ಕನ್ನಡ ಶಬ್ದ ಸಂಪತ್ತು ಕುರಿತು ಮಾಸ್ತಿ.


ಕನ್ನಡಕ್ಕೆ ಆಗಿಬಂದ ಸಂಸ್ಕೃತ ಪದ ಕನ್ನಡದ ಸ್ವತ್ತೇ . ಅದನ್ನು ಬಳಸಲು ಹಿಂದೆಗೆಯುವುದು ಭಾಷೆಯನ್ನರಿಯದವನ ಲಕ್ಷಣ.

ಕನ್ನಡದಲ್ಲಿ ಶಬ್ದಗಳಿಲ್ಲದಿರುವದರಿಂದ ಈ ವಿಷಯ ಆ ವಿಷಯವನ್ನು ಹೇಳಲಾಗುವದಿಲ್ಲ ಎನ್ನುವುದು ನಮ್ಮಲ್ಲಿ ಕೆಲವರ ಅಭಿಪ್ರಾಯ. ಇದು ಕನ್ನಡವನ್ನು ಕಲಿಯದೆ ಅದರ ವಿಚಾರವನ್ನು ಮಾತನಾಡುವುದರ ಫಲ. ರತ್ನಾಕರನು ಕನ್ನಡದಲ್ಲಿ ಜೀವನ , ಮೋಕ್ಷ, ರಾಷ್ಟ್ರ , ಸಂಸಾರವನ್ನು ಕುರಿತ ಎಷ್ಟು ಗಹನವಾದ ವಿಷಯಗಳನ್ನು ಎಷ್ಟು ಸುಲಭವಾದ ಪದಗಳಿಂದ ನಿರೂಪಿಸಿದ್ದಾನೆನ್ನುವುದನ್ನು ನೋಡಿದವರು ಕನ್ನಡವನ್ನು ಕುರಿತು ಈ ಹೀನಾಯವನ್ನು ನುಡಿಯಲಾರರು.

ಮಹಾಕವಿ ಕಾವ್ಯವನ್ನು ರಚಿಸಿದ್ದು ಸಾರ್ಥಕವಾಗಬೇಕಿದ್ದರೆ ಅವನ ಶಬ್ದ ಸಂಪತ್ತು , ಅದರ ಹಿಂದಿನ ಭಾವ ಸಂಪತ್ತು ಎಲ್ಲ ಕಿರಿಯರಿಗೆ ಸಿದ್ಧಿಸಬೇಕು. ಅದಾಗದಿದ್ದರೆ ತಾಯಿ ಅಡುಗೆ ಮಾದಿತ್ತು ಮಕ್ಕಳು ಉಣ್ಣದಂತೆ ; ಅಡುಗೆ ಮಾಡಿದ ಶ್ರಮ ವ್ಯರ್ಥ. ಮಾಡಿದ ಜೀವಕ್ಕೆ ತೃಪ್ತಿಯಿಲ್ಲ; ಮಕ್ಕಳ ಹಸಿವಂತೂ ಹಾಗೆಯೇ ಉಳಿಯುವುದು.

Comments

Popular posts from this blog

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು