ಕನ್ನಡದ ದೀಪ

ಶಕ್ತಿಮೂಲವು ನಿನಗೆ ಕನ್ನಡದ ಪ್ರೇಮ
ಕನ್ನಡಿಗ ನೀನಾಗು ಕನ್ನಡದ ಭೀಮ
ನೀನಾಗು ಕನ್ನಡದ ತೇಜ ಸ್ವರೂಪ
ಕನ್ನಡಿಗರೆದೆ ಬೆಳಗೆ ಕನ್ನಡವೇ ದೀಪ

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೆ ಜ್ಯೋತಿರ್ನಿಧಾನ
ಕನ್ನಡದ ಮಾನ , ಕನ್ನಡದ ಪ್ರಾಣ

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ

---- ರಚನೆಕಾರರು - ಸಿದ್ಧಲಿಂಗಯ್ಯ
ಈ ಹಾಡನ್ನು ಕನ್ನಡದ ನಟಸಾರ್ವಭೌಮ ರಾಜಕುಮಾರ್ ಅವರ ಜೇನಿನಂತಹ ದನಿಯಲ್ಲಿ ' ಕನ್ನಡವೇ ಸತ್ಯ ' ಕ್ಯಾಸೆಟ್ಟಿನಲ್ಲಿ(ಧ್ವನಿಸುರಳಿಯಲ್ಲಿ ) ಕೇಳಿ ಆನಂದಿಸಿ .

Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"