Wednesday, February 14, 2018

 

ಕಥಾಸರಿತ್ಸಾಗರ

ಧಮ೯ ವೆಂಬ ವೃಕ್ಷಕ್ಕೆ ಮನಸ್ಸೇ ಬೇರು -

ಸಂಸಾರದಲ್ಲಿ ಸಂಸತ್ತನ್ನು ದಾನ ಮಾಡುವದೇ ದೊಡ್ಡ ತಪಸ್ಸು . ಸಂಪತ್ತಿನ ದಾನವು ಪ್ರಾಣದಾನ.  ಪ್ರಾಣವು ಸಂಪತ್ತಿನಲ್ಲಿ  ಬಂಧಿತವಾಗಿದೆ . ಕರುಣೆಯಿಂದ ವ್ಯಾಕುಲನಾದ ಬುದ್ಧನು ಬೇರೆಯವರಿಗಾಗಿ  ಆತ್ಮವನ್ನೇ ಹುಲ್ಲುಕಡ್ಡಿಯಂತೆ ಡಾನ್ ಮಾಡಿದನು. ಇನ್ನು ತುಚ್ಚವಾದ ಹಣದಿಂದ  ಏನು?

ಪ್ರಾಜ್ಞನು ಎಲ್ಲ ಆಸೆಗಳಿಂದ ದೂರವಾಗಿ ಶರೀರ ಇರುವ ತನಕ ಸಮ್ಯಕ್ ಜ್ಞಾನವನ್ನು ಪಡೆಯಲು ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡಬೇಕು.
ಸಂಸಾರದಲ್ಲಿ ಪರೋಪಕಾರವೊಂದೇ ಸಾರವುಳ್ಳದ್ದು.ಆದ್ದರಿಂದ ಈ ಶರೀರದಿಂದ ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡೋಣ.

ಅವನು ನನಗೆ ಕೆಟ್ಟದ್ದನ್ನ ಮಾಡಿಲ್ಲ , ಉಪಕಾರವನ್ನು ಮಾಡಿದ್ದಾನೆ.
ಇಲ್ಲದಿದ್ದರೆ ನಾನು ಯಾರನ್ನು ಕ್ಷಮಿಸಬಹುದಿತ್ತು ?


 ಪ್ರಾಜ್ಞರಿಗೆ ತಮ್ಮ ದೇಹದ ಮೇಲೇ ಮಮಕಾರವು ಇಲ್ಲದ ಮೇಲೆ ಹೆಂಡತಿ ಮಕ್ಕಳು ತೃಣ ಸಮಾನ.


 ರಾಜನೂ ಸಹ ಅವಳ ಚಿಂತೆಯನ್ನು ಬಿಟ್ಟು, ಮಂತ್ರಿಯ ಮಾತನ್ನು ನೆನೆಯುತ್ತಾ ತನಗೆ ಲಭ್ಯವಾದ ರಾಜ್ಯ, ಪತ್ನಿ, ಸುತರೊಂದಿಗೆ  , ( ಅವರ / ಅದರ ಮಹತ ವನ್ನು ತಿಳಿದು) ಆನಂದದಿಂದ ಇದ್ದನು.

ನೀತಿ ಎಂಬ ಕಲ್ಪವೃಕ್ಷದ ಬಳ್ಳಿ ಫಲ ನೀಡಿಯೇ ತೀರುತ್ತದೆ

ವಸ್ತ್ರಗಳನ್ನೂ ಆಭರಣಗಳನ್ನೂ ನೀಡಿ ಗೌರವಿಸಿದನುTuesday, June 23, 2015

 

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು. ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು ಓದಿದ ಜನರ ಅನಿಸಿಕೆಗಳಿವೆ. ಟಾಂ ಸಾಯರ್ ಸಾಹಸಗಳ ಸಂಗತಿ ಪುಸ್ತಕ ವಿಭಾಗದಲ್ಲಿ ಸಿಕ್ಕಿತು. ಮಹಾತ್ಮಾ ಗಾಂಧಿಯವರ ಕೊನೆಯ ದಿನದ ಸಂಗತಿಗಳು ವಿವರವಾಗಿ ಇಲ್ಲಿ ಬಂದಿವೆ. ಮನುಷ್ಯನಿಗೆ ಸಾವು ಸಮೀಪಿಸಿದಾಗ ಹೇಗೋ ಆತನ ಬಾಯಿಂದ ಸಾವಿನ ಕುರಿತಾದ ಮಾತುಗಳು ಬರುತ್ತವಂತೆ. ಗಾಂಧೀಗಾಗಿ ರಾತ್ರಿ ಬೇಕಾಗುವ ಯಾರೋ ಲವಂಗದ ಪುಡಿಯನ್ನು ಬೆಳಿಗ್ಗೆ ತಯಾರು ಮಾಡುವ ಸಂಬಂಧ - ಗಾಂಧಿಯವರು 'ಈಗ ಏಕೆ ಮಾಡುತ್ತ ಕೂತಿದ್ದಾರೆ? ರಾತ್ರಿ ನಾನೇ ಇರುತ್ತೇನೋ ಇಲ್ಲವೋ ' ಎನ್ನುತ್ತಾರೆ. ಪತ್ರಿಕೆಯಲ್ಲೆಲ್ಲೋ ಗಾಂಧಿಯವರು ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗಲಿದ್ದಾರೆ ಎಂಬ ಸಂಗತಿ ಅಚ್ಚಾಗಿರುತ್ತದೆ, ಅದಕ್ಕೆ ಗಾಂಧಿಯವರು 'ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗುವ ಗಾಂಧಿ ಯಾರೋ? ' ಎಂದು ಪ್ರತಿಕ್ರಿಯಿಸುತ್ತಾರೆ ಎಂಬಂತಹ ಸಂಗತಿಗಳು ಮೈನವಿರೇಳಿಸುತ್ತವೆ. ಬ್ರಿಟಿಷರ ವಿರುದ್ದ ಬಂಡೆದ್ದ ನರಗುಂದ ಬಾಬಾಸಾಹೇಬನು ಗಲ್ಲಿಗೇರಲಿಲ್ಲವಂತೆ. ಈತನ ಹೆಂಡತಿ ಧಾರವಾಡದ ಕಲೆಕ್ಟರನ ಹೆಂಡತಿಯನ್ನು ಹಾವಿನ ಕಡಿತದಿಂದ ಸಾಯುವುದನ್ನು ತಪ್ಪಿಸಿದ್ದಳಂತೆ. ಈತನನ್ನ ಗಲ್ಲಿಗೇರಿಸಬೇಕಾದ ಅಧಿಕಾರಿಯು ಅದೇ ಕಲೆಕ್ಟರನೇ ಆಗಿದ್ದನಂತೆ. ಬಾಬಾಸಾಹೇಬನ ಬದಲಾಗಿ ಬೇರಾರನ್ನೋ ಗಲ್ಲಿಗೇರಿಸಿ , ಇವನನ್ನು ದಕ್ಷಿಣ ಭಾರತಲ್ಲಿ ಇರಬೇಡ ಎಂದು ಹೇಳಿ ಕಳುಹಿಸಿಬಿಟ್ಟಿದ್ದನಂತೆ! ಆ ಬಾಬಾಸಾಹೇಬನು ಉತ್ತರದಲ್ಲೆಲ್ಲೋ ಓಡಾಡಿ ಕಾಶಿಯಲ್ಲಿ ನರಗುಂದದ ಒಬ್ಬಾಕೆಯನ್ನು ಕಂಡು ಆಕೆಯ ಮಗಳನ್ನು ಮದುವೆಯಾಗಿ ಮುಂಬೈಯ ಬೈಕುಲ್ಲಾದಲ್ಲಿ ವಾಸವಾಗಿದ್ದನಂತೆ . ಆತನ ಮಕ್ಕಳು ಮೊಮ್ಮಕ್ಕಳು ಭಾವೆ ಎಂಬ ಮನೆತನದ ಹೆಸರನ್ನು ಮರೆಮಾಚಿ ಬದುಕಿದರಂತೆ, ಅವರು ಬಾಬಾಸಾಹೇಬನಿಗೆ ಶ್ರಾದ್ಧಕರ್ಮಗಳನ್ನು ಮಾಡುತ್ತಿದ್ದರಂತೆ . ಈ ರೋಚಕ ಸಂಗತಿಯೂ ಅಲ್ಲಿಯೇ ಸಿಕ್ಕಿತು. ಇನ್ನೊಂದರ ಪುಸ್ತಕವಿಭಾಗದಲ್ಲಿ 'ಅಲ್ಲಿಗೆ ಹೋದರೂ ಇಲ್ಲಿಯ ಚಿಂತೆ' ಎಂಬ ಪ್ರಕಟವಾಗಲಿರುವ ಪ್ರವಾಸಕಥನದ ಭಾಗಗಳು - ಲಂಡನ್ ಭೆಟ್ಟಿಯ ಕುರಿತಾದವು ಓದಿ ಸಂತೋಷವಾಯಿತು. ವಿದೇಶಪ್ರವಾಸ ಮಾಡುವಾಗ ಲೇಖಕರು ನಮ್ಮಲ್ಲಿನ ಸಂಗತಿಯನ್ನು ಮನದಲ್ಲಿಟ್ಟುಕೊಂಡೇ ಎರಡನ್ನೂ ಹೋಲಿಕೆ ಮಾಡುತ್ತಿದ್ದಾರೆ. ಪುಸ್ತಕ ಪ್ರಕಟನೆಯನ್ನು ಎದುರು ನೋಡುವಂತೆ ಮಾಡಿತು. ಒಟ್ಟಿನಲ್ಲಿ ಕಸ್ತೂರಿ ಮಯೂರ ಇಂತಹ ಪತ್ರಿಕೆಗಳನ್ನು ತಕ್ಷಣ ಓದಲಾಗದಿದ್ದರೂ ಕೊಂಡಾದರೂ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಓದುವ ಸುಖದಿಂದ ವಂಚಿತರಾಗುತ್ತೇವೆ ಎನ್ನಿಸಿತು. ನೀವೇನಂತೀರಿ? ನೀವು ಕಸ್ತೂರಿ ಕೊಳ್ಳುತ್ತಿದ್ದೀರಿ ತಾನೆ?

