ಕಥೆಗಳ ಕುರಿತು ಕಥೆಯಾಗಿಸಿಕೊಳ್ಳದೆ ನಾವು ಏನನ್ನೂ ಗ್ರಹಿಸಲಾರೆವು, ಅರ್ಥ ಮಾಡಿಕೊಳ್ಳಲಾರೆವು. ಬದುಕು ಎಷ್ಟು ವಿಶಾಲ, ಅಸಂಗತ, ಅತಾರ್ಕಿಕ ಎಂದರೆ ಅದಕ್ಕೆ ಅರ್ಥ, ತರ್ಕ, ಸುಸಂಗತತೆ ನೀಡುವ ಸಲುವಾಗಿಯೇ ಮನುಷ್ಯ ಕಥೆಯ ಕಲೆಯನ್ನು ಕಟ್ಟಿಕೊಂಡಿದ್ದಾನೆ --olnswamy
Posts
Showing posts from November, 2006
- Get link
- X
- Other Apps
ಕೆಲ ಹಾಯ್ಕುಗಳು olnswamy ಅವರು ಅನುವಾದಿಸಿರುವ ಕೆಲ ಹಾಯ್ಕುಗಳು: ಹಾಯ್ಕು ಜಪಾನಿನ ಸಾಹಿತ್ಯದ ಒಂದು ವಿಶಿಷ್ಟ ಕವಿತಾ ರೂಪ. ಈ ಜಗತ್ತಿನಲ್ಲಿ ನಾವು ಹೂಗಳನ್ನು ದಿಟ್ಟಿಸುತ್ತಾ ನಡೆಯುತ್ತೇವೆ ನರಕದ ಚಾವಣಿಯ ಮೇಲೆ ಹಗಲೂ ಇರುಳೂ ಬುದ್ಧನನ್ನು ನೆನೆಯುತ್ತಾ ಸೊಳ್ಳೆಗಳನ್ನು ಕೊಲ್ಲುತ್ತಾ ಬದುಕಿದ್ದೇನೆ. ಮಧ್ಯಾಹ್ನ ಮಲಗಿಕೊಂಡು ರಸ್ತೆ ರಿಪೇರಿಯವರ ಗದ್ದಲ ಕೇಳಿಸಿಕೊಳ್ಳುತ್ತಾ ನಾಚಿಕೊಳ್ಳುತ್ತಾ ಇದ್ದೇನೆ. ಹೊಸ ವರುಷದ ದಿನ ಎಲ್ಲವೂ ಅರಳಿವೆ ನಾನು ಮಾತ್ರ ಸಾಮಾನ್ಯವಾಗಿಯೇ ಇರುವೆ. ಈ ನಮ್ಮ ಲೋಕದಲ್ಲಿ ತಿನ್ನುವುದು ಅಮೇಧ್ಯವಾಗಲೆಂದು ಮಲಗುವುದು ಎಚ್ಚರವಾಗಲೆಂದು ಎಲ್ಲದರ ಕೊನೆಗೆ ಸುಮ್ಮನೆ ಬರುವುದು ಸಾವು ನಿಶ್ಚಲವೆಂದರೆ ಇದೇ ಬಿರು ಬಿಸಿಲಲ್ಲಿ ಬಂಡೆಗೆ ಅಪ್ಪಳಿಸುವ ಮರಕುಟಿಗನ ಸದ್ದು
- Get link
- X
- Other Apps
ಕನ್ನಡದ ದೀಪ ಶಕ್ತಿಮೂಲವು ನಿನಗೆ ಕನ್ನಡದ ಪ್ರೇಮ ಕನ್ನಡಿಗ ನೀನಾಗು ಕನ್ನಡದ ಭೀಮ ನೀನಾಗು ಕನ್ನಡದ ತೇಜ ಸ್ವರೂಪ ಕನ್ನಡಿಗರೆದೆ ಬೆಳಗೆ ಕನ್ನಡವೇ ದೀಪ ಹೊತ್ತಿತೋ ಹೊತ್ತಿತು ಕನ್ನಡದ ದೀಪ ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ ಹರ್ಷ ಉಕ್ಕಿಸುವಂತೆ ಶೋಭಾಯಮಾನ ಕನ್ನಡದ ಮನೆಯಾಗೆ ಜ್ಯೋತಿರ್ನಿಧಾನ ಕನ್ನಡದ ಮಾನ , ಕನ್ನಡದ ಪ್ರಾಣ ಉರಿವವರು ಬೇಕಿನ್ನು ಇದರೆಣ್ಣೆಯಾಗಿ ಸುಡುವವರು ಬೇಕಿನ್ನು ನಿಡುಬತ್ತಿಯಾಗಿ ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ ಚಿರಕಾಲ ಬೆಳಗಲಿ ಕನ್ನಡದ ದೀಪ ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ ಭಾರತಕೆ ಬಲವಾಗಿ ಭವ್ಯ ಪ್ರದೀಪ ಕಳೆಯುತ್ತ ತಾಪ , ಬೆಳೆಸುತ್ತ ಸೈಪ ---- ರಚನೆಕಾರರು - ಸಿದ್ಧಲಿಂಗಯ್ಯ ಈ ಹಾಡನ್ನು ಕನ್ನಡದ ನಟಸಾರ್ವಭೌಮ ರಾಜಕುಮಾರ್ ಅವರ ಜೇನಿನಂತಹ ದನಿಯಲ್ಲಿ ' ಕನ್ನಡವೇ ಸತ್ಯ ' ಕ್ಯಾಸೆಟ್ಟಿನಲ್ಲಿ(ಧ್ವನಿಸುರಳಿಯಲ್ಲಿ ) ಕೇಳಿ ಆನಂದಿಸಿ .
- Get link
- X
- Other Apps
ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಅವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ತೀರಿಹೋದ. ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೌನ್‌ನ ಪಾಲಿಗೆ ಬಂತು.ಶೌನ್ ಧ್ಯಾನಕ್ಕೆ ಹೋದಾಗಲೆಲ್ಲ ತಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಅವನ ಅಲೆದಾಟದಲ್ಲಿ ಯಾವ ಮಠದಲ್ಲೂ ತಂಗಲು ಆಗುತ್ತಿರಲಿಲ್ಲ. ಹೆಂಗಸರನ್ನು ಮಠದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೇ ಒಂದು ಪುಟ್ಟ ಮನೆಯನ್ನು ಕಟ್ಟಿ ತಾಯಿಯೊಡನೆ ಇರತೊಡಗಿದ ಶೌನ್. ಬುದ್ಧನ ಸೂತ್ರಗಳನ್ನು ಬರೆದು, ಭಕ್ತರಿಗೆ ಕೊಟ್ಟು, ಅವರಿಂದ ಪಡೆದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ.ಸಂನ್ಯಾಸಿ ಮೀನು ತಿನ್ನುವಂತಿರಲಿಲ್ಲ. ಆದರೆ ಅಮ್ಮನಿಗೆ ಮೀನು ಎಂದರೆ ಆಸೆ. ಶೌನ್ ತಾಯಿಗೆಂದು ಮೀನು ತರುತ್ತಿದ್ದ. ಅದನ್ನು ಕಂಡು ಜನ ಹಾಸ್ಯಮಾಡುತ್ತಿದ್ದರು. ಶೌನ್ ಅದನ್ನು ಲೆಕ್ಕಕ್ಕೇ ಇಡುತ್ತಿರಲಿಲ್ಲ.ತನ್ನ ಮಗನನ್ನು ಜನ ಲೇವಡಿ ಮಾಡುವುದು ಕಂಡು ತಾಯಿಗೆ ಬೇಸರವಾಯಿತು. “ನಾನೂ ಸಂನ್ಯಾಸಿನಿ ಆಗುತ್ತೇನೆ. ಸಸ್ಯಾಹಾರವನ್ನೇ ತೆಗೆದುಕೊಳ್ಳುತ್ತೇನೆ” ಎಂದಳು. ಸರಿ. ತಾಯಿ ಮಗ ಇಬ್ಬರೂ ಒಟ್ಟಿಗೇ ಅಧ್ಯಯನ ಮಾಡತೊಡಗಿದರು.ಶೌನ್‌ಗೆ ಸಂಗೀತವೆಂದರೆ ಪ್ರಾಣ. ಬಹಳ ಚೆನ್ನಾಗಿ ವಾದ್ಯಗಳನ್ನು ನುಡಿಸುತ್ತಿದ್ದ. ಕೆಲವೊಮ್ಮೆ ಅವನ ತಾಯಿ ಕೂಡ ದನಿಗೂಡಿಸುತ್ತಿದ್ದಳು. ಹುಣ್ಣಿಮೆಯ ರಾತ್ರಿಗಳಂದು ಇಬ್ಬರೂ ಹಾಡುತ್ತಾ, ವಾದ್ಯ ನುಡಿಸುತ್ತಾ ಇದ್ದರು.ಅಂಥ ಒಂದು ರಾತ್ರಿ ಅವ...
- Get link
- X
- Other Apps
ಝೆನ್ ಗುರುವಿನ ಕೆಲವು ನಿಯಮಗಳು ಅಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗಳು ಇವು:ಬೆಳಗ್ಗೆ ಎದ್ದು ಬಟ್ಟೆ ಹಾಕಿಕೊಂಡು ಸಿದ್ಧವಾಗುವ ಮೊದಲು ಧೂಪವನ್ನು ಹಾಕಿ ಧ್ಯಾನಮಾಡು.ನಿಗದಿಯಾದ ಸಮಯದಲ್ಲಿ ಮಲಗು. ನಿಗದಿಯಾದ ಹೊತ್ತಿನಲ್ಲಿ ಊಟಮಾಡು. ಹೊಟ್ಟೆ ತುಂಬಿ ತೃಪ್ತಿಯಾಗುವಷ್ಟು ತಿನ್ನಬೇಡ.ಯಾರಾದರೂ ಅತಿಥಿ ಬಂದರೆ ನೀನೊಬ್ಬನೇ ಇರುವಾಗ ಯಾವ ಧೋರಣೆ ಇರುತ್ತದೆಯೋ ಅದೇ ಧೋರಣೆಯಲ್ಲಿ ಸ್ವಾಗತಿಸು. ಒಬ್ಬನೇ ಇರುವಾಗ ಅತಿಥಿ ಇದ್ದರೆ ಹೇಗೆ ಇರುತ್ತೀಯೋ ಹಾಗೆಯೇ ಇರು.ಆಡುವ ಮಾತಿನ ಮೇಲೆ ನಿಗಾ ಇರಲಿ. ಏನು ಆಡುತ್ತೀಯೋ ಹಾಗೆಯೇ ನಡೆದುಕೋ.ಅವಕಾಶ ಸಿಕ್ಕಿದಾಗ ಅದನ್ನು ಕಳೆದುಕೊಳ್ಳಬೇಡ. ಆದರೆ ಏನೇ ಮಾಡುವ ಮೊದಲು ಎರಡು ಬಾರಿ ಆಲೋಚಿಸು.ಆಗಿ ಹೋದದ್ದರ ಬಗ್ಗೆ ಚಿಂತಿಸಬೇಡ. ಭವಿಷ್ಯವನ್ನು ನೋಡು.ನಾಯಕನ ಹಾಗೆ ನಿರ್ಭಯವಾಗಿರು, ಮಕ್ಕಳ ಹಾಗೆ ಮನತುಂಬಿ ಪ್ರೀತಿಸು.ಮಲಗುವಾಗ ಇದೇ ಕೊನೆಯ ನಿದ್ರೆ ಎಂಬಂತೆ ಮಲಗು. ಎದ್ದಾಗ ಹಳೆಯ ಚಪ್ಪಲಿ ಎಸೆದುಬಿಡುವ ಹಾಗೆ ತಟ್ಟನೆ ಹಾಸಿಗೆ ಬಿಟ್ಟೇಳು.
- Get link
- X
- Other Apps
ಕುರುಡನ ದೃಷ್ಟಿ- ಝೆನ್ ಕತೆ ಗುರು ಬೆನ್ಕಿ ತೀರಿಹೋಗಿದ್ದ. ಅವನಿದ್ದ ದೇವಾಲಯದ ಬಳಿಯ ಕುರುಡನೊಬ್ಬ ಗೆಳೆಯನ ಬಳಿ ಹೀಗೆ ಹೇಳಿದ:"ನಾನು ಕುರುಡ. ಮನುಷ್ಯರ ಮುಖ ನನಗೆ ಕಾಣುವುದಿಲ್ಲ. ಮನುಷ್ಯ ಎಂಥವನು ಎಂದು ಮಾತಿನ ದನಿ ಕೇಳಿಯೇ ನಾನು ತಿಳಿಯಬೇಕು. ಸಾಮಾನ್ಯವಾಗಿ ಹೀಗಾಗುತ್ತದೆ. ಯಾರಾದರೂ ಮತ್ತೊಬ್ಬರ ಸಂತೋಷ ಅಥವ ಯಶಸ್ಸನ್ನು ಅಭಿನಂದಿಸುತ್ತಿದ್ದರೆ ಅವರ ದನಿಯಲ್ಲಿ ಗುಟ್ಟಾದ ಅಸೂಯೆ ನನಗೆ ಕೇಳಿಸುತ್ತದೆ. ಏನೋ ಅನಾಹುತವೋ ಆಘಾತವೋ ಆದಾಗ ಇನ್ನೊಬ್ಬರಿಗೆ ಸಮಾಧಾನ ಹೇಳುವವರ ದನಿಯಲ್ಲಿ 'ನನಗೆ ಹೀಗಾಗಲಿಲ್ಲವಲ್ಲ' ಎಂ ಸಂತೋಷ, 'ಇವನಿಗೆ ಗೆಲುವು ಸಿಗಲಿಲ್ಲ, ನನಗೆ ಸಿಕ್ಕರೂ ಸಿಗಬಹುದು' ಎಂಬ ಗುಪ್ತ ಆಸೆ ನನಗೆ ಕೇಳಿಸುತ್ತದೆ."