http://www.youtube.com/watch?v=mL6Sc9SU5jE ಇಲ್ಲಿ ’ಛೋಟೀ ಛೋಟೀ ಸೀ ಬಾತ್’ ಎಂಬ ಹಿಂದಿ ಚಿತ್ರದ ಹಾಡೊಂದಿದೆ . ಹಿಂದೆ ಕೇಳಿರದಿದ್ದರೆ ಈಗ ಕೇಳಿ .

ಈ ಹಾಡನ್ನು ಅನುವಾದಿಸಲು ಹವಣಿಸಿದ್ದೇನೆ .
ಸಾಧ್ಯವಾದಷ್ಟು , ಮೂಲದ ಲಯ , ಧಾಟಿಯನ್ನು ಇಟ್ಟುಕೊಂಡಿದ್ದೇನೆ.



ಹೀಗೇತಕೋ
ಆಗೋದು ಬದುಕಲಿ
ನಾನರಿಯೆನೂ !
ಹೋದ ಮೇಲೆ ಯಾರೋ
ಕಾಡೋದು ನೆನಪು ಅವರದೂ ,
ಸಣ್ಣ ಸಣ್ಣವೇ ವಿಷಯಾ !

ಅರಿವಿಲ್ಲದೆ
ಕಳೆದ ಕ್ಷಣಗಳೂ ,
ಬಣ್ಣ ಬದಲಿಸಿ
ಕ್ಷಣಾ ಕ್ಷಣಾ ,
ಮನಸಿಗೇ ತಲ್ಲಣಾ ,
ಹೆದರಿಕೆ ತುಂಬುತಾ ,
ಸಜ್ಜುಗೊಳ್ಳದೇ
ಒಡೆದು ಹೋಯಿತೇ ,
ಅಯ್ಯೋ , ನನ್ನ ಕನಸಿನರಮನೆ ?


ಅದೇ ಹಾದಿಯೂ ,
ಅಲ್ಲೇ ನಡಿಗೆಯೂ ,
ಆದರೆ ಇಲ್ಲ ನನ್ ಜತೇ ,
ನನ್ ಜತೆ ನಡೆವಾತನೂ ,
ಹುಡುಕಿವೆ ಅವನನೂ
ಅತ್ತ ಇತ್ತ ಕಂಗಳೂ ...
ಕಳೆದುಕೊಂಡೆನೇ
ಆ ಸಂಜೆ ಸುಮಧುರ ?
ಆ ನನ್ನ ದಿನಗಳ ,
ಆ ನನ್ನ ಅವನನು ?

Comments

Popular posts from this blog

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು