂದ್ರ ಬೋಸ್ ಇವನ್ನು ಇಂಗ್ಲೀಷಿನಿಂದ ಕನ್ನಡಿಸಿದೆನು .
ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ ನಿಸರ್ಗ - ಇದು ಕನ್ನಡದ ಮೊದಲ ಪ್ರಾದೇಶಿಕ ಕಾದಂಬರಿ ಎಂಬ ಹೆಗ್ಗಳಿಕೆ ಹೊಂದಿದೆ . ಇದನ್ನು ೧೯೪೫ ರಲ್ಲಿ ಬರೆದವರು ಮಿರ್ಜಿ ಅಣ್ಣಾರಾಯರು . ಅನೇಕ ಮುದ್ರಣಗಳನ್ನು ಕಂಡಿದೆ . ಬೆಳಗಾಂವಿಯ ಈ ಭಾಗದ ಕನ್ನಡ ಪರಿಚಯ ನಿಮಗೆ ಇರಲೆಂದು ಆ ಕಾದಂಬರಿಯ ಮುನ್ನುಡಿಯ ಭಾಗವೊಂದನ್ನು ಇಲ್ಲಿ ಕೊ(ಕು)ಟ್ಟಿದ್ದೇನೆ . ಕೆಲವು ಶಬ್ದರೂಪಗಳು , ವ್ಯಾಕರಣರೂಪಗಳು ವಿಶಿಷ್ಟವಾಗಿವೆ . ಮುಖ್ಯವಾದವನ್ನು ಇಲ್ಲಿ ತಿಳಿಸುವೆ . * ಏನು = ಯಾನು , ಏನಾದರೂ = ಯಾನರ , ಏಕೆ ಯಾಕೆ ಆದ ಹಾಗೆ ಏನಂತೆ ಇದು ಯಾನತ್ತ ಆಗುವದು * ಚತುರ್ಥೀಪ್ರತ್ಯಯವದ ’ಗೆ’ ಇದು ’ಗಿ’ ಆಗುವದು . ಅವರಿಗೆ =ಅವರಿಗಿ , ಮನೆಗೆ=ಮನಿಗಿ , ಆಕೆಗೆ=ಆಕಿಗಿ , ದನಕ್ಕೆ = ದನೀಗಿ .. ಎಕಾರಾಂತವೆಲ್ಲ ಇಕಾರಾಂತ ಆಗುವ ಪ್ರವೃತ್ತಿ ಇದೆ . ಈಕಡೆ= ಇಕಡಿ , ನಿನ್ನೆ=ನಿನ್ನಿ , ಆನೆಗೆ=ಆಣಿಗಿ , ಕಪಾಳಕ್ಕೆ = ಕಪ್ಪಾಳಿಗಿ * ಉಕಾರಾಂತವು ಅಕಾರಾಂತವಾಗುವದು . ಹೆಣ್ಣುಮಗಳು= ಹೆಣ್ಣುಮಗಳ , ಸೊಸೆಂದಿರು=ಸೊಸದೇರ * ಶಬ್ದದ ಒಳಗೂ ಏ ಇದು ಯಾ ಆಗುವದು . ಹೆಂಡತಿ= ಹ್ಯಾಂತಿ , ತೆವರು = ತ್ಯಾವರಾ , ಕಡೆಯವರು = ಕಡ್ಯಾವರಾ * ಷಷ್ಠಿಯ ಕೆಲವು ವಿಕೃತ ರೂಪಗಳಿವೆ . ದನದ = ದನೀನ , ಕರುವಿನ / ಕರದ= ಕರೀನ * ಹಾಗೆಯೇ ದ್ವಿತೀಯಾದಲ್ಲಿ ಅವರನ್ನು = ಅವರ್ನಾ * ಇದೆ=ಐತಿ , ಬರುತ್ತದೆ = ಬರತೇತಿ * ಕ್ರಿಯಾರೂಪದಲಿಯೂ ಏ ಯಾ ಅಗಿರುವದು ಬಹಳ . ಕೊಡುತ್ತೇನೆ= ಕೊ
ಭಾಷೆಗಳೆಷ್ಟೋ , ಪುಸ್ತಕಗಳೆಷ್ಟೋ ಓದಲಾರೆ ಎಲ್ಲವನು ಸಿನೆಮಾಗಳೆಷ್ಟೋ ಛಾನೆಲ್ಲುಗಳೆಷ್ಟೋ ನೋಡಲಾರೆ ಎಲ್ಲವನು ಹಾಡುಗಳೆಷ್ಟೋ ಸಂಗೀತವದೆಷ್ಟೋ ಕೇಳಲಾರೆ ಎಲ್ಲವನು ಆಯುಷ್ಯವೆಷ್ಟೋ , ದಿನದಲಿ ಬಿಡುವು ಅದೆಷ್ಟೋ ಕಣ್ಣು ಕಿವಿಗಳಿರುವದೇ ಎರಡು ಯಾವುದ ಓದಲಿ? ಯಾವುದ ಕೇಳಲಿ ? ಬಿಟ್ಟೇಬಿಟ್ಟೆನು ಎಲ್ಲವನು !
ಸಖೇದಾಶ್ಚರ್ಯ ಅಂತ ನೀವು ಶಬ್ದ ನೋಡಿರಬಹುದು ... ಏನು ಈ ಶಬ್ದದ ಅರ್ಥ ? ಆಶ್ಚರ್ಯದಿಂದ ಅನ್ನೋ ಅರ್ಥದಲ್ಲಿ ಬಳಸ್ತಾರೆ , ನಿಜ . ಈ ಶಬ್ದವನ್ನು ಅರ್ಥ ಮಾದಿಕೊಳ್ಳಲು ಪ್ರಯತ್ನಿಸಿದರೆ ಖೇದ ( ದು:ಖ) ಮತ್ತು ಆಶ್ಚರ್ಯಗಳಿಂದೊಡಗೂಡಿ ಎಂದಾಗುತ್ತದೆಯೆ ? ಖೇದ ಶಬ್ದ ಯಾಕೆ ಇಲ್ಲಿ ? ಅಥವಾ ಬೇರೇನಾದರೂ ಅರ್ಥ ಇದೆಯೇ ಈ ಶಬ್ದಕ್ಕೆ? ಅಂದ ಹಾಗೆ ನೀವು ಸನಿಹ/ಸನಿಯ ಆಡುಮಾತಲ್ಲಿ ನೋಡಿದ್ದೀರಾ ? ನನಗೆ ಒಮ್ಮೆಲೇ ಹೊಳೆಯಿತು ... ನಮ್ಮಲ್ಲಿ ಬಳಸುವ .. ಸನೇ / ಸನೇಕ ಅದೇ ಶಬ್ದ ! ಅವನ ಸನೇ(ಕ) ಹೋಗಬ್ಯಾಡ.... ಅಂದರೆ ಅವನ ಹತ್ರ ಹೋಗಬ್ಯಾಡ....