ಝೆನ್ ಗುರುವಿನ ಕೆಲವು ನಿಯಮಗಳು

ಅಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗಳು ಇವು:ಬೆಳಗ್ಗೆ ಎದ್ದು ಬಟ್ಟೆ ಹಾಕಿಕೊಂಡು ಸಿದ್ಧವಾಗುವ ಮೊದಲು ಧೂಪವನ್ನು ಹಾಕಿ ಧ್ಯಾನಮಾಡು.ನಿಗದಿಯಾದ ಸಮಯದಲ್ಲಿ ಮಲಗು. ನಿಗದಿಯಾದ ಹೊತ್ತಿನಲ್ಲಿ ಊಟಮಾಡು. ಹೊಟ್ಟೆ ತುಂಬಿ ತೃಪ್ತಿಯಾಗುವಷ್ಟು ತಿನ್ನಬೇಡ.ಯಾರಾದರೂ ಅತಿಥಿ ಬಂದರೆ ನೀನೊಬ್ಬನೇ ಇರುವಾಗ ಯಾವ ಧೋರಣೆ ಇರುತ್ತದೆಯೋ ಅದೇ ಧೋರಣೆಯಲ್ಲಿ ಸ್ವಾಗತಿಸು. ಒಬ್ಬನೇ ಇರುವಾಗ ಅತಿಥಿ ಇದ್ದರೆ ಹೇಗೆ ಇರುತ್ತೀಯೋ ಹಾಗೆಯೇ ಇರು.ಆಡುವ ಮಾತಿನ ಮೇಲೆ ನಿಗಾ ಇರಲಿ. ಏನು ಆಡುತ್ತೀಯೋ ಹಾಗೆಯೇ ನಡೆದುಕೋ.ಅವಕಾಶ ಸಿಕ್ಕಿದಾಗ ಅದನ್ನು ಕಳೆದುಕೊಳ್ಳಬೇಡ. ಆದರೆ ಏನೇ ಮಾಡುವ ಮೊದಲು ಎರಡು ಬಾರಿ ಆಲೋಚಿಸು.ಆಗಿ ಹೋದದ್ದರ ಬಗ್ಗೆ ಚಿಂತಿಸಬೇಡ. ಭವಿಷ್ಯವನ್ನು ನೋಡು.ನಾಯಕನ ಹಾಗೆ ನಿರ್ಭಯವಾಗಿರು, ಮಕ್ಕಳ ಹಾಗೆ ಮನತುಂಬಿ ಪ್ರೀತಿಸು.ಮಲಗುವಾಗ ಇದೇ ಕೊನೆಯ ನಿದ್ರೆ ಎಂಬಂತೆ ಮಲಗು. ಎದ್ದಾಗ ಹಳೆಯ ಚಪ್ಪಲಿ ಎಸೆದುಬಿಡುವ ಹಾಗೆ ತಟ್ಟನೆ ಹಾಸಿಗೆ ಬಿಟ್ಟೇಳು.

Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"