ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"

೧೯೩೨ ರಲ್ಲಿ ಅಚ್ಚಾದ ಒಂದು ಪತ್ತೇದಾರಿ ನೀಳ್ಗತೆಯೊಂದನ್ನು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ ಇಳಿಸಿಕೊಂಡು ಓದಿದೆ. ಅದರ ಹೆಸರು - ಎರಡೆರಡು ಹೆಸರು ಕೊಡುವ ಹಳೆಯ ವಾಡಿಕೆಯಂತೆ - "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !" ಧಾರವಾಡದ ಬಳಿಯ ಆನಂದವನ, ಅಗಡಿಯ ಶ್ರೀ ಶೇಷಾಚಲ ಪ್ರೆಸ್ಸ್ ಮತ್ತು ಗ್ರಂಥಮಾಲೆಯ ಪ್ರಕಟಣೆ ಇದು. ಕನ್ನಡ, ದೇವನಾಗರೀ, ರೋಮನ್ ಲಿಪಿಗಳಲ್ಲಿ ಪ್ರಕಾಶನ ಸಂಶೆಯ ಹೆಸರನ್ನು ಬರೆದಿದ್ದಾರೆ . ಅಡಿಯಲ್ಲಿ - ಮರಾಠಿಯಲ್ಲಿ ' ಹೇ ಪುಸ್ತಕ ಬಿ.ಪ.ಕಾಳೆ , ಯಾನೀ ಅನಂದವನ-ಅಗಡಿ ಯೇಥೀಲ ಆಪಲ್ಯಾ ಶ್ರೀ ಶೇಷಾಚಲ ಛಾಪಖಾನ್ಯಾತ ಛಾಪಿಲೆ' ಅಂತ ಮರಾಠಿ-ದೇವನಾಗರಿಯಲ್ಲಿ ಮುದ್ರಿಸಿದ್ದಾರೆ! ಇದು ಸದ್ಬೋಧಚಂದ್ರಿಕೆಯ 'ಆಷಾಢ ಶಕೆ ೧೮೫೪, july 1932'ರ ನಾಲ್ಕನೇ ಸಂಚಿಕೆ . ಈ ಅಗಡಿಯ ಶೇಷಾಚಲ ಸಂಸ್ಥೆ, ಅಲ್ಲಿಯ ಶೇಷಾಚಲ ಸಾಧುಗಳು ಮಾಡಿದ ಕನ್ನಡ ಸೇವೆ ಅಪಾರವಾಗಿದ್ದಿರಬೇಕು. ಇರಲಿ. ಈ ಪುಸ್ತಕವನ್ನು ತಿರುವಿ ಹಾಕಿದಾಗ ...... ಈ ಕತೆಯು ೨೫ ಪುಟಗಳದ್ದು. ಪ್ರತಿ ಅಧ್ಯಾಯಕ್ಕೆ ಒಂದು ತಲೆಬರಹ - ಮತ್ತು ಒಂದು ಅಡಿಬರಹ . ಆ ತಲೆಬರಹಗಳು , ಅಡಿಬರಹಗಳು , ಒಳಗಿನ ಹೂರಣ ಏನೆಂದು ನೋಡೋಣ ಬನ್ನಿ . ೧) ಇದ್ದ ಮೂವರಲ್ಲಿ ಕದ್ದವರಾರು ? - (ರವಿಕಾಣದುದಂ ಕವಿ ಕಾಂಬಂ) ಒಂದು ಬ್ಯಾಂಕು , ಅಲ್ಲಿ ತಿಜೋರಿ , ಅದನ್ನು ತೆಗೆಯಬಲ್ಲವರು ಇಬ್ಬರು , ಮ್ಯಾನೇಜರೂ ಸರಾಫ(ಕ್ಯಾಶಿಯರ್)ನೂ ಅದರ ಚಕ್ರದಲ್ಲಿಯ ಅಕ್ಷರಗಳ ಸಂಯೋಜನೆಯಿಂದ ತೆರೆಯುತ್ತಿದ್ದರು , ಮುಚ್ಚುತ್ತಿದ್ದರು. ಆ ಸಂಕೇತ ಶಬ್ದವನ್ನು ಒಂದು ಪುಸ್ತಕದಲ್ಲಿ ಬರೆದಿಡುತ್ತಿದ್ದರಂತೆ ! ಅಲ್ಲಿಂದ ಆವತ್ತಿನ ದೊಡ್ಡ ರಕಮು ಕಳುವಾಗಿದೆ! ಪೋಲೀಸ್ ಇನ್ಸಪೆಕ್ಟರ್ ಬಂದರು ," ದೊಡ್ಡ ದೊಡ್ಡವರು ಒಂದೇ ನೋಡಿರಿ! ಇನ್ಸಪೆಕ್ಟರರು ಮ್ಯಾನೇಜರರ ಮಾತು ದಿಟವೆಂದರು. ಸರಾಫರಿಗೆ ಕಾರಾಗ್ರಹವಾಸವಾಯಿತು, ಪೋಲೀಸರ ಕೆಲಸ - ತಪ್ಪು ಮಾಡಿದವರು ಯಾರಾದರೇನು? ಒಟ್ಟಿನ ಮೆಲೆ ಒಬ್ಬನಿಗೆ ಶಿಕ್ಷೆ ಅದರಾಯಿತು. " ಆಗ ಅಲ್ಲಿಗೆ "ಪತ್ತೇದಾರ ಶಿರೋಮಣಿ" ಭೀಮಸಿಂಗನ ಪ್ರವೇಶ. ೨) ಇವೆಲ್ಲ ಸಾಧುಗಳಿಗೇಕೆ? ( ಬೆಳ್ಳಗಿದ್ದುದೆಲ್ಲ ಹಾಲಲ್ಲ) ಪತ್ತೇದಾರನು ಸಾಧು ವೇಶದಿಂದ ಕ್ಯಾಶಿಯರನ ಮನೆಗೆ ಹೋದಾಗ ಅವನ ಕೈಗೆ ಒಂದು ಕಾಗದ ಸಿಗುವದು . ೩) ಚಿತ್ರಮಯ ಪತ್ರ ( Little flower if I could understand what you are , root and all in all , I should know what God and man is ) ಈ ಇಂಗ್ಲೀಶ್ ವಾಕ್ಯದ ಅರ್ಥ ನಿಮಗೇನಾದರೂ ಅಯಿತೇ? - ಬಹುಷ: ಅ ಕಾಲಕ್ಕೆ ಕಲಿಯುವವರು ಇಂಗ್ಲೀಶನ್ನೇ ಕಲಿಯುತ್ತಿದ್ದರು , ಕನ್ನಡ ಪುಸ್ತಕಗಳೇ ಇದ್ದಿಲ್ಲ . ಈ ಇಂಗ್ಲೀಷ್ ವಿದ್ಯಾವಂತರಿಗಾಗಿ ಕನ್ನಡ ಪುಸ್ತಕಗಳು ಶುರು ಆಗಿರಬೇಕು ! ಹಿಂದಿನ ಕಾಲಕ್ಕೆ ಕಲಿಯುವವರು ಇಂಗ್ಲೀಶನ್ನೇ ಕಲಿಯುತ್ತಿದ್ದರು, ಮಧ್ಯೆ ಕನ್ನಡ ಬಂದಿತು , ಈಗ ಮತ್ತೆ ಎಲ್ಲರೂ ಇಂಗ್ಲೀಷನ್ನೇ ಕಲಿಯುತ್ತಿದ್ದಾರೆ !! ಇರಲಿ . ನಮ್ಮ ಪತ್ತೇದಾರನ ಕೈಗೆ ಸಿಕ್ಕ ಕಾಗದದಲ್ಲಿ ಹೀಗಿತ್ತು . 532 c2 , 10 :871 c1,5 - ಉ: 530,c,1,9 ........(ಇತ್ಯಾದಿ ) ... ಇದ್ದೇನೆ .....474,c219 (ಇತ್ಯಾದಿ ) ...+ ಇ.ಬಾ. ಇ.ಬಾ. ಎಂದರೆ ಇಲ್ಲಿಗೆ ಬಾ ಎಂದಿರಬೇಕು ಎಂದು ನಾನು ಊಹಿಸಿದೆ! ನಮ್ಮ ಪತ್ತೇದಾರನೂ ಅವನ ಜಾಣ ಪತ್ನಿಯೂ ಈ ಗೂಢಲಿಪಿಯನ್ನು ಬಿಡಿಸುವರು ! ಅದು ಹೇಗೆ ? ಅವರು ಇದು ಒಂದು ಶಬ್ದಕೋಶ ( ಅದೇರಿ ಡಿಕ್ಶನರಿ!!!) ದಲ್ಲಿನ ಪುಟ/ಕಾಲಂ/ಶಬ್ದದ ಸಂಖ್ಯೆ ಎಂದು ತೀರ್ಮಾನಕ್ಕೆ ಬರುವರು. ೪) ಎಳೆಯಂತೂ ಸಿಕ್ಕಿತು! ಹಚ್ಚಡ ನುಂಗುವದು ಹೇಗೆ? ( Wait, watch and Pray , Plead and then Proceed) "ಅನಂತರ ನಮ್ಮ ಪತ್ತೇದಾರನು ಪ್ರಸಿದ್ಧ ಪುಸ್ತಕ ವ್ಯಪಾರಿಯೊಬ್ಬನ ಬಳಿಗೆ ಹೋದನು. ನಮ್ಮ ಕಥಾನಕವು ನಡೆದ ಕಾಲದಲ್ಲಿ ಬೆಂಗಳೂರಿಗೆಲ್ಲ ಒಂದೇ ಒಂದು ಪುಸ್ತಕದ ಅಂಗಡಿ ಇತ್ತು . ಆರು ವರ್ಷಗಳಿಂದಲೂ ಹನ್ನೆರಡು ಕನ್ನಡ ಕೋಶಗಳು ಖರ್ಚಗದೇ ಉಳಿದಿದ್ದವೆಂದೂ ಈಗ ೫-೭ ತಿಂಗಳ ಹಿಂದೆ ಜಯಲಕ್ಷ್ಮೀ ಬ್ಯಾಂಕಿನ ಮ್ಯಾನೇಜರರಾದ ಗುಂಡೇರಾಯರು ಒಂದು ಪುಸ್ತಕವನ್ನು ತೆಗೆದುಕೊಂಡರೆಂದೂ ತಿಳಿದು ಬಂದಿತು. " ಕ್ಯಾಶಿಯರನ ಬಳಿಯೂ ಇಂಥ ಒಂದು ಶಬ್ದಕೋಶವು ಇರಬೇಕೆಂದು ನಮ್ಮ ಪತ್ತೇದಾರನು ತರ್ಕಿಸಿದ್ದು ನಿಜವಾಯಿತು. ( ನಮ್ಮ ಪತ್ತೇದಾರನಾದರೂ ತನ್ನಲ್ಲಿರುವ ಪತ್ರದ ಗೂಢಲಿಪಿಯನ್ನು ಡಿಕೋಡ್ ಮಾದಲು ಇನ್ನೊಂದು ಪ್ರತಿಯನ್ನು ಖರೀದಿ ಮಾಡಿದ ಎಂದುಕೊಂಡಿರಾ? ಅದು ತಪ್ಪು, ಅವನೂ ಅ ಶಬ್ದಕೋಶವನ್ನು ಕ್ಯಾಶಿಯರನ ಕಡೆಯಿಂದ ಏನೋ ನೆವ ಹೇಳಿ ಎರವಲು ಪಡೆಯುವನು!!) ಕತೆ ನಮಗೆ ಬೇಡ - ಅಲ್ಲಿ ಸಾಕಷ್ಟು ತಿರುವುಗಳು , ಅಚ್ಚರಿಗಳೂ ಇವೆ . ನಾನು ಕತೆಯನ್ನು ತಿಳಿಸುತ್ತಿಲ್ಲ , ಅಲ್ಲಿನ ಸ್ವಾರಸ್ಯಗಳನ್ನು ತಿಳಿಸುತಿದ್ದೇನೆ. ೫) ನಾರಿಯ ತಂತ್ರವು ನರಾಯಣನಿಗೂ ತಿಳಿಯದು! (Trust not your daughters mind by what you see them act) ೬) ಆಟಕ್ಕೆ ತಕ್ಕ ವೇಶ , ವೇಷಕ್ಕೆ ತಕ್ಕ ಭಾಷೆ ( A jests prsperity lies in the ears of those who that here it ) ೭) ರಹಸ್ಯ ಸ್ಫೋಟನ -೧ ( ಹಿಡಿದ ಕಾರ್ಯ ಸಾಧಿಸಲು ಹೆಣವನ್ನಾದರೂ ಹೊರಬೇಕು) ೮) ರಹಸ್ಯ ಸ್ಫೋಟನ -೨ ( Take warnings hence ye , damsels fair , Of mens insiduous arts beware) ಪತ್ತೇದಾರ ಭೀಮಸಿಂಗನನ್ನು ಚಂಚಲೆಯು ಹೀಗೆ ಸಂಬೋಧಿಸುವಳು "ಜ್ಞಾನಿಗಳೇ " !! ೯) ಮಾಡಿದ ಪಾಪಕ್ಕೆ ಮನವೇ ಸಾಕ್ಷಿ ( Early or late , we stoop to fate) ೧೦) ವಿಚಿತ್ರದ ಮೇಲೆ ವಿಚಿತ್ರ ( unity in diversity ) ಆಂ? 1932 ರ ಪುಸ್ತಕದಲ್ಲಿ ನಾವು ಈಗ ದಿನ ನಿತ್ಯ ಕೇಳುವ unity in diversity !!??? ೧೧) ಉಪಸಂಹಾರ "ಇಲ್ಲಿಗೆ ನಮ್ಮ ಕಥೆಯು ಮುಗಿಯಿತು" ನಮ್ಮ ಕಥೆ ? ಮುಗಿಯಿತು? --- ಸಂಪೂರ್ಣಂ ---

Comments

Popular posts from this blog

ASCII ಫಾಂಟ್ ನಲ್ಲಿರುವ ಕನ್ನಡವನ್ನು ಓದಲು ಆಗುತ್ತಿಲ್ಲವೇ ?

ಕಥಾಸರಿತ್ಸಾಗರ