 

ಗಾಂಧೀಜಿಯೂ ಈಶೋಪನಿಷತ್ತೂ

ಇತ್ತೀಚೆಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಒಂದು ಮಹಾತ್ಮಾಗಾಂಧೀಯವರ ಪುಸ್ತಕ-"ಜೀವನ ಶಿಕ್ಷಣ"ವನ್ನು ಓದುತ್ತಿದ್ದೆ. ಪ್ರಾರಂಭದಲ್ಲಿ ಅವರ ಕೆಲವು ಅನಿಸಿಕೆ/ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು ಗಮನಿಸುವಂತಹವು , ಕೆಲವು ಮತ್ತೆ ಮತ್ತೆ ಮೆಲುಕು ಹಾಕುವಂತಹವು, ನನಗಾಗಿ ಸಂಗ್ರಹಿಸಿಕೊಂಡ ಅವನ್ನು ನಿಮಗಾಗಿ ಇಲ್ಲಿ ಕುಟ್ಟಿದ್ದೇನೆ ( ಅಷ್ಟೇ ಅಲ್ಲ , ಈಶೋಪನಿಷತ್ತಿನ ಬಗ್ಗೆ ಅವರ ಒಂದು ಹೇಳಿಕೆಯಿಂದಾಗಿ ಈಶೋಪನಿಷತ್ತನ್ನು ತಿರುವಿ ಹಾಕಿದ ಬಗ್ಗೆಯೂ ಮುಂದಕ್ಕೆ ಬರೆದಿದ್ದೇನೆ). --ನಾನೊಬ್ಬ ಸತ್ಯಶೋಧಕ, ಅದಕ್ಕೊಂದು ಮಾರ್ಗವನ್ನು ಕಂಡುಹಿಡಿದಿದ್ದೇನೆ ಎಂದು ನನ್ನ ವಿಶ್ವಾಸ. ಅದರ ಸಿದ್ಧಿಗಾಗಿ ನಾನ್ನು ನಿರಂತರ ಪ್ರಯತ್ನಶೀಲನಾಗಿದ್ದೇನೆ ಎಂಬುದು ನನ್ನ ನಂಬಿಕೆ. ...... ನನ್ನ ನ್ಯೂನತೆಗಳು ಎಷ್ಟೆಂಬುದನ್ನು ನಾನು ವ್ಯಸನದಿಂದ ಅರಿತಿದ್ದೇನೆ. ಆ ಅರಿವು ನನಗೆ ದುಃಖ ತರುವಷ್ಟಿದೆ. ಆ ಅರಿವೇ ನನ್ನ ಸರ್ವಶಕ್ತಿಯ ಮೂಲ; ಏಕೆಂದರೆ ತನ್ನ ದೌರ್ಬಲ್ಯಗಳ ಅರಿವಾಗುವುದೇ ಮಾನವನಿಗೆ ಒಂದು ಅಪೂರ್ವ ಬಲ. --ದಾರಿ ನನಗೆ ಗೊತ್ತು. ಅದು ನೇರ ಮತ್ತು ಇಕ್ಕಟ್ಟು -ಕತ್ತಿಯ ಅಲಗಿನಂತೆ. ಅದರ ಮೇಲೆ ನಡೆವುದೆಂದರೆ(*) ನನಗೆ ಉಲ್ಲಾಸ, ಜಾರಿದಾಗಲೆಲ್ಲ ಕಣ್ಣೀರಿಡುತ್ತೇನೆ. ....ನನ್ನ ದೌರ್ಬಲ್ಯದ ಪರಿಣಾಮವಾಗಿ ಸಾವಿರ ಬಾರಿ ಸೋತರೂ ನಾನು ಎಂದಿಗೂ ಶೃದ್ಧೆಗೆಡುವುದಿಲ್ಲ. --ಸತ್ಯವೇ ಭಗವಂತನು , ನನ್ನ ಪಾಲಿಗೆ ಭಗವಂತನನ್ನು ಕಾಣಲು ಇರುವ ಒಂದೇ ಒಂದು ನಿಶ್ಚಿತ ಮಾರ್ಗವೆಂದರೆ ಅಹಿಂಸೆ ಮತ್ತು ಪ್ರೇಮ. --ಭಾರತ ಸ್ವಾತಂತ್ರ್ಯ ಸಾಧನೆಯೇ ನನ್ನ ಜೀವಿತೋದ್ದೇಶ. ಅದಕ್ಕಾಗಿ ನಾನು ಸಾಯಲು ಕೂಡ ಸಿದ್ಧ . ಏಕೆಂದರೆ ಭಾರತದ ಸ್ವಾತಂತ್ರ್ಯ ಸತ್ಯದ ಒಂದು ಅಂಶ. ಬಂಧವಿಮುಕ್ತವಾದಾಗಲೇ ಭರತಖಂಡ ಸತ್ಯಸ್ವರೂಪನಾದ ಭಗವಂತನನ್ನು ಪೂಜಿಸಬಲ್ಲದು. ಭಾರತದಲ್ಲಿ ಬದುಕಿ ಅದರ ಸಂಸ್ಕೃತಿಯನ್ನು ಪಡೆದಿರುವುದರಿಂದ ನನ್ನ ಸೇವೆಯ ಮೊದಲ ಹಕ್ಕು ಭಾರತದ್ದು, ನಾನು ಭಾರತಕ್ಕೆ ಮಾತ್ರ ಮೀಸಲಾದವನಲ್ಲ. ಬೇರೆ ಯಾವ ರಾಷ್ಟ್ರದ ಹಿತಕ್ಕೂ ಧಕ್ಕೆ ಒದಗಬಾರದು ಎಂಬುದಷ್ಟೇ ಅಲ್ಲ ; ಸಕಲ ರಾಷ್ಟ್ರಗಳಿಗೂ ಸರ್ವಲಾಭ ಒದಗಬೇಕು. ನಾನು ಸಂಕಲ್ಪಿಸಿರುವ ಭಾರತದ ಸ್ವಾತಂತ್ರ್ಯ ಎಂದಿಗೂ ಲೋಕಹಿತ ಕಂಟಕವಾದಲಾರದು. --ವಿಶ್ವಾತ್ಮಕವೂ ವಿಶ್ವವ್ಯಾಪಿಯೂ ಆದ ಸತ್ಯವನ್ನು ಸಾಕ್ಷಾತ್ತಾಗಿ ಕಂಡುಕೊಳ್ಳಬೇಕಾದರೆ ಸೃಷ್ಟಿಯಲ್ಲಿ ಕ್ಷುದ್ರತಮವಾದುದನ್ನೂ ತನ್ನಂತೆಯೇ ಪ್ರೀತಿಸುವುದು ಸಾಧ್ಯವಾಗಲೇಬೇಕು. ಆ ಹಂಬಲವನ್ನು ತುಂಬಿಕೊಂಡವನು ಜೀವನದ ಯಾವ ಕ್ಷೇತ್ರದಿಂದಲೂ ವಿಮುಖನಾಗುವುದು ಸಾಧ್ಯವಿಲ್ಲ. ನನ್ನ ಸತ್ಯಶೃದ್ಧೆ ನನ್ನನ್ನು ರಾಜಕೀಯಕ್ಕೆ ಎಳೆದು ತಂದಿರುವುದು ಓ ಕಾರಣದಿಂದಲೇ. ........................ಎಂದು ನಾನು ಸ್ವಲ್ಪವೂ ಅಳುಕದೇ, ಆದರೆ ವಿನೀತನಾಗಿ ಹೇಳಬಲ್ಲೆ. --ಭಗವಂತ ಅಸತ್ಯದ ಮೂರ್ತಿ ಎಂದೂ, ಹಿಂಸೆಯ ಮೂರ್ತಿ ಎಂದೂ ಯಾರಾದರೂ ಸ್ಥಿರಪಡಿಸಿದರೆ ಅಂತಹ ಭಗವಂತನನ್ನು ಪೂಜಿಸಲು ನಾನು ನಿರಾಕರಿಸುತ್ತೇನೆ. -- ನನ್ನ ರಾಜಕೀಯ ಕಲುಷಿತವಲ್ಲ, ನನ್ನ ಬದುಕು, ನನ್ನ ರಾಜಕೀಯ ಎಲ್ಲವೂ ಸತ್ಯ ಅಹಿಂಸೆಗಳೊಂದಿಗೆ ಜಟಿಲವಾಗಿ ಹೆಣೆದುಕೊಂಡಿವೆ. ಸತ್ಯವನ್ನು ಬಲಿಗೊಟ್ಟು ಸ್ವಾತಂತ್ರ್ಯ ಪಡೆಯುವುದಕ್ಕಿಂತ ಭಾರತ ವಿನಾಶ ಹೊಂದುವುದೇ ಹೆಚ್ಚು ಲೇಸೆಂಬುದು ನನ್ನ ಮತ. -- ಮಾನವ ಜೀವಿತದ ಪರಮೋದ್ದೇಶ ಭಗವಂತನ ಸಾಕ್ಷಾತ್ಕಾರ , ಮಾನವ ಸೇವೆಯು ಇದಕ್ಕೆ ಸಾಧನ. -- ಮನುಷ್ಯ ಎಷ್ಟರ ಮಟ್ಟಿಗೆ ಬೇರೆಯವರ ಹಿತಕ್ಕಾಗಿ ಶ್ರಮಿಸುತ್ತಾನೆಯೋ ಅಷ್ಟರ ಮಟ್ಟಿಗೆ ಅವನು ದೊಡ್ಡವನಾಗುತ್ತಾನೆ, -- ಮನುಷ್ಯನಂತೆ ಕ್ರಿಮಿಕೀಟಗಳೂ ಭಗವಂತನ ಸೃಷ್ಟಿಯೇ , ಹಾಗಾಗಿ ನಾನು ಸೋದರಭಾವ ಅಥವಾ ತಾದಾತ್ಮ್ಯವನ್ನು ಸಾಧಿಸಲೆಳಸುವುದು ಕೇವಲ ಮಾನವಜೀವಿಗಳೊಂದಿಗೆ ಮಾತ್ರವಲ್ಲ, ಸಮಸ್ತ ಕೀಟರಾಶಿಗಳೊಂದಿಗೆ. ಮೂಲತಃ ಎಲ್ಲ ಜೀವವೂ ಒಂದೇ. -- ಯಾವ ನೂತನ ಸಿದ್ಧಾಂತವನ್ನೂ ನಾನು ಮಂಡಿಸಿಲ್ಲ, ಅದರ ಬದಲು ಪುರಾತನ ಸಿದ್ಧಾಂತಗಳ ಪುನರ್ನಿರೂಪಣೆಯ ಪ್ರಯತ್ನವೇ ನನ್ನದು. -- ಸಕಲಶಾಸ್ತ್ರಗಳೂ ಒಂದುವೇಳೆ ವಿನಾಶ ಹೊಂದುವುದಾದರೂ ಹಿಂದೂಧರ್ಮದ ಸಾರವನ್ನು ಸಾರಲು ಈಶೋಪನಿಷತ್ತಿನ(**) ಮಂತ್ರ ಸಾಕು. -- ಗಾಂಧೀಪಂಥ ಎಂಬುದು ದೋಷದ ಪ್ರತೀಕವಾದರೆ , ಗಾಂಧೀಪಂಥ ಎಂಬುದು ಪಂಥಾಭಿಮಾನಕ್ಕೆ ಮತ್ತೊಂದು ಹೆಸರಾದರೆ ಅದು ನಾಶ ಹೊಂದಲಿ. ತಾನು ಗಾಂಧಿಯ ಅನುಯಾಯಿ ಎಂದು ಯಾರೊಬ್ಬನೂ ಹೇಳದಿರಲಿ. ನಾನು ನನ್ನನ್ನು ಅನುಸರಿಸಿದರೆ ಸಾಕು. ನಾನು ಎಂಥ ಅಸಮರ್ಪಕ ಅನುಯಾಯಿ ಎಂಬುದನ್ನು ನಾನು ಬಲ್ಲೆ. ಯಾವ ತತ್ವಗಳಿಗಾಗಿ ನಾನು ನಿಂತಿದ್ದೇನೆಯೋ ಅವುಗಳಿಗೆ ತಕ್ಕಂತೆ ನಾನು ಬಾಳುತ್ತಿಲ್ಲ. -- ನೀವು ಅನುಯಾಯಿಗಳಲ್ಲ ; ಸಹವಿದ್ಯಾರ್ಥಿಗಳು , ಸಹಯಾತ್ರಿಕರು, ಸಹಅನ್ವೇಷಕರು, ಸಹೋದ್ಯೋಗಿಗಳು. -- ನನ್ನ ಪಾಲಿಗೆ ಸತ್ಯವೇ ದೇವರು, ಸತ್ಯಸಾಧನೆಗೆ ಅಹಿಂಸೆ ಅಲ್ಲದೆ ಬೇರೆ ಹಾದಿಯಿಲ್ಲ . ಸತ್ಯ ಅಥವಾ ಭಗವಂತನನ್ನು ಬಲಿಗೊಟ್ಟು ಭಾರತದ ಸೇವೆಯನ್ನು ಮಾಡುವ ಯೋಚನೆಯನ್ನು ನಾನು ಮಾಡಲಾರೆ. ನಾನು ಬಲ್ಲೆ ಸತ್ಯವನ್ನು ಕೈಬಿಡಬಲ್ಲವನು ತನ್ನ ದೇಶವನ್ನೂ ಕೈಬಿಡಬಲ್ಲ , ಆಪ್ತೇಷ್ಟರನ್ನೂ ಕೈಬಿಡಬಲ್ಲ. ನನ್ನ ಆತ್ಮ ಮತ್ತು ಕರ್ತ ಮೆಚ್ಚುವಂತೆ ನಾನು ಹೋದೆಡೆಯಲ್ಲೆಲ್ಲ ನನ್ನ ಕರ್ಮಕ್ಷೇತ್ರದ ಗಾಯತ್ರಿಗಳಾದ ಈ ನನ್ನ ಧರ್ಮಸೂತ್ರಗಳನ್ನು ಸಾರುತ್ತ ಹೋಗುತ್ತೇನೆ. -- ನನ್ನದು ಧರ್ಮಮಾರ್ಗ , ನಾವು ಧರ್ಮಿಗಳು , ಉಳಿದವರಿಗಿಂತ ನಾವು ಶ್ರೇಷ್ಠರು ಎಂಬ ಅಹಂಭಾವ ನಮ್ಮನ್ನು ಆಕ್ರಮಿಸುವದರ ಬಗ್ಗೆ ಯಾವಾಗಲೂ ಎಚ್ಚರವಾಗಿರಬೇಕು . -- ನಾವು ಸತ್ಯ ಅಹಿಂಸೆಗಳ ನಿಜವಾದ ಆರಾಧಕರಾಗುವ ಪಕ್ಷದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾಗಿ ಬೇಕಾಗುವ ಬುದ್ಧಿಶಕ್ತಿಯನ್ನು ಭಗವಂತನೇ ನಮಗೆ ದಯಪಾಲಿಸುತ್ತಾನೆ. ಎದುರಾಳಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಇಚ್ಛೆ ಅಂತಹ ಶೃದ್ಧೆಯ ಅಗತ್ಯಭಾಗವಾಗಿದೆ. ಎದುರಾಳಿಯ ಮನಸ್ಸನ್ನು ಹೊಕ್ಕು ಆತನ ದೃಷ್ಟಿ ಏನೆಂಬುದನ್ನು ಅರಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. -- ನನ್ನ ಸಲಹೆಗಳಲ್ಲೆಲ್ಲ ಒಂದು ರಕ್ಷಾಸೂತ್ರ ಇದ್ದೇ ಇದೆ - ತಮ್ಮ ಬುದ್ಧಿಗೂ ಹೃದಯಕ್ಕೂ ಒಪ್ಪಿಗೆ ಆಗದಿದ್ದರೆ ಯಾರೂ ಅವುಗಳನ್ನು ಅನುಸರಿಸಬೇಕಾಗಿಲ್ಲ . -- ನನ್ನನ್ನು ಮೆಚ್ಚುವವರು ಮತ್ತು ನನ್ನ ಮಿತ್ರರು ಮಹಾತ್ಮ ಎಂಬುದನ್ನು ಮರೆತು ನನ್ನನ್ನು ಬರಿಯ 'ಗಾಂಧೀ ' ಎಂದು ಭಾವಿಸುವುದಾದರೆ ಅವರು ನನ್ನ ಮೆಚ್ಚುಗೆಗೆ ಹೆಚ್ಚಾಗಿ ಪಾತ್ರವಾಗುತ್ತಾರೆ . ನಾನು ಯಾವ ನನ್ನ ತತ್ವಗಳನ್ನು ಜೀವನದಲ್ಲಿ ಅನುಷ್ಠಾನ ಮಾಡಬೇಕೆಂದು ಕಾರ್ಯಕ್ರಮ ಹಾಕಿಕೊಂಡಿದ್ದೇನೆಯೋ ಅವನ್ನು ತಾವು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು; ಇಲ್ಲವೆ ಅದರಲ್ಲಿ ಅವರಿಗೆ ನಂಬುಗೆ ಇರದಿದ್ದ ಪಕ್ಷದಲ್ಲಿ ಅದನ್ನು ಸರ್ವರೀತಿಯಿಂದಲೂ ವಿರೋಧಿಸಬೇಕು- ಇದೇ ನನ್ನ ಮಿತ್ರರು ನನಗೆ ತೋರಿಸಬಹುದಾದ ಪರಮ ಗೌರವ. -- ಯಾವ ಮಹಾ ಉದ್ಯಮದಲ್ಲಿಯಾದರೂ ಆಗಲಿ ನಿರ್ಣಯಕಾರಿಯಾಗುವುದು ಹೋರಾಡುವವರ ಸಂಖ್ಯೆ ಅಲ್ಲ , ಅವರ ಸತ್ವ . ನೀನು ಒಬ್ಬೊಂಟಿಯಾಗಿ ನಿಂತರೂ ಸರಿ , ಜಗತ್ತು ತನ್ನ ಕೆಂಗಣ್ಣಿನಿಂದ ದುರದುರನೆ ನೋಡಿದರೂ ಸರಿ, ಅಳುಕಬೇಡ. ಯಾವುದಕ್ಕಾಗಿ ನೀನು ಬದುಕಿದ್ದೀಯೋ , ಯಾವುದಕ್ಕಾಗಿ ನೀನು ದುಡಿಯಬೇಕೋ , ಅದಕ್ಕಾಗಿ ಮನೆ ಮಠ , ಮಡದಿ , ಮಕ್ಕಳು, ಸರ್ವಸ್ವವನ್ನೂ ತ್ಯಜಿಸು . ಆದರೆ ನಿನ್ನ ಹೃದಯದಲ್ಲಿ ನೆಲೆಸಿರುವ ಸತ್ಯದಲ್ಲಿ ನಿನಗೆ ಶೃದ್ಧೆ ಇರಲಿ, ಅದರ ಸತ್ಯಕ್ಕೆ ಸಾಕ್ಷಿಯಾಗಿ ಬಾಳು. (*) ಏನಿದು ಕತ್ತಿಯ ಅಲಗಿನ ಮೇಲೆ ನಡೆಯುವುದು? ಬಹುಶಃ ಅವರು ಆ ಹೊತ್ತಿನಲ್ಲಿ ಈ ಕೆಳಗಿನ ಸಂಸ್ಕೃತ ಸುಭಾಷಿತವನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು ಪ್ರಿಯನ್ಯಾಯಾವೃತ್ತಿರ್ಮಲಿನಮಸುಭಂಗೇಪ್ಯಸುಕರಂ | ಮತ್ವಂ ಸತೋನಾಭ್ಯರ್ಥಾ: ಸುಹೃದಪಿ ನಯಾಚ್ಯ: ಕೃಶಧನ:|| ವಿಪದ್ಯುಚ್ಚೈ: ಸ್ಥೇಯಂ ಪದಮನುವಿಧೇಯಂ ಚ ಮಹತಾ ಸತಂ ಕೇನೋದ್ದಿಷ್ಟಂ ವಿಷಯಂ ಅಸಿಧಾರಾವೃತಮ್ || ಇದರ ಅರ್ಥ ಈ ಕೆಳಗಿನಂತೆ ಇದೆ - ಸಜ್ಜನರು ಶ್ರೇಯಸ್ಕರವಾದ ಸರಿಯಾದ ನ್ಯಾಯಮಾರ್ಗದಲ್ಲಿ ನಡೆಯುವರು. ಪ್ರಾಣ ಹೋಗುವ ಪ್ರಸಂಗ ಬಂದರೂ ತಮ್ಮ ವ್ಯಕ್ತಿತ್ವಕ್ಕೆ ಕಲಂಕ ಹಚ್ಚಿಕೊಳ್ಳಲಾರರು . ಆಪತ್ಕಾಲದಲ್ಲಿ ಸ್ಥಿರಚಿತ್ತರಿರುವರು. ಘನವಾದ ರೀತಿಯಲ್ಲಿ ನಡೆದುಕೊಳ್ಳುವರು. ಇಂಥ ಖಡ್ಗದ ಅಂಚಿನ ಮೇಲೆ ನಡೆಯುವ ಕಠಿಣ ವ್ರತವನ್ನು ಅವರಿಗೆ ಯಾರು ಹೇಳಿದರು? (**) "ಸಕಲಶಾಸ್ತ್ರಗಳೂ ಒಂದುವೇಳೆ ವಿನಾಶ ಹೊಂದುವುದಾದರೂ ಹಿಂದೂಧರ್ಮದ ಸಾರವನ್ನು ಸಾರಲು ಈಶೋಪನಿಷತ್ತಿನ ಮಂತ್ರ ಸಾಕು" ಎಂಬ ಸಾಲನ್ನು ನೋಡಿದಾಗ ಯಾವುದದು ಈಶೋಪನಿಷತ್ತಿನ ಸಾಲು ಎಂದು ನನ್ನ ಹತ್ತಿರ ಇದ್ದ - ಅದೇ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದ ಇನ್ನೊಂದು ಪುಸ್ತಕ - ಅಷ್ಟೋಪನಿಷತ್ - ಅನ್ನು ತಿರುವಿ ಹಾಕಿದೆ. ಅಲ್ಲಿ ಸಿಕ್ಕ ಸಾಲುಗಳಿವು -- ಈ ಜಗತ್ತಿನಲ್ಲಿ ಕರ್ಮ ಮಾಡುತ್ತಲೇ ನೂರು ವರ್ಷ ಬದುಕುವ ಅಪೇಕ್ಷೆಯನ್ನು ಹೊಂದಿರಬೇಕು. -- ಈ ಎಲ್ಲ ಜೀವಿಗಳೂ ತನ್ನ ಆತ್ಮನಿಂದ ಬೇರೆ ಅಲ್ಲ , ತನ್ನ ಆತ್ಮವೂ ಇತರ ಜೀವಿಗಳಿಗಿಂತ ಬೇರೆಯಲ್ಲ ಎಂದು ಅರಿತ ಜ್ಞಾನಿಯು ಆ ಜ್ಞಾನದ ಬಲದಿಂದ ಯಾರನ್ನೂ ದ್ವೇಷಿಸದ ಸ್ಥಿತಿಯನ್ನು ತಲುಪುತ್ತಾನೆ. ಸಕಲ ಸೃಷ್ಟಿಯ ಏಕತೆಯನ್ನು ಕಂಡ ಜ್ಞಾನಿಗೆ ಯಾವ ಮೋಹ ಮತ್ತು ಶೋಕ ತಾನೇ ಇರುವುದು? -- ಸತ್ಯದ ಮುಖವು ಹೊಳೆಯುವ ಬಂಗಾರದ ಮುಚ್ಚಳದಿಂದ ಮುಚ್ಚಲ್ಪಟ್ಟಿದೆ. ಓ ಸತ್ಯಪುರುಷನೇ ಆ ಮುಚ್ಚಳವನ್ನು ತೆರೆದು ಸತ್ಯ ಮತ್ತು ಧರ್ಮದ ಜ್ಯೋತಿಯನ್ನು ನಮಗೆ ತೋರಿಸು. -- ಓ ಅಗ್ನಿಯೇ ನಮ್ಮನ್ನು ಒಳ್ಳೆಯ ದಾರಿಯಲ್ಲಿ ನಡೆಸು. "ಸಕಲಶಾಸ್ತ್ರಗಳೂ ಒಂದುವೇಳೆ ವಿನಾಶ ಹೊಂದುವುದಾದರೂ ಹಿಂದೂಧರ್ಮದ ಸಾರವನ್ನು ಸಾರಲು ಈಶೋಪನಿಷತ್ತಿನ ಮಂತ್ರ ಸಾಕು " ಎಮ್ದನ್ನುವಾಗ ಬಹುಶಃ ಗಾಂಧಿಯವರ ಮನಸ್ಸಿನಲ್ಲಿ ಇದ್ದ ವಾಕ್ಯವು "ಈ ಎಲ್ಲ ಜೀವಿಗಳೂ ತನ್ನ ಆತ್ಮನಿಂದ ಬೇರೆ ಅಲ್ಲ , ತನ್ನ ಆತ್ಮವೂ ಇತರ ಜೀವಿಗಳಿಗಿಂತ ಬೇರೆಯಲ್ಲ ಎಂದು ಅರಿತ ಜ್ಞಾನಿಯು ಆ ಜ್ಞಾನದ ಬಲದಿಂದ ಯಾರನ್ನೂ ದ್ವೇಷಿಸದ ಸ್ಥಿತಿಯನ್ನು ತಲುಪುತ್ತಾನೆ. ಸಕಲ ಸೃಷ್ಟಿಯ ಏಕತೆಯನ್ನು ಕಂಡ ಜ್ಞಾನಿಗೆ ಯಾವ ಮೋಹ ಮತ್ತು ಶೋಕ ತಾನೇ ಇರುವುದು?" ಎಂಬುದೇ ಇರಬೇಕು, ಅಲ್ಲವೇ? ( ಅಂದ ಹಾಗೆ ನಾವು ಒಳ್ಳೆಯದನ್ನು ನೋಡುವಂತಾಗಲಿ ; ಒಳ್ಳೆಯದನ್ನು ಕೇಳುವಂತಾಗಲಿ ಎಂಬ ಅಶಯವು ಮುಂಡಕೋಪನಿಷತ್ತಿನಲ್ಲಿದೆ ; " ಕೆಟ್ಟದ್ದನ್ನು ಕೇಳಬೇಡ ; ಆಡಬೇಡ; ನೋಡಬೇಡ" ಎಂಬುದನ್ನು ಸೂಚಿಸುವ ಮೂರು ಕೋತಿಗಳ ಗಾಂಧಿಯವರ ಇಷ್ಟದ ಪ್ರತಿಮೆಯನ್ನು ನೆನಪಿಸಿತು)

