ಎರಡು ಪುಟ್ಟಾತಿಪುಟ್ಟ ಕತೆಗಳು ..

೧) ಜಯಂತ ಕಾಯ್ಕಿಣಿಯವರ ಕತೆಗಳು ನಿಜಕ್ಕೂ ಅದ್ಭುತ ಕತೆಗಳು. ನನ್ನ ಗೆಳೆಯನೊಬ್ಬನಿಗೆ ಅವುಗಳನ್ನು ಕೊಟ್ಟು ಓದಿಸೋಣ ಅಂತ ಆ ಮೂರೂ ಕಥೆ ಪುಸ್ತಕಗಳನ್ನು( ತೂಫಾನ್ ಮೇಲ್ , ಜ.ಕಾ.ಕಥೆಗಳು , ಬಣ್ಣದ ಕಾಲು) ಕೊಂಡು ಅವನ ಮನೆಗೆ ಹೋದೆ . ಅವನಿಗೆ ಕೊಟ್ಟೆ. ಅವನು ಟೇಬಲ್ ಮೇಲೆ ಇಡೋ ಹೊತ್ತಿಗೇ ಅವನ ಮಾವ ಬಂದ್ರು . ನಾನು ಓದ್ತೀನಿ ಅಂತ ತಕೊಂಡೋದ್ರು.


ಇದು ಕತೆ ಆಗುತ್ತೋ ಇಲ್ಲವೋ ನೀವೇ ಹೇಳಬೇಕು .. ಗೆಳೆಯರೊಬ್ಬರು ಇದರಲ್ಲಿ ತತ್ವಜ್ಞಾನ ಕಂಡರು ...
ನಾನು ರಹಸ್ಯಾತ್ಮಕ ನಿಗೂಢ ಕತೆ ... ಅಂದೆ.
ಮುಂದೇನಾಯ್ತು ಅಂತ ಇಲ್ಲ.
ಮಾವ ಓದಿದನೋ ? ಮರಳಿ ಕೊಟ್ಟನೋ ? ಇವನು ಓದಿದನೋ?
ನಾನು ಕೇಳಿದೆನೆ ? ಇಲ್ಲವೆ?

ಎರಡು ಪುಟ್ಟಾತಿಪುಟ್ಟ ಕತೆ ಹೇಳ್ತೀನಂತ ಹೊರಟು ಒಂದೇ ಕತೆ ಹೇಳ್ದೆ !

ವಯಸ್ಸಾದಾಗ ಮನುಷ್ಯನಿಗೆ ಎರಡು ಸಮಸ್ಯೆ ಕಾಡುತ್ವೆ ...
ಒಂದೂ ...... ನೆನಪು ಕೈಕೊಡುತ್ತೆ. ಮರೆವಿನ ತೊಂದರೆ ಶುರು‌ಆಗತ್ತೆ ...
ಇನ್ನೊಂದೂ ....
....
... ನಾನು ಏನ್ ಹೇಳ್ತಾ ಇದ್ದೆ ?

Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"