ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು. ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು ಓದಿದ ಜನರ ಅನಿಸಿಕೆಗಳಿವೆ. ಟಾಂ ಸಾಯರ್ ಸಾಹಸಗಳ ಸಂಗತಿ ಪುಸ್ತಕ ವಿಭಾಗದಲ್ಲಿ ಸಿಕ್ಕಿತು. ಮಹಾತ್ಮಾ ಗಾಂಧಿಯವರ ಕೊನೆಯ ದಿನದ ಸಂಗತಿಗಳು ವಿವರವಾಗಿ ಇಲ್ಲಿ ಬಂದಿವೆ. ಮನುಷ್ಯನಿಗೆ ಸಾವು ಸಮೀಪಿಸಿದಾಗ ಹೇಗೋ ಆತನ ಬಾಯಿಂದ ಸಾವಿನ ಕುರಿತಾದ ಮಾತುಗಳು ಬರುತ್ತವಂತೆ. ಗಾಂಧೀಗಾಗಿ ರಾತ್ರಿ ಬೇಕಾಗುವ ಯಾರೋ ಲವಂಗದ ಪುಡಿಯನ್ನು ಬೆಳಿಗ್ಗೆ ತಯಾರು ಮಾಡುವ ಸಂಬಂಧ - ಗಾಂಧಿಯವರು 'ಈಗ ಏಕೆ ಮಾಡುತ್ತ ಕೂತಿದ್ದಾರೆ? ರಾತ್ರಿ ನಾನೇ ಇರುತ್ತೇನೋ ಇಲ್ಲವೋ ' ಎನ್ನುತ್ತಾರೆ. ಪತ್ರಿಕೆಯಲ್ಲೆಲ್ಲೋ ಗಾಂಧಿಯವರು ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗಲಿದ್ದಾರೆ ಎಂಬ ಸಂಗತಿ ಅಚ್ಚಾಗಿರುತ್ತದೆ, ಅದಕ್ಕೆ ಗಾಂಧಿಯವರು 'ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗುವ ಗಾಂಧಿ ಯಾರೋ? ' ಎಂದು ಪ್ರತಿಕ್ರಿಯಿಸುತ್ತಾರೆ ಎಂಬಂತಹ ಸಂಗತಿಗಳು ಮೈನವಿರೇಳಿಸುತ್ತವೆ. ಬ್ರಿಟಿಷರ ವಿರುದ್ದ ಬಂಡೆದ್ದ ನರಗುಂದ ಬಾಬಾಸಾಹೇಬನು ಗಲ್ಲಿಗೇರಲಿಲ್ಲವಂತೆ. ಈತನ ಹೆಂಡತಿ ಧಾರವಾಡದ ಕಲೆಕ್ಟರನ ಹೆಂಡತಿಯನ್ನು ಹಾವಿನ ಕಡಿತದಿಂದ ಸಾಯುವುದನ್ನು ತಪ್ಪಿಸಿದ್ದಳಂತೆ. ಈತನನ್ನ ಗಲ್ಲಿಗೇರಿಸಬೇಕಾದ ಅಧಿಕಾರಿಯು ಅದೇ ಕ...
ನಾನು ನನ್ನ ಪರ್ಸನಲ್ ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು ಬರಹವನ್ನೋ ನುಡಿಯನ್ನೋ ಅಥವಾ ಮತ್ತಾವುದನ್ನೋ ಬಳಸಿ ಬರೆದವಾದಲ್ಲಿ ಓದಲೇ ಆಗುತ್ತಿರಲಿಲ್ಲ . ಬಹುಶಃ ವಿಂಡೋಸ್ ನಲ್ಲಿ ಕೂಡ ಸಂಬಂಧಪಟ್ಟ ಫಾಂಟ್ ಇಲ್ಲದಿದ್ದರೆ ಅಲ್ಲೂ ಕಾಣಿಸಲಿಕ್ಕಿಲ್ಲ. ಅಂಥ ಸಮಯದಲ್ಲಿ ಇವತ್ತು ಗೂಗಲ್ ನಲ್ಲಿ ಹುಡುಕಿದಾಗ ಸಿಕ್ಕ ಕೊಂಡಿ ಇದು. http://aravindavk.in/ascii2unicode/ ಆ ಪುಟದಲ್ಲಿ ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು ಸಹಾಯ ಮಾಡುವ ತಂತ್ರಾಂಶ ಇದೆ. ಎಡಗಡೆ ಇರುವ ಜಾಗದಲ್ಲಿ ನುಡಿ/ಬರಹ ದಲ್ಲಿ ಬರೆದ ಪಠ್ಯವನ್ನು ಹಾಕಿ ನಂತರ ಕನ್ವರ್ಟ್ ಅಂತ ಇರುವ ಬಟನ್ ಒತ್ತಿ. ಪಕ್ಕದ ಜಾಗದಲ್ಲಿ ಯುನಿಕೋಡ್ ಗೆ ಬದಲಾವಣೆಗೊಂಡು ಕಾಣಿಸುತ್ತದೆ. ಅರವಿಂದರಿಗೆ ತುಂಬಾಆಆಆಆಆಆಆ ಧನ್ಯವಾದಗಳು.
Comments