ನಿನ್ನ ಕಂಗಳ ಹೊರತಾಗಿ

ನಿನ್ನ ಕಂಗಳ ಹೊರತಾಗಿ
ಜಗತ್ತಿನಲ್ಲಿ ಇರುವದಾದರೂ ಏನು ?
ತೆರೆದಾಗ ಇವು ಬೆಳಗು , ಮುಚ್ಚಿದಾಗ ಸಂಜೆ ,
ನನ್ನ ಬದುಕೂ ಸಾವೂ ಈ ರೆಪ್ಪೆಗಳ ಕೆಳಗೆ


ಈ ಕಣ್ಣರೆಪ್ಪೆಗಳ ಸಂದಿನಲ್ಲಿ ವಸಂತ ನಲಿಯುತಿದೆ
ನನ್ನ ಕನಸುಗಳು ಇಲ್ಲಿ ಅಲೆಯುತಿವೆ

ಈ ಕಂಗಳಲ್ಲಿ ನನ್ನ ಬರಲಿರುವ ದಿನಗಳ ಚಿತ್ರ ಇದೆ
ಬಯಕೆಯ ಕಾಡಿಗೆಯಲಿ ಬರೆದ ನನ್ನ ಭಾಗ್ಯವಿದೆ .

( ತೇರೀ ಆಂಖೋಂ ಕೆ ಸಿವಾ ದುನಿಯಾ ಮೆ ರಖಾ ಕ್ಯಾ ಹೈ? ಎಂಬ ಹಿಂದಿ ಸಿನಿಮಾ ಹಾಡಿನ ಅನುವಾದ ಇದು)

Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"