 

ASCII ಫಾಂಟ್ ನಲ್ಲಿರುವ ಕನ್ನಡವನ್ನು ಓದಲು ಆಗುತ್ತಿಲ್ಲವೇ ?

ನಾನು ನನ್ನ ಪರ್ಸನಲ್ ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು ಬರಹವನ್ನೋ ನುಡಿಯನ್ನೋ ಅಥವಾ ಮತ್ತಾವುದನ್ನೋ ಬಳಸಿ ಬರೆದವಾದಲ್ಲಿ ಓದಲೇ ಆಗುತ್ತಿರಲಿಲ್ಲ . ಬಹುಶಃ ವಿಂಡೋಸ್ ನಲ್ಲಿ ಕೂಡ ಸಂಬಂಧಪಟ್ಟ ಫಾಂಟ್ ಇಲ್ಲದಿದ್ದರೆ ಅಲ್ಲೂ ಕಾಣಿಸಲಿಕ್ಕಿಲ್ಲ. ಅಂಥ ಸಮಯದಲ್ಲಿ ಇವತ್ತು ಗೂಗಲ್ ನಲ್ಲಿ ಹುಡುಕಿದಾಗ ಸಿಕ್ಕ ಕೊಂಡಿ ಇದು. http://aravindavk.in/ascii2unicode/ ಆ ಪುಟದಲ್ಲಿ ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು ಸಹಾಯ ಮಾಡುವ ತಂತ್ರಾಂಶ ಇದೆ. ಎಡಗಡೆ ಇರುವ ಜಾಗದಲ್ಲಿ ನುಡಿ/ಬರಹ ದಲ್ಲಿ ಬರೆದ ಪಠ್ಯವನ್ನು ಹಾಕಿ ನಂತರ ಕನ್ವರ್ಟ್ ಅಂತ ಇರುವ ಬಟನ್ ಒತ್ತಿ. ಪಕ್ಕದ ಜಾಗದಲ್ಲಿ ಯುನಿಕೋಡ್ ಗೆ ಬದಲಾವಣೆಗೊಂಡು ಕಾಣಿಸುತ್ತದೆ. ಅರವಿಂದರಿಗೆ ತುಂಬಾಆಆಆಆಆಆಆ ಧನ್ಯವಾದಗಳು.