ಇಷ್ಟು ವರ್ಷಗಳಲ್ಲಿ ಬೆನ್ಕಿಯೊಬ್ಬ ಮಾತ್ರ ಬೇರೆ ಥರ ಇದ್ದದ್ದು ತಿಳಿಯಿತು. ಅವನು ಪೂರ ಪ್ರಾಮಾಣಿಕ. ಅವನು ಸಂತೋಷ ಎಂದಾಗ ಅವನ ದನಿಯಲ್ಲಿ ಸಂತೋಷವಲ್ಲದೆ ಬೇರೆ ಏನೂ ಇರುತ್ತಿರಲಿಲ್ಲ. ಅವನು ಅಯ್ಯೋ ಪಾಪ ಎಂದಾಗ ಅವನ ದನಿಯಲ್ಲಿ ದುಃಖವಲ್ಲದೆ ಬೇರೆ ಏನೂ ಇರುತ್ತಿರಲಿಲ್ಲ. ಪೂರ ಪೂರ ಪ್ರಾಮಾಣಿಕ ಅವನು."[ಪ್ರಾಮಾಣಿಕತೆ ಕೇವಲ ದುಡ್ಡು ಕಾಸಿಗೆ ಮಾತ್ರ ಸಂಬಂಧಿಸಿದ್ದಲ್ಲ. ಭಾವಪ್ರಾಮಾಣಿಕತೆಯೇ ಮುಖ್ಯ. ಮಾತು ಮನಸ್ಸಿಗೆ ತೆರೆಯಾಗದೆ ಮನಸ್ಸನ್ನು ಅದು ಇರುವಹಾಗೆಯೇ ತೆರೆಯಬೇಕು ಅನ್ನುವುದು ಝೆನ್]
- Get link
- X
- Other Apps
ಝೆನ್ ಕಥೆ - ಸಾಕ್ಷಾತ್ಕಾರ. ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ.ಹೆಗಲ ಮೇಲೆ ಸದಾ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಇಂಥ ತಿನಿಸು ತುಂಬಿರುತ್ತಿದ್ದವು. ಬೀದಿಮಕ್ಕಳಿಗೆ ಅವನ್ನು ಹಂಚುತ್ತ ಅವರೊಡನೆ ಆಡುತ್ತಾ ಕಾಲ ಕಳೆಯುತ್ತಿದ್ದ. ಬೀದಿ ಬೀದಿಗಳಲ್ಲಿ ಅವನ “ಶಿಶುವಿಹಾರ”ಗಳಿದ್ದವು.ಝೆನ್ ಪಂಥದ ಅನುಯಾಯಿಗಳು ಯಾರಾದರೂ ಕಂಡರೆ ಕೈ ಚಾಚಿ “ಒಂದು ಕಾಸು ಕೊಡಿ” ಎಂದು ಎಗ್ಗಿಲ್ಲದೆ ಕೇಳುತ್ತಿದ್ದ. “ದೇವಸ್ಥಾನಕ್ಕೆ ಬಂದು ಮಕ್ಕಳಿಗೆ ಪಾಠ ಹೇಳು” ಎಂದು ಯಾರಾದರೂ ಅಂದರೆ, ಮತ್ತಿನ್ನೊಮ್ಮೆ ಕೈ ಚಾಚಿ “ಕಾಸು ಕೊಡಿ” ಅನ್ನುತ್ತಿದ್ದ.ಹೀಗೇ ಒಂದು ದಿನ ತನ್ನ ಆಟದ ಕಾಯಕದಲ್ಲಿ ಅವನು ತೊಡಗಿರುವಾಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದ. “ಝೆನ್‌ನ ಮಹತ್ವವೇನು?” ಎಂದು ಹೋಟಿಯನ್ನು ಕೇಳಿದ.ಹೋಟಿ ತಟ್ಟನೆ ತನ್ನ ಹೆಗಲಮೇಲಿದ್ದ ಗಂಟನ್ನು ಕೆಳಕ್ಕಿಳಿಸಿ ಮೌನವಾ...