ಕೆಲ ಹಾಯ್ಕುಗಳು

olnswamy ಅವರು ಅನುವಾದಿಸಿರುವ ಕೆಲ ಹಾಯ್ಕುಗಳು:
ಹಾಯ್ಕು ಜಪಾನಿನ ಸಾಹಿತ್ಯದ ಒಂದು ವಿಶಿಷ್ಟ ಕವಿತಾ ರೂಪ.

ಈ ಜಗತ್ತಿನಲ್ಲಿ ನಾವು
ಹೂಗಳನ್ನು ದಿಟ್ಟಿಸುತ್ತಾ
ನಡೆಯುತ್ತೇವೆ ನರಕದ ಚಾವಣಿಯ ಮೇಲೆ

ಹಗಲೂ ಇರುಳೂ ಬುದ್ಧನನ್ನು ನೆನೆಯುತ್ತಾ
ಸೊಳ್ಳೆಗಳನ್ನು ಕೊಲ್ಲುತ್ತಾ
ಬದುಕಿದ್ದೇನೆ.

ಮಧ್ಯಾಹ್ನ ಮಲಗಿಕೊಂಡು
ರಸ್ತೆ ರಿಪೇರಿಯವರ ಗದ್ದಲ ಕೇಳಿಸಿಕೊಳ್ಳುತ್ತಾ
ನಾಚಿಕೊಳ್ಳುತ್ತಾ ಇದ್ದೇನೆ.

ಹೊಸ ವರುಷದ ದಿನ
ಎಲ್ಲವೂ ಅರಳಿವೆ
ನಾನು ಮಾತ್ರ ಸಾಮಾನ್ಯವಾಗಿಯೇ ಇರುವೆ.


ಈ ನಮ್ಮ ಲೋಕದಲ್ಲಿ ತಿನ್ನುವುದು ಅಮೇಧ್ಯವಾಗಲೆಂದು
ಮಲಗುವುದು ಎಚ್ಚರವಾಗಲೆಂದು
ಎಲ್ಲದರ ಕೊನೆಗೆ ಸುಮ್ಮನೆ ಬರುವುದು ಸಾವು

ನಿಶ್ಚಲವೆಂದರೆ ಇದೇ
ಬಿರು ಬಿಸಿಲಲ್ಲಿ ಬಂಡೆಗೆ ಅಪ್ಪಳಿಸುವ ಮರಕುಟಿಗನ ಸದ್ದು

Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"