 

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"

೧೯೩೨ ರಲ್ಲಿ ಅಚ್ಚಾದ ಒಂದು ಪತ್ತೇದಾರಿ ನೀಳ್ಗತೆಯೊಂದನ್ನು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ ಇಳಿಸಿಕೊಂಡು ಓದಿದೆ. ಅದರ ಹೆಸರು - ಎರಡೆರಡು ಹೆಸರು ಕೊಡುವ ಹಳೆಯ ವಾಡಿಕೆಯಂತೆ - "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !" ಧಾರವಾಡದ ಬಳಿಯ ಆನಂದವನ, ಅಗಡಿಯ ಶ್ರೀ ಶೇಷಾಚಲ ಪ್ರೆಸ್ಸ್ ಮತ್ತು ಗ್ರಂಥಮಾಲೆಯ ಪ್ರಕಟಣೆ ಇದು. ಕನ್ನಡ, ದೇವನಾಗರೀ, ರೋಮನ್ ಲಿಪಿಗಳಲ್ಲಿ ಪ್ರಕಾಶನ ಸಂಶೆಯ ಹೆಸರನ್ನು ಬರೆದಿದ್ದಾರೆ . ಅಡಿಯಲ್ಲಿ - ಮರಾಠಿಯಲ್ಲಿ ' ಹೇ ಪುಸ್ತಕ ಬಿ.ಪ.ಕಾಳೆ , ಯಾನೀ ಅನಂದವನ-ಅಗಡಿ ಯೇಥೀಲ ಆಪಲ್ಯಾ ಶ್ರೀ ಶೇಷಾಚಲ ಛಾಪಖಾನ್ಯಾತ ಛಾಪಿಲೆ' ಅಂತ ಮರಾಠಿ-ದೇವನಾಗರಿಯಲ್ಲಿ ಮುದ್ರಿಸಿದ್ದಾರೆ! ಇದು ಸದ್ಬೋಧಚಂದ್ರಿಕೆಯ 'ಆಷಾಢ ಶಕೆ ೧೮೫೪, july 1932'ರ ನಾಲ್ಕನೇ ಸಂಚಿಕೆ . ಈ ಅಗಡಿಯ ಶೇಷಾಚಲ ಸಂಸ್ಥೆ, ಅಲ್ಲಿಯ ಶೇಷಾಚಲ ಸಾಧುಗಳು ಮಾಡಿದ ಕನ್ನಡ ಸೇವೆ ಅಪಾರವಾಗಿದ್ದಿರಬೇಕು. ಇರಲಿ. ಈ ಪುಸ್ತಕವನ್ನು ತಿರುವಿ ಹಾಕಿದಾಗ ...... ಈ ಕತೆಯು ೨೫ ಪುಟಗಳದ್ದು. ಪ್ರತಿ ಅಧ್ಯಾಯಕ್ಕೆ ಒಂದು ತಲೆಬರಹ - ಮತ್ತು ಒಂದು ಅಡಿಬರಹ . ಆ ತಲೆಬರಹಗಳು , ಅಡಿಬರಹಗಳು , ಒಳಗಿನ ಹೂರಣ ಏನೆಂದು ನೋಡೋಣ ಬನ್ನಿ . ೧) ಇದ್ದ ಮೂವರಲ್ಲಿ ಕದ್ದವರಾರು ? - (ರವಿಕಾಣದುದಂ ಕವಿ ಕಾಂಬಂ) ಒಂದು ಬ್ಯಾಂಕು , ಅಲ್ಲಿ ತಿಜೋರಿ , ಅದನ್ನು ತೆಗೆಯಬಲ್ಲವರು ಇಬ್ಬರು , ಮ್ಯಾನೇಜರೂ ಸರಾಫ(ಕ್ಯಾಶಿಯರ್)ನೂ ಅದರ ಚಕ್ರದಲ್ಲಿಯ ಅಕ್ಷರಗಳ ಸಂಯೋಜನೆಯಿಂದ ತೆರೆಯುತ್ತಿದ್ದರು , ಮುಚ್ಚುತ್ತಿದ್ದರು. ಆ ಸಂಕೇತ ಶಬ್ದವನ್ನು ಒಂದು ಪುಸ್ತಕದಲ್ಲಿ ಬರೆದಿಡುತ್ತಿದ್ದರಂತೆ ! ಅಲ್ಲಿಂದ ಆವತ್ತಿನ ದೊಡ್ಡ ರಕಮು ಕಳುವಾಗಿದೆ! ಪೋಲೀಸ್ ಇನ್ಸಪೆಕ್ಟರ್ ಬಂದರು ," ದೊಡ್ಡ ದೊಡ್ಡವರು ಒಂದೇ ನೋಡಿರಿ! ಇನ್ಸಪೆಕ್ಟರರು ಮ್ಯಾನೇಜರರ ಮಾತು ದಿಟವೆಂದರು. ಸರಾಫರಿಗೆ ಕಾರಾಗ್ರಹವಾಸವಾಯಿತು, ಪೋಲೀಸರ ಕೆಲಸ - ತಪ್ಪು ಮಾಡಿದವರು ಯಾರಾದರೇನು? ಒಟ್ಟಿನ ಮೆಲೆ ಒಬ್ಬನಿಗೆ ಶಿಕ್ಷೆ ಅದರಾಯಿತು. " ಆಗ ಅಲ್ಲಿಗೆ "ಪತ್ತೇದಾರ ಶಿರೋಮಣಿ" ಭೀಮಸಿಂಗನ ಪ್ರವೇಶ. ೨) ಇವೆಲ್ಲ ಸಾಧುಗಳಿಗೇಕೆ? ( ಬೆಳ್ಳಗಿದ್ದುದೆಲ್ಲ ಹಾಲಲ್ಲ) ಪತ್ತೇದಾರನು ಸಾಧು ವೇಶದಿಂದ ಕ್ಯಾಶಿಯರನ ಮನೆಗೆ ಹೋದಾಗ ಅವನ ಕೈಗೆ ಒಂದು ಕಾಗದ ಸಿಗುವದು . ೩) ಚಿತ್ರಮಯ ಪತ್ರ ( Little flower if I could understand what you are , root and all in all , I should know what God and man is ) ಈ ಇಂಗ್ಲೀಶ್ ವಾಕ್ಯದ ಅರ್ಥ ನಿಮಗೇನಾದರೂ ಅಯಿತೇ? - ಬಹುಷ: ಅ ಕಾಲಕ್ಕೆ ಕಲಿಯುವವರು ಇಂಗ್ಲೀಶನ್ನೇ ಕಲಿಯುತ್ತಿದ್ದರು , ಕನ್ನಡ ಪುಸ್ತಕಗಳೇ ಇದ್ದಿಲ್ಲ . ಈ ಇಂಗ್ಲೀಷ್ ವಿದ್ಯಾವಂತರಿಗಾಗಿ ಕನ್ನಡ ಪುಸ್ತಕಗಳು ಶುರು ಆಗಿರಬೇಕು ! ಹಿಂದಿನ ಕಾಲಕ್ಕೆ ಕಲಿಯುವವರು ಇಂಗ್ಲೀಶನ್ನೇ ಕಲಿಯುತ್ತಿದ್ದರು, ಮಧ್ಯೆ ಕನ್ನಡ ಬಂದಿತು , ಈಗ ಮತ್ತೆ ಎಲ್ಲರೂ ಇಂಗ್ಲೀಷನ್ನೇ ಕಲಿಯುತ್ತಿದ್ದಾರೆ !! ಇರಲಿ . ನಮ್ಮ ಪತ್ತೇದಾರನ ಕೈಗೆ ಸಿಕ್ಕ ಕಾಗದದಲ್ಲಿ ಹೀಗಿತ್ತು . 532 c2 , 10 :871 c1,5 - ಉ: 530,c,1,9 ........(ಇತ್ಯಾದಿ ) ... ಇದ್ದೇನೆ .....474,c219 (ಇತ್ಯಾದಿ ) ...+ ಇ.ಬಾ. ಇ.ಬಾ. ಎಂದರೆ ಇಲ್ಲಿಗೆ ಬಾ ಎಂದಿರಬೇಕು ಎಂದು ನಾನು ಊಹಿಸಿದೆ! ನಮ್ಮ ಪತ್ತೇದಾರನೂ ಅವನ ಜಾಣ ಪತ್ನಿಯೂ ಈ ಗೂಢಲಿಪಿಯನ್ನು ಬಿಡಿಸುವರು ! ಅದು ಹೇಗೆ ? ಅವರು ಇದು ಒಂದು ಶಬ್ದಕೋಶ ( ಅದೇರಿ ಡಿಕ್ಶನರಿ!!!) ದಲ್ಲಿನ ಪುಟ/ಕಾಲಂ/ಶಬ್ದದ ಸಂಖ್ಯೆ ಎಂದು ತೀರ್ಮಾನಕ್ಕೆ ಬರುವರು. ೪) ಎಳೆಯಂತೂ ಸಿಕ್ಕಿತು! ಹಚ್ಚಡ ನುಂಗುವದು ಹೇಗೆ? ( Wait, watch and Pray , Plead and then Proceed) "ಅನಂತರ ನಮ್ಮ ಪತ್ತೇದಾರನು ಪ್ರಸಿದ್ಧ ಪುಸ್ತಕ ವ್ಯಪಾರಿಯೊಬ್ಬನ ಬಳಿಗೆ ಹೋದನು. ನಮ್ಮ ಕಥಾನಕವು ನಡೆದ ಕಾಲದಲ್ಲಿ ಬೆಂಗಳೂರಿಗೆಲ್ಲ ಒಂದೇ ಒಂದು ಪುಸ್ತಕದ ಅಂಗಡಿ ಇತ್ತು . ಆರು ವರ್ಷಗಳಿಂದಲೂ ಹನ್ನೆರಡು ಕನ್ನಡ ಕೋಶಗಳು ಖರ್ಚಗದೇ ಉಳಿದಿದ್ದವೆಂದೂ ಈಗ ೫-೭ ತಿಂಗಳ ಹಿಂದೆ ಜಯಲಕ್ಷ್ಮೀ ಬ್ಯಾಂಕಿನ ಮ್ಯಾನೇಜರರಾದ ಗುಂಡೇರಾಯರು ಒಂದು ಪುಸ್ತಕವನ್ನು ತೆಗೆದುಕೊಂಡರೆಂದೂ ತಿಳಿದು ಬಂದಿತು. " ಕ್ಯಾಶಿಯರನ ಬಳಿಯೂ ಇಂಥ ಒಂದು ಶಬ್ದಕೋಶವು ಇರಬೇಕೆಂದು ನಮ್ಮ ಪತ್ತೇದಾರನು ತರ್ಕಿಸಿದ್ದು ನಿಜವಾಯಿತು. ( ನಮ್ಮ ಪತ್ತೇದಾರನಾದರೂ ತನ್ನಲ್ಲಿರುವ ಪತ್ರದ ಗೂಢಲಿಪಿಯನ್ನು ಡಿಕೋಡ್ ಮಾದಲು ಇನ್ನೊಂದು ಪ್ರತಿಯನ್ನು ಖರೀದಿ ಮಾಡಿದ ಎಂದುಕೊಂಡಿರಾ? ಅದು ತಪ್ಪು, ಅವನೂ ಅ ಶಬ್ದಕೋಶವನ್ನು ಕ್ಯಾಶಿಯರನ ಕಡೆಯಿಂದ ಏನೋ ನೆವ ಹೇಳಿ ಎರವಲು ಪಡೆಯುವನು!!) ಕತೆ ನಮಗೆ ಬೇಡ - ಅಲ್ಲಿ ಸಾಕಷ್ಟು ತಿರುವುಗಳು , ಅಚ್ಚರಿಗಳೂ ಇವೆ . ನಾನು ಕತೆಯನ್ನು ತಿಳಿಸುತ್ತಿಲ್ಲ , ಅಲ್ಲಿನ ಸ್ವಾರಸ್ಯಗಳನ್ನು ತಿಳಿಸುತಿದ್ದೇನೆ. ೫) ನಾರಿಯ ತಂತ್ರವು ನರಾಯಣನಿಗೂ ತಿಳಿಯದು! (Trust not your daughters mind by what you see them act) ೬) ಆಟಕ್ಕೆ ತಕ್ಕ ವೇಶ , ವೇಷಕ್ಕೆ ತಕ್ಕ ಭಾಷೆ ( A jests prsperity lies in the ears of those who that here it ) ೭) ರಹಸ್ಯ ಸ್ಫೋಟನ -೧ ( ಹಿಡಿದ ಕಾರ್ಯ ಸಾಧಿಸಲು ಹೆಣವನ್ನಾದರೂ ಹೊರಬೇಕು) ೮) ರಹಸ್ಯ ಸ್ಫೋಟನ -೨ ( Take warnings hence ye , damsels fair , Of mens insiduous arts beware) ಪತ್ತೇದಾರ ಭೀಮಸಿಂಗನನ್ನು ಚಂಚಲೆಯು ಹೀಗೆ ಸಂಬೋಧಿಸುವಳು "ಜ್ಞಾನಿಗಳೇ " !! ೯) ಮಾಡಿದ ಪಾಪಕ್ಕೆ ಮನವೇ ಸಾಕ್ಷಿ ( Early or late , we stoop to fate) ೧೦) ವಿಚಿತ್ರದ ಮೇಲೆ ವಿಚಿತ್ರ ( unity in diversity ) ಆಂ? 1932 ರ ಪುಸ್ತಕದಲ್ಲಿ ನಾವು ಈಗ ದಿನ ನಿತ್ಯ ಕೇಳುವ unity in diversity !!??? ೧೧) ಉಪಸಂಹಾರ "ಇಲ್ಲಿಗೆ ನಮ್ಮ ಕಥೆಯು ಮುಗಿಯಿತು" ನಮ್ಮ ಕಥೆ ? ಮುಗಿಯಿತು? --- ಸಂಪೂರ್ಣಂ ---

