ಕಾಳಿದಾಸನು ಸರಸ್ವತಿಗೆ ಬೈದನೇ ? ಅದೂ ಏನೆಂದು?

ನಾನು ಮಾಸ್ತಿಯವರ ಒಂದು ಪುಸ್ತಕ ಓದುವಾಗ ಈ ವಿಷಯ ಕಣ್ಣಿಗೆ ಬಿತ್ತು.

ಒಮ್ಮೆ ಕಾಳಿದಾಸ ದಂಡಿ ಇವರಲ್ಲಿ ಯಾರ ಕವಿತೆ ಶ್ರೇಷ್ಠ ಎಂದು ಪ್ರಶ್ನೆ ಬಂದಿತು. ಇದನ್ನು ನಿರ್ಣಯಿಸುವದಕ್ಕೆ ಯಾರಿಗೂ ಧೈರ್ಯವಿಲ್ಲ. ಸರಸ್ವತಿಯನ್ನು ಕೇಳೋಣ ಎಂದು ಒಪ್ಪಿದರು . ದೇವಿ ಪ್ರತ್ಯಕ್ಷವಾದಾಗ ದಂಡಿ ಒಂದು ಶ್ಲೋಕವನ್ನು ಹೇಳಿದನು. ಕಾಳಿದಾಸ ಒಂದು ಶ್ಲೋಕವನ್ನು ಹೇಳಿದನು. ಶ್ಲೋಕ ಯಾವುವು ಈಗ ನಮಗೆ ಗೊತ್ತಿಲ್ಲ. ಶ್ಲೋಕಗಲನ್ನು ಹೇಳಿದ ಮೇಲೆ ಕವಿಗಳು ತೀರ್ಪನ್ನು ಬೇಡಿ ಕೈ ಮುಗಿದು ನಿಂತರು. ದೇವಿ , "ಕವಿರ್ದಂಡೀ, ಕವಿರ್ದಂಡೀ , ನಸಂಶಯಃ " ಎಂದಳು . ದಂಡಿಗೆ ಸಂತೋಷ ಆಯಿತು. ಅವನು ಹೆಮ್ಮೆಯಿಂದ ಕಾಳಿದಾಸನ ಕಡೆ ನೋಡಿದನು. ಕಾಳಿದಾಸನಿಗೆ ಅಸಾಧ್ಯ ಕೋಪ ಬಂದಿತು. ಅವನು "ಹೇ ರಂಡೇ ಅಹಂ ಕೋವಾ " ( ಹಾಗಾದರೆ ನಾನು ಯಾರು?) ಎಂದು ಕೇಳಿದನು . ದೇವಿ "ತ್ವಮೇವಾಹಂ,ತ್ವಮೇವಾಹಂ, ತ್ವಮೇವಾಹಂ, ನಸಂಶಯಃ " ಎಂದಳು ; ಮರೆಯಾದಳು. ಕಾಳಿದಾಸ ಎಲ್ಲ ಕವಿಗಳಿಗಿಂತ ಹೆಚ್ಚು ಎಂದು ಕವಿ ಸಮುದಾಯ ಒಪ್ಪಿತು.

Comments

Popular posts from this blog

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು