ಧಮ೯ ವೆಂಬ ವೃಕ್ಷಕ್ಕೆ ಮನಸ್ಸೇ ಬೇರು - ಸಂಸಾರದಲ್ಲಿ ಸಂಸತ್ತನ್ನು ದಾನ ಮಾಡುವದೇ ದೊಡ್ಡ ತಪಸ್ಸು . ಸಂಪತ್ತಿನ ದಾನವು ಪ್ರಾಣದಾನ. ಪ್ರಾಣವು ಸಂಪತ್ತಿನಲ್ಲಿ ಬಂಧಿತವಾಗಿದೆ . ಕರುಣೆಯಿಂದ ವ್ಯಾಕುಲನಾದ ಬುದ್ಧನು ಬೇರೆಯವರಿಗಾಗಿ ಆತ್ಮವನ್ನೇ ಹುಲ್ಲುಕಡ್ಡಿಯಂತೆ ಡಾನ್ ಮಾಡಿದನು. ಇನ್ನು ತುಚ್ಚವಾದ ಹಣದಿಂದ ಏನು? ಪ್ರಾಜ್ಞನು ಎಲ್ಲ ಆಸೆಗಳಿಂದ ದೂರವಾಗಿ ಶರೀರ ಇರುವ ತನಕ ಸಮ್ಯಕ್ ಜ್ಞಾನವನ್ನು ಪಡೆಯಲು ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡಬೇಕು. ಸಂಸಾರದಲ್ಲಿ ಪರೋಪಕಾರವೊಂದೇ ಸಾರವುಳ್ಳದ್ದು.ಆದ್ದರಿಂದ ಈ ಶರೀರದಿಂದ ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡೋಣ. ಅವನು ನನಗೆ ಕೆಟ್ಟದ್ದನ್ನ ಮಾಡಿಲ್ಲ , ಉಪಕಾರವನ್ನು ಮಾಡಿದ್ದಾನೆ. ಇಲ್ಲದಿದ್ದರೆ ನಾನು ಯಾರನ್ನು ಕ್ಷಮಿಸಬಹುದಿತ್ತು ? ಪ್ರಾಜ್ಞರಿಗೆ ತಮ್ಮ ದೇಹದ ಮೇಲೇ ಮಮಕಾರವು ಇಲ್ಲದ ಮೇಲೆ ಹೆಂಡತಿ ಮಕ್ಕಳು ತೃಣ ಸಮಾನ. ರಾಜನೂ ಸಹ ಅವಳ ಚಿಂತೆಯನ್ನು ಬಿಟ್ಟು, ಮಂತ್ರಿಯ ಮಾತನ್ನು ನೆನೆಯುತ್ತಾ ತನಗೆ ಲಭ್ಯವಾದ ರಾಜ್ಯ, ಪತ್ನಿ, ಸುತರೊಂದಿಗೆ , ( ಅವರ / ಅದರ ಮಹತ ವನ್ನು ತಿಳಿದು) ಆನಂದದಿಂದ ಇದ್ದನು. ನೀತಿ ಎಂಬ ಕಲ್ಪವೃಕ್ಷದ ಬಳ್ಳಿ ಫಲ ನೀಡಿಯೇ ತೀರುತ್ತದೆ ವಸ್ತ್ರಗಳನ್ನೂ ಆಭರಣಗಳನ್ನೂ ನೀಡಿ ಗೌರವಿಸಿದನು
Comments
ಒಳ್ಳೆಯ ಕೆಲಸ ಮುಂದುವರೆಯಲಿ. ಇದಕ್ಕೆ ಸ್ವಲ್ಪ ಪಬ್ಲಿಸಿಟಿ ಕೊಡ್ಲಾ? ಇದರ ಸವಿ ಇತರ ಕನ್ನಡಿಗರ ಬಾಯಿಗೂ ಸಲ್ಲಲಿ