ನಿನ್ನೆ ಸಮಯ ಕಳೆದ ಪರಿ - ಪುಸ್ತಕ ಮತ್ತು ಸಿನೇಮಾ


ನಿನ್ನೆ ದಿನ ರಜೆ ಇತ್ತು ; ಮೃತ್ಯುದಂಡ ಎಂಬ ಹಿಂದಿ ಸಿನೆಮಾವನ್ನು ಹದಿನೈದಾಣೆಯೂ , ಕನ್ನಡ ಸೈನೈಡ್ ಅನ್ನು ಅರ್ಧದಷ್ಟೂ , ಸರ್ವಕಾಲಸುಂದರಿ ಶರ್ಮಿಳಾ ಟಾಗೋರ್ ಳ ಸಿನೆಮಾ -ಆನ್ ಈವನಿಂಗ್ ಇನ್ ಪ್ಯಾರಿಸ್ - ಅರ್ಧದಷ್ಟೂ ನೋಡಿದೆ.

ಡಾ.ಪ್ರಭುಶಂಕರ ಬರೆದ ಬಸವಣ್ಣನ ಕುರಿತಾದ ’ಬೆರಗು’ ಎಂಬ ಪುಸ್ತಕವನ್ನೂ ಅರ್ಧ ಓದಿದೆ . ಒಳ್ಳೇ ಪುಸ್ತಕ . ಬಸವಣ್ಣನ ಕುರಿತು ಅವನ ಸುತ್ತಲ ಜನರು ಏನು ಯೋಚಿಸಿರಬಹುದು ಎಂಬ ಕಲ್ಪನೆಗಳ ಪುಸ್ತಕ . ಬಸವಣ್ಣನನ್ನು ತಿಳಿಯಲು ಇದು ಸಹಾಯ ಮಾಡುವದು . ( ೧೯೮೨ ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕ , ೨೦೦೧ ರಲ್ಲಿ ಮರು ಮುದ್ರಣಗೊಂಡು ನನ್ನ ಕೈಗೆ ೨೦೦೮ ರಲ್ಲಿ ಬಂದಿದೆ! . )



ಇತ್ತೀಚೆಗೆ ಕುಂ.ವೀರಭದ್ರಪ್ಪ ಬರೆದ ’ಅರಮನೆ’ ಎಂಬ ಬೃಹತ್ ಕಾದಂಬರಿಯನ್ನು ಕೊಂಡೆ . ಆಮೇಲೆ ತಿಳಿಯಿತು ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ ಅಂತ . ಮೊದಲೇ ಏನನ್ನಾದರೂ ಓದುವದು ( ಸಮಯ ಸಿಗದಿರುವದೂ , ಟೀವೀ , ಪೇಪರ್ , ಇಂಟರ್ನೆಟ್ಟ್ ಇತ್ಯಾದಿಗಳು ಸಮಯ ಬೇಡುತಿರುವುದೂ ಕಾರಣ ) ಕಷ್ಟವಾಗಿರುವಾಗ ೬೦೦ ಪುಟಗಳ ಪುಸ್ತಕ ಆಡುಭಾಷೆಯಲ್ಲಿರುವ ಈ ಪುಸ್ತಕ ಓದುವದೂ ಒಂದು ಸಾಹಸವೇ . ದಿನಕ್ಕೆ ೧೦-೨೦ ಪುಟ ಮಾತ್ರ ಸಾಧ್ಯವಾಗುತ್ತಿದೆ. ಮುಗಿಸಲು ಒಂದೆರಡು ತಿಂಗಳೇ ಬೇಕೆಂದು ಕಾಣುತ್ತದೆ. ಇಲ್ಲಿ ಎ, ಏ , ಒ , ಓ , ಔ , ಐ ಅಕ್ಷರಗಳೇ ಇಲ್ಲಿ ಕಾಣುವದಿಲ್ಲ ! .

ಬಹುಶ: ಅವರ ’ಭಳಾರೆ ವಿಚಿತ್ರಂ’ ಪುಸ್ತಕ ಪುಟ್ಟದಾಗಿದ್ದರೂ ತನ್ನ ಓದಿನಲ್ಲಿ ಇದಕ್ಕಿಂತ ಬಹಳ ಪಟ್ಟು ನೀಡುತ್ತದೆ !

Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"