ಮತ್ತೆ ಇತ್ತೀಚಿಗೆ

ಆ ’ಬೆರಗು’ ಪುಸ್ತಕ ಮುಗಿಸಿದೆ . ನಿಜಕ್ಕೂ ಚೆನ್ನಾಗಿದೆ . ಒಮ್ಮೆ ಓದಲೆಬೇಕು .

’ಸೈನೈಡ್’ ಸಿನೆಮಾ ಉಳಿದ ಭಾಗ ನೋಡಿದೆ .
ಸಂಯಮ ಭರಿತ ಸಿನೆಮಾ . ನಿಜವಾದ ಘಟನೆ ಆಧಾರಿತ ಎನ್ನೋದು ಬಿಟ್ರೆ ವಿಶೇಷ ಏನಿಲ್ಲ ; ಹೆಚ್ಚಿನ ಥ್ರಿಲ್ ಆಗಲಿ ಒಳನೋಟಗಳಾಗಲೀ ಇಲ್ಲ.

ಆಮೇಲೆ ಈ ರವಿವಾರ


ಗಾಳಿಗೋಪುರ ಮತ್ತು ನಾಂದಿ, ಕರುಣೆಯೇ ಕುಟುಂಬದ ಕಣ್ಣು ಎಂಬ ಮೂರು ಚಿತ್ರಗಳ ಒಂದು ಡೀವೀಡೀ ಬರೀ ೬೦ ರೂ. ಗೆ ತಂದಿದ್ದು ಗಾಳಿಗೋಪುರ ನೋಡಿದೆ . ಸಾಕಷ್ಟು ಉದ್ದದ ಸಿನೇಮಾ .


ಇತ್ತೀಚೆಗೆ ಅನೇಕ ’ಸುಧಾ’ಗಳನ್ನು ಇನ್ನೊಮ್ಮೆ ನೋಡಿ , ಬೇಕಾದ ಹಾಳೆ ಹರಿದು ಇಟ್ಟುಕೊಂಡು ( ಬೇಡದ ಹಾಳೆಗಳನ್ನೂ ಹರಿಯಬೇಕಾಗುತ್ತದೆ ; ಆ ವಿಷಯ ಇನ್ನೊಮ್ಮೆ ಬರೆವೆ) ವಿಲೇವಾರಿ ಮಾಡಿದೆ.
ಅದರಲ್ಲಿ ರಾವಣನ ಪುನರ್ಜನ್ಮದ ಕಣಸು ಎಂಬ ಧಾರಾವಾಹಿ ಬಂದಿತ್ತು .. ಎಷ್ಟೋ ರಾಮಾಯಣ, ಮಹಾಭಾರತ ಓದಿದ್ದೇನೆ ... ತಿಣುಕಿದನು ಫಣಿರಾಯ ರಾಮಾಯಣಗಳ ಭಾರದಲಿ ಅಂತ ಇದೆಯಲ್ಲ ... ಅವರ ದೃಷ್ಟಿಯಲ್ಲಿ , ಇವರ ಕಣ್ಣಿನಲ್ಲಿ ಇತ್ಯಾದಿ .. ಅದಕ್ಕೆ ಓದಿರಲಿಲ್ಲ .
ಅದರಲ್ಲಿ ಇರುವದಾದರು ಏನು .. ನೋಡೋಣ, ರಾವಣನ ಪುನರ್ಜನ್ಮವೇ ? ಏನದು ? ಅವನ ಕಣಸು ಏನು ? ಅಂತ .

ರಾವಣ ಸೋತು ಸಾಯುವ ಮೊದಲು ಆಸೆಪಡುತ್ತಾನೆ, ಸೀತೆ ಅವನನ್ನ ಅಪ್ಪಿಕೋಬೇಕು , ಅವನು ರಾಮನನ್ನು ಸೋಲಿಸಿ ಸೀತೆಯನ್ನು ಅವನಿಗೆ ಒಪ್ಪಿಸಬೆಕು . ಅಂತ .. ಈ ಬಯಕೆ ಈಡೇರೋದು ... ಮುಂದಿನ ಜನ್ಮದಲ್ಲಿ ... ರಾವಣ, ಕುಂಭಕರ್ಣರು ಲವಕುಶರಾಗಿ ಹುಟ್ಟಿ ,, ಸೀತೆ ಅವ್ರನ್ನ ಅಪ್ಪಿಕೊಂಡು - ಮಕ್ಕಳಲ್ವೇ ? , ಅವರು ರಾಮನನ್ನು ಸೋಲಿಸಿ ಸೀತೆಯನ್ನು ರಾಮನನ್ನು ಒಂದುಗೂಡಿಸ್ತಾರೆ ...
ಕೇಳಿದ್ರಾ ಎಲ್ಲಾದರೂ ಈ ತರ ರಾವಣ, ಕುಂಭಕರ್ಣರು ಲವಕುಶರಾಗಿ ಹುಟ್ಟಿರೋದು ?

Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"