Posts

Showing posts from July, 2008
ಕನ್ನಡ ವಿಕಿಪೀಡಿಯಾಗಾಗಿ ಸಂಗೀತಾ ಕಟ್ಟಿ ಅವರ ಬಗ್ಗೆ ಒಂದು ಬರಹವನ್ನ ಕನ್ನಡಿಸಿರುವೆ.
ಎರಡು ಪುಟ್ಟಾತಿಪುಟ್ಟ ಕತೆಗಳು .. ೧) ಜಯಂತ ಕಾಯ್ಕಿಣಿಯವರ ಕತೆಗಳು ನಿಜಕ್ಕೂ ಅದ್ಭುತ ಕತೆಗಳು. ನನ್ನ ಗೆಳೆಯನೊಬ್ಬನಿಗೆ ಅವುಗಳನ್ನು ಕೊಟ್ಟು ಓದಿಸೋಣ ಅಂತ ಆ ಮೂರೂ ಕಥೆ ಪುಸ್ತಕಗಳನ್ನು( ತೂಫಾನ್ ಮೇಲ್ , ಜ.ಕಾ.ಕಥೆಗಳು , ಬಣ್ಣದ ಕಾಲು) ಕೊಂಡು ಅವನ ಮನೆಗೆ ಹೋದೆ . ಅವನಿಗೆ ಕೊಟ್ಟೆ. ಅವನು ಟೇಬಲ್ ಮೇಲೆ ಇಡೋ ಹೊತ್ತಿಗೇ ಅವನ ಮಾವ ಬಂದ್ರು . ನಾನು ಓದ್ತೀನಿ ಅಂತ ತಕೊಂಡೋದ್ರು. ಇದು ಕತೆ ಆಗುತ್ತೋ ಇಲ್ಲವೋ ನೀವೇ ಹೇಳಬೇಕು .. ಗೆಳೆಯರೊಬ್ಬರು ಇದರಲ್ಲಿ ತತ್ವಜ್ಞಾನ ಕಂಡರು ... ನಾನು ರಹಸ್ಯಾತ್ಮಕ ನಿಗೂಢ ಕತೆ ... ಅಂದೆ. ಮುಂದೇನಾಯ್ತು ಅಂತ ಇಲ್ಲ. ಮಾವ ಓದಿದನೋ ? ಮರಳಿ ಕೊಟ್ಟನೋ ? ಇವನು ಓದಿದನೋ? ನಾನು ಕೇಳಿದೆನೆ ? ಇಲ್ಲವೆ? ಎರಡು ಪುಟ್ಟಾತಿಪುಟ್ಟ ಕತೆ ಹೇಳ್ತೀನಂತ ಹೊರಟು ಒಂದೇ ಕತೆ ಹೇಳ್ದೆ ! ವಯಸ್ಸಾದಾಗ ಮನುಷ್ಯನಿಗೆ ಎರಡು ಸಮಸ್ಯೆ ಕಾಡುತ್ವೆ ... ಒಂದೂ ...... ನೆನಪು ಕೈಕೊಡುತ್ತೆ. ಮರೆವಿನ ತೊಂದರೆ ಶುರು‌ಆಗತ್ತೆ ... ಇನ್ನೊಂದೂ .... .... ... ನಾನು ಏನ್ ಹೇಳ್ತಾ ಇದ್ದೆ ?
http://kn.wikipedia.org/wiki/ಕೆಂಗಲ್_ಹನುಮಂತಯ್ಯ ಅನುವಾದ ಸಂಪೂರ್ಣ http://kn.wikipedia.org/wiki/ಮರಾಠ_ಸಾಮ್ರಾಜ್ಯ ಕೂಡ ಅರ್ಧ ಆಗಿದೆ