 

ಪುಸ್ತಕನಿಧಿ-ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು'

ಈಗ ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು' ಎಂಬ ಪುಸ್ತಕವನ್ನು ಓದುತ್ತಿದ್ದೇನೆ . ನವರತ್ನ ರಾಮರಾವ್ ಅವರು ಬ್ರಿಟಿಷ್ ಸರಕಾರದ ಆಡಳಿತದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು . ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕದ ಬಗೆ ಅಲ್ಲಲ್ಲಿ ಓದಿದ್ದೆ. ಪುಸ್ತಕದ ಅಂಗಡಿಯಲ್ಲಿ ನೋಡಿದಾಗ, ಓದೋಣವೆಂದು ಬಹುದಿನಗಳ ಹಿಂದೆ ಕೊಂಡಿದ್ದೆ. ಈಗ ಓದುತ್ತಿದ್ದೇನೆ . ಪುಸ್ತಕವು ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ, ಅಂದಿನ ದಿನಮಾನಗಳ ಪರಿಚಯ ನಮಗಾಗುತ್ತದೆ. ಅದರಲ್ಲಿನ ಒಂದು ಪ್ರಸಂಗವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ಈ ಪುಸ್ತಕವು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದ (http://www.dli.gov.in/cgi-bin/metainfo.cgi?&title1=Kelavu%20Nesapugal%27u&author1=Raama%20Navaratna&subject1=GEOGRAPHY.%20BIOGRAPHY.%20HISTORY&year=1954%20&language1=kannada&pages=481&barcode=2030020027649&author2=&identifier1=&publisher1=Jiivana%20Kaaryaalaya&contributor1=&vendor1=NONE&scanningcentre1=rmsc,%20iiith%20&slocation1=NONE&sourcelib1=Osmania%20University&scannerno1=2&digitalrepublisher1=Digital%20Library%20Of%20India&digitalpublicationdate1=&numberedpages1=&unnumberedpages1=&rights1=IN_COPYRIGHT©rightowner1=©rightexpirydate1=&format1=Tagged%20Image%20File%20Format%20&url=/data7/upload/0197/722) ಈ ಕೊಂಡಿಯಲ್ಲೂ ಇದೆ. "ಒಬ್ಬ ಅಮಲ್ದಾರರು ಗ್ರಾಮವೊಂದರಲ್ಲಿ ಮೊಕ್ಕಾಂ ಮಾಡಿದಾಗ ಅವರಲ್ಲಿ ಕೆಲವರು ಬಹಳ ಪರಿತಾಪದಿಂದ ತಮಗೆಲ್ಲರಿಗೆ ವಕ್ಕರಿಸಿದ್ದ ಒಂದು ಅಸಹ್ಯವಾದ ಯಾತನೆಯನ್ನು ಹೇಳಿಕೊಂಡರು. ಹೊಳೆಯ ಆಚೆಯ ಕಡೆಯಿಂದ ಯಾವನೋ ಒಬ್ಬ ದುಷ್ಟ ಅನುಕೂಲ ಸಮಯ ಕಾಯ್ದು ಹೊಳೆ ದಾಟಿ ಬಂದು ಹೊಲಗದ್ದೆಗಳಲ್ಲಿ ಏಕಾಕಿಯಾಗಿ ಕೆಲಸ ಮಾಡುತ್ತಿದ್ದ ಹೆಣ್ಣುಮಕ್ಕಳನ್ನು ಕೆಣಕುತ್ತಿದ್ದನಂತೆ. ಇದನ್ನು ತಿಳಿದು ಅಮಲ್ದಾರರಿಗೆ ಬಹಳ ಸಂಕಟವಾಯಿತು. ಅವರು ಗ್ರಾಮಸ್ಥರಿಗೆ ಸಲಹೆಕೊಟ್ಟರು; ಹೊಂಚಿಕಾದು ಆ ದುಷ್ಟನನ್ನು ಹಿಡಿದುಕೊಂದು ಬನ್ನಿ, ಅವನಿಗೆ ಸರಿಯಾದ ಶಿಕ್ಷೆ ಮಾಡೋಣ ಎಂದು . ಆಯಿತು , ಅಮಲ್ದಾರರಲ್ಲಿ ಈ ವಿಚಾರದ ದೂರೇ ಮತ್ತೆ ಬರಲಿಲ್ಲ. ಸುಮಾರು ಒಂದು ವರುಷದ ನಂತರ ಅಮಲ್ದಾರರು ಅದೇ ಗ್ರಾಮದಲ್ಲಿ ಮೊಕ್ಕಾಂ ಮಾಡಿದಾಗ ಹಿಂದೆ ಕೇಳಿದ್ದನ್ನು ಜ್ಞಾಪಿಸಿಕೊಂಡು , ಪುನಃ ಆ ಪುಂಡ ಮನುಷ್ಯ ಮತ್ತೆ ಬರಲಿಲ್ಲವೇ ಎಂದು ವಿಚಾರಿಸಲಾಗಿ ಆ ಗ್ರಾಮಗಳ ಮುಖಂಡರು ಅಚ್ಚರಿಗೊಂಡವರಂತೆ ' ಓ! ಅದೋ ? ಹುಡುಗರ ಪೊಳ್ಳು ಮಾತು ಬುದ್ಧಿ , ಯಾರೋ ಮೀನು ಹಿಡಿಯುತ್ತಿದ್ದವನನ್ನು ನೋಡಿ ಚಿಕ್ಕ ಹುಡುಗಿ ಹೆದರಿಕೊಂಡು ಓಡಿಬಂದಿತಂತೆ; ಅದು ಬಾಯಿಂದ ಬಾಯಿಗೆ ಬೀಳುತ್ತಾ ಬೆಳೆದು ದೊಡ್ಡದೊಂದು ಪಂಚಾಂಗ ಆಗಿಹೋಯ್ತು, ಆ ಸುದ್ದೀನೇ ಕಾಣೆವು' - ಅಂದರು. ಆಮೇಲೆ ವಿಚಾರಿಸಲಾಗಿ ಗುಟ್ಟಾಗಿ ವರ್ತಮಾನ ಬಂತು. ಆ ಪುಂಡನಿಗೆ ಹೊಂಚುಹಾಕಿ ಅವನನ್ನು ಅಕೃತ್ಯದ ಕೃತ್ಯದಲ್ಲೇ ಹಿಡಿದು , ಗ್ರಾಮ ಕೋರ್ಟಿನಲ್ಲೇ ರಹಸ್ಯವಾಗಿ ವಿಚಾರಣೆ ನಡೆಸಿ , ತಪ್ಪು ಸಾಬೀತಾಗಲು ಮರಣ ದಂಡನೆಯನ್ನು ವಿಧಿಸಿ , ಜಾರಿ ಮಾಡಿಸಿ , ಆಗ ಪ್ರವಾಹದಲ್ಲಿದ್ದ ಹೊಳೆಗೆ ಹೆಣವನ್ನು ಚಾಚಿ ಬಿಟ್ಟರೆಂದು ತಿಳಿದುಬಂತು. ಹೆಣವೂ ಜಲಚರಗಳಲ್ಲಿ ಜೀರ್ಣವಾಗಿ ಹೋಗಿ ಬಹುದಿನಗಳಾಗಿದ್ದವು. ಸಾಕ್ಷ್ಯ ದುರ್ಲಭ ಮಾತ್ರವಲ್ಲ, ಅಲಭ್ಯವಾಗಿತ್ತು. ಇಷ್ಟಾಗಿ ಆ ಪೋಕರಿಯನ್ನು ಹಿಡಿದು ಕ್ರಮವಾದ ನ್ಯಾಯಾಸ್ಥಾನಕ್ಕೆ ತಂದಿದ್ದರೆ ಅನೇಕ ಮರ್ಯಾದಸ್ಥ ಮನೆಯ ಮುಗ್ಧ ಹೆಣ್ಣುಮಕ್ಕಳ ಮಾತು ಬಯಲಿಗೆ ಬರುತ್ತಿತ್ತು; ಅಪರಾಧಿಗೆ ಜುಜುಬಿ ಶಿಕ್ಷೆ ಆಗುತ್ತಿತ್ತು. ಗ್ರಾಮಸ್ಥರು ಮಾಡಿದ್ದು ಕಾನೂನಿಗೆ ವಿರುದ್ಧ ಆದರೆ ನ್ಯಾಯಕ್ಕೆ ವಿರುದ್ಧವೆಂದು ಹೇಳಲಿಕ್ಕೆ ನನಗೆ ಧೈರ್ಯ ಸಾಲದು.

