ಇದಕ್ಕಾ ದೇವರ ಹಂಗೇಕೆ

ಆವ ಕಾಯಕವಾದಡೂ
ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ
ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು
ಬೇನೆ ಬಂದಡೆ ಒರಲು
ಜೀವ ಹೋದಡೆ ಸಾಯಿ
ಇದಕ್ಕಾ ದೇವರ ಹಂಗೇಕೆ
ಭಾಪು ಲದ್ದೆಯ ಸೋಮಾ

(ಲದ್ದೆಯ ಸೋಮ ಎಂಬಾತ ಬೀದರ್ ಜಿಲ್ಲೆಯವನು. ೧೨ನೆಯ ಶತಮಾನದವನು. ಲದ್ದೆ ಎಂದರೆ ಹುಲ್ಲಿನ ಹೊರೆ. ಹುಲ್ಲಿನ ಹೊರೆಯನ್ನು ಕಟ್ಟಿ, ಮಾರಿ, ಬಂದದ್ದರಲ್ಲಿ ಬದುಕಿದ್ದ ವ್ಯಕ್ತಿ ಈತ.)

Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"