 

DLI ಪುಸ್ತಕ‌ನಿಧಿ ‍‍.... ಬಾಳಿನ‌ ಗುಟ್ಟು

ಹಿಂದೆ ಎಂದೋ ಇಳಿಸಿಕೊಂಡ ಈ ಪುಸ್ತಕವನ್ನು ತೀರಾ ಇತ್ತೀಚಿಗಷ್ಟೇ ಓದಿದೆ. ಇದು ಇಂಗ್ಲಿಷ್ ನಿಂದ ಗೌರೀಶ ಕಾಯ್ಕಿಣಿ ಅವರು ಅನುವಾದ ಮಾಡಿದ ಪುಸ್ತಕ. ಪ್ರತಿಯೊಬ್ಬರ ಬದುಕು ರೂಪುಗೊಳ್ಳುವುದು ಹೇಗೆ? ನಮ್ಮ ನಿಮ್ಮ ಜೀವನ, ಸ್ವಭಾವ ಹೀಗಿರಲು ಕಾರಣಗಳೇನು? ಮಕ್ಕಳನ್ನು ಬೆಳೆಸುವಾಗ ತಾಯಿ- ತಂದೆಯರು, ಶಾಲೆಯಲ್ಲಿ ಶಿಕ್ಷಕರು ಗಮನಿಸಬೇಕಾದುದೇನು? ಇವೇ ಮು೦ತಾದ ಸಂಗತಿಗಳು ಇಲ್ಲಿ ಇವೆ. ಎಳೆಯತನದ ಯಾವೆಲ್ಲ ಸಂಗತಿಗಳು ಮನುಷ್ಯನ ಇಡೀ ಜೀವನವನ್ನು ಪ್ರಭಾವಿಸಿ ಯಶಸ್ವೀ ಜೀವನಕ್ಟೋ ವಿಫಲತೆಗೋ ಹೇಗೆ ಕಾರಣವಾಗುತ್ತವೆ ಎಂಬುದನ್ನು ಮನಗಾಣಬೇಕಾದರೆಈ ಪುಸ್ತಕವನ್ನು ನೀವು ಓದಲೇಬೇಕು. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲೂ ಈ ಪುಸ್ತಕ ಇರುವುದಾದರೂ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ತಾಣದಲ್ಲಿ ಈ ಪುಸ್ತಕವು ಪೀಡಿಎಫ್ ರೂಪದಲ್ಲಿಯೇ ಇದೆ! ಅದರ ಕೊಂಡಿ ಇಲ್ಲಿದೆ. http://oudl.osmania.ac.in/handle/OUDL/3317

Wednesday, December 02, 2009

 
http://nannakanda.blogspot.com/ ಬ್ಲಾಗಿಷ್ಟರಿಂದ ಆಮಂತ್ರಿತರಿಗೆ ಮಾತ್ರ ; ಎಲ್ಲರಿಗೂ ಅಲ್ಲ

http://suvarnaangala.blogspot.com/ ಸಂಪದಿಗರಾದ ಚಾಮರಾಜ ಸವಡಿ ಅವರು ಬರೆದ ಕಚೇರಿ ವಾತಾವರಣದ ಬಗೆಗಿನ ಕೆಲವು ಬರಹಗಳು , ಶ್ರೀದೇವಿ ಕಳಸದ ಅವರ ಕೆಲವು ಕವನಗಳು ಇಲ್ಲಿವೆ . ಒಂದು ವರ್ಷದಿಂದ ಏನೂ ಸೇರ್ಪಡೆ ಇಲ್ಲ .

http://anchemane.blogspot.com/ ಆದರ್ಶ ಅಂಚೆ ಅನ್ನುವವರ ಮನೆ ಇದು . ತೂತ್ ಕಂಡೀಶನ್ ಬಸ್ಸು ಒಂದೇ ಬರಹ ಇದೆ . ಎರಡು ವರ್ಷ ಹಿಂದಿನದ್ದು.
( ನಾನು ಹೀಗೆಲ್ಲ ಬರೀತ ಹೋದರೆ ಮಲಗಿರುವ ಒಂದಿಷ್ಟು ಬ್ಲಾಗುಗಳು ಮತ್ತೆ ಎದ್ದಾವು ! ಅದೂ ಒಂಥರ ಅಳಿಲುಸೇವೆ ನನ್ನಿಂದ !!)


http://antaranga.blogspot.com/ ಇಲ್ಲಿ ಮುನ್ನೂರಕ್ಕೂ ಹೆಚ್ಚು ಬರಹಗಳು ಇವೆ ... ತಡೀರಿ ಎಲ್ಲ ನೋಡಿ ಬರೀತೀನಿ!!

 
ಕನ್ನಡಬಲ (http://www.kannadabala.blogspot.com/) ಇದು ಕನ್ನಡಾಭಿಮಾನಿ ರೋಹಿತ್ ರಾಮಚಂದ್ರಯ್ಯ ಅವರ ಬ್ಲಾಗು . ಇಲ್ಲಿ ೭೦೦ ಕನ್ನಡ ಬ್ಲಾಗುಗಳು , ಕನ್ನಡ ತಾಣಗಳು, ಸುದ್ದಿ ತಾಣಗಳು ,
ಪೋರ್ಟಲ್ ಗಳು, ದ್ವಿಭಾಷಾ ತಾಣಗಳು , ಆಂಗ್ಲ ತಾಣಗಳು ಗಳ ಕೊಂಡಿಗಳು ಸಿಗುತ್ತವೆ !!

 
ಕನ್ನಡ ಬ್ಲಾಗುಲೋಕದಲ್ಲಿ ವಿಹಾರ

kannadabala.blogspot.com ಎಂಬ ಬ್ಲಾಗಿನಲ್ಲಿ ಕನ್ನಡ ಬ್ಲಾಗ್ ಗಳ ಪಟ್ಟಿಯೇ ಸಿಕ್ಕಿತು . ಸರಿ ಎಲ್ಲ ಜಾಲಾಡೋಣ ಅಂತ ಹೊರಟೀನಿ . ಅಲ್ಲಿ ಏನೇನಿದೆ ನೋಡೋಣ .. ವಿಶೇಷ ಕಂಡದ್ದನ್ನು ತಿಳಿಸ್ತೀನಿ ....


ಇದೋ ಶುರು ಕನ್ನಡಬಲದಿಂದಲೇ !!!!

Tuesday, April 21, 2009

 
ಗೋಳಾಟ


ಅಯ್ಯೋ, ನಾನು ಧಡ್ಡನಾದೆನು
ಅಯ್ಯೋ, ನನ್ನ ತಲೆಯು ಓಡಲೊಲ್ಲದು

ಅಯ್ಯೋ, ನನಗೆ ಕೆಲಸ ಇಲ್ಲವು
ಅಯ್ಯೋ, ನನಗೆ ಕೆಲಸ ಮಾಡುವ ಮನಸೂ ಇಲ್ಲವು !
ಅಯ್ಯೋ, ನನಗೆ ಹೇಳುವರಾರೂ ಇಲ್ಲವು
ಅಯ್ಯೋ, ನನಗೆ ಕೇಳುವರಾರೂ ಇಲ್ಲವು

ಅಯ್ಯೋ, ನಾನು ಏನೂ ಸಾಧಿಸಲಿಲ್ಲವು
ಅಯ್ಯೋ, ನಾನು ಏನೂ ಸಾಧಿಸುತಿಲ್ಲವು
ಅಯ್ಯೋ, ನನಗೆ ಏನೂ ಸಾಧಿಸಲಿಕ್ಕಿಲ್ಲವು
ಅಯ್ಯೋ, ನನಗೆ ಸಮಾಧಾನ ಇಲ್ಲವು

ಅಯ್ಯೋ, ನಾನು ಏನೂ ಕಲಿಯುತಿಲ್ಲವು
ಅಯ್ಯೋ, ನನಗೆ ಏನೂ ತೋಚುತಿಲ್ಲವು
ಅಯ್ಯೋ, ಇನ್ನೆರಡು ಸಾಲು ಹೊಳೆಯುತಿಲ್ಲವು
ಅರೆ , ಅಂತೂ ಈ ಹಾಡನ್ನು ಪೂರ್ತಿಗೊಳಿಸಿದೆನು !

Monday, December 15, 2008

 
http://www.youtube.com/watch?v=mL6Sc9SU5jE ಇಲ್ಲಿ ’ಛೋಟೀ ಛೋಟೀ ಸೀ ಬಾತ್’ ಎಂಬ ಹಿಂದಿ ಚಿತ್ರದ ಹಾಡೊಂದಿದೆ . ಹಿಂದೆ ಕೇಳಿರದಿದ್ದರೆ ಈಗ ಕೇಳಿ .

ಈ ಹಾಡನ್ನು ಅನುವಾದಿಸಲು ಹವಣಿಸಿದ್ದೇನೆ .
ಸಾಧ್ಯವಾದಷ್ಟು , ಮೂಲದ ಲಯ , ಧಾಟಿಯನ್ನು ಇಟ್ಟುಕೊಂಡಿದ್ದೇನೆ.ಹೀಗೇತಕೋ
ಆಗೋದು ಬದುಕಲಿ
ನಾನರಿಯೆನೂ !
ಹೋದ ಮೇಲೆ ಯಾರೋ
ಕಾಡೋದು ನೆನಪು ಅವರದೂ ,
ಸಣ್ಣ ಸಣ್ಣವೇ ವಿಷಯಾ !

ಅರಿವಿಲ್ಲದೆ
ಕಳೆದ ಕ್ಷಣಗಳೂ ,
ಬಣ್ಣ ಬದಲಿಸಿ
ಕ್ಷಣಾ ಕ್ಷಣಾ ,
ಮನಸಿಗೇ ತಲ್ಲಣಾ ,
ಹೆದರಿಕೆ ತುಂಬುತಾ ,
ಸಜ್ಜುಗೊಳ್ಳದೇ
ಒಡೆದು ಹೋಯಿತೇ ,
ಅಯ್ಯೋ , ನನ್ನ ಕನಸಿನರಮನೆ ?


ಅದೇ ಹಾದಿಯೂ ,
ಅಲ್ಲೇ ನಡಿಗೆಯೂ ,
ಆದರೆ ಇಲ್ಲ ನನ್ ಜತೇ ,
ನನ್ ಜತೆ ನಡೆವಾತನೂ ,
ಹುಡುಕಿವೆ ಅವನನೂ
ಅತ್ತ ಇತ್ತ ಕಂಗಳೂ ...
ಕಳೆದುಕೊಂಡೆನೇ
ಆ ಸಂಜೆ ಸುಮಧುರ ?
ಆ ನನ್ನ ದಿನಗಳ ,
ಆ ನನ್ನ ಅವನನು ?

Monday, December 08, 2008

 
ವೀರ್ ಝಾರಾ ಚಿತ್ರದ ... ತೇರೇಲಿಯೇ ಹಂ ಹೈ ಜಿಯೇ ಹರ ಆಂಸೂ ಪಿಯೇ ... ಹಾಡಿನ ಅನುವಾದ ಪ್ರಯತ್ನ ...ನಿನಗಾಗಿಯೇ ನಾ ಬದುಕಿಹೆ
ಕಣ್ಣೀರನೇ ಕುಡಿಯುತ,
ಆದರೂನು ಆರದು
ಬಯಕೆಯ ಬೆಂಕಿಯು,
ನಿನಗಾಗಿಯೇ ನಾ ಬದುಕಿಹೆ
ಹೊಲ್ ಕೊಂಡು ತುಟಿಗಳ
( :) )ಬದುಕಿದು ತಂದು ಇತ್ತಿತು
ಕಳೆದ ದಿನಗಳ ಪುಸ್ತಕ,
ಈಗ ನಮ್ಮನು ಮುತ್ತಿವೆ
ಆ ದಿನಗಳ ನೆನಪುಗಳು,
ಕೇಳದೆಯೇ ದೊರಕಿವೆ
ಎನಿತೊಂದು ಉತ್ತರ,
ಬಯಸಿದೆವು ಏನನು , ಪಡೆದೆವು
ಏನನ ನಾವು , ನೋಡಿರಿ

ಜಗವಿದು ನಮ್ಮೊಂದಿಗೆ
ಸಾಧಿಸಿತು ವೈರವ
..?....?......?...
.............
.............
............ ( ಇಲ್ಲಿನ ಸಾಲುಗಳು ಸರಿಯಾಗಿ ಸಿಕ್ಕಿಲ್ಲ )
ಲೋಕವು ನಿಷ್ಕಾರಣ
ದ್ವೇಷವ ಮಾಡಿತು ...

Thursday, November 06, 2008

 
ವಿಶ್ವೇಶ್ವರಯ್ಯ , ಭೀಮಸೇನ್ ಜೋಶಿ , ಮಹಾರಾಷ್ಟ್ರ ಟೈಮ್ಸ್

ಹದಿನೈದು ದಿನದ ಹಿಂದೆ ಮಹಾರಾಷ್ಟ್ರ ಟೈಮ್ಸ್ ಹೆಸರಿನ ಮರಾಠಿ ಪತ್ರಿಕೆ( ಇದು ಟೈಮ್ಸ್ ಬಳಗದ್ದು)ಯಲ್ಲಿ ವಿಶ್ವೇಶ್ವರಯ್ಯ ಕುರಿತು ಪುಟಗಟ್ಟಲೆ ಬಂದಿತ್ತು . ಪತ್ರಿಕೆ ಕೈಗೆ ಸಿಗಲಿಲ್ಲ . ಸಿಕ್ಕಿದ್ದರೆ ಕಮಕಮ ಅಂತ ಓದಿ ಏನು ಬರೆದಿದ್ದಾರೆ ಅಂತ ತಿಳ್ಕೋಬಹುದಿತ್ತು .

ಮೊನ್ನೆ ಭೀಮಸೇನ್ ಜೋಶಿಯವರಿಗೆ ಭಾರತರತ್ನ ಸಿಕ್ಕಿದ್ದು ಇವತ್ತು ಇಂಗ್ಲೀಷ್ ಟೈಮ್ಸ್ ಗಮನಕ್ಕೆ ಬಂದಿದೆ ! .. ನಿನ್ನೆಯಂತೂ ಯಾವ ಇಂಗ್ಲೀಷ್ / ಹಿಂದಿ ಚಾನೆಲ್ ಗೂ ಇದು ಸುದ್ದಿಯಾಗಲೇ ಇಲ್ಲ ; ಒಂದು ಚಾನೆಲ್ ಸುದ್ದಿ ತೋರಿಸಿತಾದರೂ ಅವರ ಹತ್ರ ಯಾವ್ದೇ ಕ್ಲಿಪ್ಪಿಂಗ್ ಇರಲಿಲ್ಲ ; ಹಾಗಾಗಿ ಅವರು ಇಡೀ ಭಾರತ್ ದೇಶಂ ಹಾಡೋ ಅಥವಾ ಇನ್ನಾವ್ದೋ ತೋರಿಸಿದ್ರು !

ಇವತ್ತಿನ ಮಹಾರಾಷ್ಟ್ರ ಟೈಮ್ಸ್ ಕೈಯಲ್ಲಿದೆ . ಒಂದು ಇಡೀ ಪುಟದಷ್ಟು ಬೀಮಸೇನ್ ಜೋಶಿ ಬಗ್ಗೆ ಇದೆ . ಪು.ಲ. ದೇಶಪಾಂಡೆ ಅವರ ಸಂದರ್ಶನವೂ ಇದೆ . ನಿನ್ನೆಯ ಪತ್ರಿಕೆಯಲ್ಲೂ ಅವರ ಬಗ್ಗೆ ಬಹಳ ಬಂದಿತ್ತಂತೆ . ಮುಖಪುಟದ ತಲೆಬರಹ ಅಂತೆ . ಓದಲಿಕ್ಕೆ ಪ್ರಯತ್ನ ಮಾಡ್ತಾ ಇದ್ದೀನಿ .

ಸಂಪಾದಕೀಯದಲ್ಲಿ ಹೀಗೆ ಬರೆದಿದ್ದಾರೆ .

... ಇವರು ಮಹಾರಾಷ್ಟ್ರದವರಲ್ಲ ಎಂದು ಕೆಲವರು ಆಕ್ಷೇಪ ಮಾಡುವರಾದರೂ , ಪಂಡರಾಪುರದ ವಿಟ್ಠಲ ಎಷ್ಟು ಮಹಾರಾಷ್ಟ್ರೀಯನೋ ಅಷ್ಟೇ ಭೀಮಸೇನ್ ಜೋಷಿ ಕೂಡ ಮಹಾರಾಷ್ಟ್ರದವರು.

..( ಪಂಡರಾಪುರದ ವಿಟ್ಠಲನ ಕುರಿತಾದ ಪ್ರಸ್ತಾಪ ಗಮನಿಸಿದಿರಿ ತಾನೇ?)

This page is powered by Blogger. Isn't yours?